ಬುಧವಾರ, ಆಗಸ್ಟ್ 28, 2013

ಬುದ್ದಿಜೀವಿ ಆಗುವುದು ಹೇಗೆ ..?

ಆದರ್ಶ ಅನ್ನುವುದು ಬುದ್ದಿಜೀವಿಗಳಿಗೆ ಇರಬೇಕಾದ ಮುಖ್ಯ ಲಕ್ಷಣ , ಅದು ಹೇಗೆ ಇರಬೇಕು ಅಂದರೆ ಆನೆಗಳಿಗೆ ದಂತಗಳಿದ್ದಂತೆ ಇರಬೇಕು, ವಾಸ್ತವವಾಗಿ ಆನೆಗಳು ತಮ್ಮ ದಂತವನ್ನು ತಿನ್ನುವ ಕ್ರಿಯೆಗೆ ಬಳಸುವುದಿಲ್ಲ, ತಿನ್ನುವುದಕಾಗಿ ಬಳಸುವುದು ಬಾಯಿಯೊಳಗಿನ ಗುಪ್ತ ಹಲ್ಲುಗಳನ್ನು. ಹೊರಗಿರುವ ದಂತಗಳು ಕೇವಲ ಪ್ರದರ್ಶನಕ್ಕಾಗಿ ಮಾತ್ರ... ಹಾಗೆಯೇ ಬುದ್ದಿಜೀವಿಯಾದವನಿಗೆ ಆದರ್ಶಗಳು ಪ್ರದರ್ಶನಕ್ಕೆ ಇರಬೇಕೆ ಹೊರತು ಅಳವಡಿಸಿಕೊಳ್ಳಲು ಅಲ್ಲ...

ಉದಾರಣೆ ನೋಡುವುದಾದರೆ
೧. ನಕ್ಸಲಿಸಂ ಬೆಂಬಲಿಸುವ ಎಷ್ಟು ಜನ ಪ್ರೊಫೆಸರ್ ಗಳು ಇಂದು ನಕ್ಸಲೈಟ್ ಆಗಿ ಕಾಡು ಸೇರಿದ್ದಾರೆ ?
೨. ಮುಸ್ಲಿಮರಿಗೆ ಮನೆ ಬಾಡಿಗೆಗೆ ಸಿಗುವುದಿಲ್ಲ ಅಂತ ಹುಯಿಲೆಬ್ಬಿಸುವ ಎಷ್ಟು ಜನ ಬುದ್ದಿಜೀವಿಗಳು ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ? ಅಥವಾ ತಮ್ಮ ಮನೆಯಲ್ಲಿ ಮುಸ್ಲಿಮರಿಗೆ ಆಶ್ರಯ ಕೊಟ್ಟಿದ್ದಾರೆ ?
೩. ಸಮಾನತೆಯ ಬಗ್ಗೆ ಮಾತಾಡುವ ಎಷ್ಟು ಜನ ಬುದ್ದಿಜೀವಿಗಳು ತಮಗೆ ಸಿಕ್ಕ ಸೈಟ್ , ಅನುದಾನ ಪ್ರಶಸ್ತಿಗಳನ್ನ ಬಡವರಿಗೆ ಹಂಚಿದ್ದಾರೆ ?
೪. ಅಂತರ ಧರ್ಮ ವಿವಾಹದ ಬಗ್ಗೆ ಮಾತಾಡುವ, ಕಂಡವರ ಹೆಣ್ಣು ಮಕ್ಕಳನ್ನು ಕೇರಿಯಲ್ಲಿ ಇರುವ ದಲಿತರಿಗೆ ಮದುವೆ ಮಾಡಿಕೊಡಿ , ಮುಸ್ಲಿಮರಿಗೆ ಮದುವೆ ಮಾಡಿ  ಎಂದು ಸವಾಲೆಸೆಯುವ ಎಷ್ಟು ಜನ ಬುದ್ದಿಜೀವಿಗಳು ತಮ್ಮ ಮಕ್ಕಳನ್ನ ಕೇರಿಯಲ್ಲಿರುವ ದಲಿತರಿಗೆ ಅಥವಾ ಮುಸ್ಲಿಮರಿಗೆ ಮದುವೆ ಮಾಡಿಕೊಟ್ಟಿದ್ದಾರೆ ?
೫. ಹಿಂದೂಗಳ ಕಂದಾಚಾರಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬುದ್ದಿಜೀವಿಗಳಲ್ಲಿ ಎಷ್ಟು ಜನ ಮುಸ್ಲಿಮರ ಕಂದಾಚಾರದ ಬಗ್ಗೆ ಮಾತಾಡಿದ್ದಾರೆ... ?
೬. ಬಲಪಂಥಿಯರ ಟೀಕಿಸುವುದ ಬಿಟ್ಟು , ಬುದ್ದಿಜೀವಿಗಳ ದೃಷ್ಟಿ ಕೋನ ಏನು ಎಂದು ಯಾರಾದರು ಸ್ಪಷ್ಟಪಡಿಸಿದ್ದರಾ ? (ಕೋಮುವಾದ ವಿರೋದವೇ ಅಭಿವೃದ್ದಿ ಅಂತ ಒಬ್ಬ ಮಹಾನುಭಾವರು ಹೇಳಿದ್ದ ನೆನಪು )
ಖಂಡಿತ ಇಲ್ಲ. ಎಂದು ಕೂಡ ಬುದ್ದಿಜೀವಿಗಳು ತಮ್ಮ ಆದರ್ಶ ಪಾಲಿಸುವುದಿಲ್ಲ ಮತ್ತು ಪಾಲಿಸಬಾರದು. ಬಾರಲ್ಲಿ ಕೂತು ಬಿರಿಯಾನಿ ತಿನ್ನುತ್ತ ಬಸವಣ್ಣನ ವಚನ ಹೇಳುವವರು, ಒಬ್ಬರಿಗೂ ಅನ್ನದಾನ ಮಾಡುವ ಯೋಗ್ಯತೆ ಇಲ್ಲದೆ ಇದ್ದರು ಕೃಷ್ಣ ಮಠದ ಅನ್ನ ದಾಸೋಹ ಟೀಕೆ ಮಾಡುವ , ಚಿಲ್ಟು ಪಲ್ಟುಗಳು ಕೂಡ ಬುದ್ದಿಜೀವಿಗಳ ದಾರಿಯಲ್ಲಿ ಇರುವವರೇ.
ಬುದ್ದಿಜೀವಿಯದವನಿಗೆ ಸಮಸ್ಯೆ ಎತ್ತಿ ಹೇಳಿದರೆ ಆತನ ಕೆಲಸ ಮುಗಿದಂತೆ , ಪರಿಹಾರ ಕಂಡು ಹಿಡಿಯುವುದಲ್ಲ. ಅದಕ್ಕಾಗಿ ಮನಸ್ಸಾಕ್ಷಿ ಮಾರಬೇಕಾದರು ಹಿಂದೆ ಮುಂದೆ ನೋಡಬಾರದು.
(ಬುದ್ದಿಜೀವಿಯಾಗುವುದು ಹೇಗೆ ..? ಪುಸ್ತಕದಿಂದ )


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ