ಬುಧವಾರ, ಆಗಸ್ಟ್ 28, 2013

ಮಣಿಪಾಲ ಅತ್ಯಾಚಾರ ಪ್ರಕರಣ ಮತ್ತು ಕೆಲವು ಸಂದೇಹಗಳು

ಲೇಖಕರು : ಶ್ರೀಕಾಂತ್ ಶೆಟ್ಟಿ 

ಮಣಿಪಾಲದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.ಇದರೊಂದಿಗೆ ಕೆಲವು ಗೋಜಲು ಗೋಜಲು ನಾಟಕೀಯ ಘಟನೆಗಳು ಒಂದಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಮೊದಲು ಎಲ್ಲರ ಬೆರಳು ಯೂನಿವರ್ಸಿಟಿಯ ಕಡೆಗೆ ಬೊಟ್ಟು ಮಾಡಿದ್ದರೆ ಈಗ ಅದು ಕಾಂಗ್ರೇಸ್ ಕಡೆಗೆ ತಿರುಗಿದೆ.ಈ ಕೆಳಗಿನ ಕೆಲವು ಪ್ರಶ್ನೆಗಳು ನಿಮ್ಮನ್ನೂ ಕಾಡಬಹುದು
೧ ಪ್ರಕರಣ ದಾಖಲಾಗದಂತೆ ಯುವತಿಯ ಮೇಲೆ ಒತ್ತಡ ಹೇರಿದವರು ಯಾರು?
೨ ಯುವತಿಯ ಮೇಲೆ ಅತ್ಯಾಚಾರವಾಗಿಲ್ಲ ಕೇವಲ ಅಪಹರಿಸಿದ್ದು ಮಾತ್ರ ಎಂದು ರಿಪೋರ್ಟ್ ತಿರುಚುವ ಯತ್ನ ಯಾಕೆ ನಡೆಯಿತು?
೩ ಅತ್ಯಾಚಾರ ನಡೆದ ಮರುದಿನವೇ ಈ ಕಾಮುಕರ ಸುಳಿವು ಪೋಲೀಸರಿಗೆ ತಿಳಿದಿತ್ತು ಎನ್ನಲಾಗಿದೆ.ಮತ್ತೆ ಏಕೆ ಬಂದಿಸಲಿಲ್ಲ?
ಪ್ರಮುಖ ಆರೋಪಿ ಯೋಗಿಶ್ ಹಾರ್ಡ್ ಕೋರ್ ಕಾಂಗ್ರೇಸಿಗ ಎನ್ನುವುದು ಇಡೀ ಊರಿಗೆ ಗೊತ್ತಿರುವ ವಿಚಾರ ಮತ್ತೆ ಬಜರಂಗದಳದ ಹೆಸರು ತೇಲಿ ಬಿಟ್ಟವರು ಯಾರು?
ಆರೋಪಿಗಳಲ್ಲಿ ಒಬ್ಬನಾದ ಹರಿಪ್ರಸಾದ್ ಐದು ವರ್ಷದ ಹಿಂದೆ ಬಜರಂಗದಳದಲ್ಲಿದ್ದು ಯೋಗೀಶನ ಸಹವಾಸದಿಂದ ಕಾಂಗ್ರೇಸಿಗೆ ಸೇರಿದ್ದ ಮೊನ್ನೆಯವರೆಗೆ ಶಾಸಕರಿಗೆ ಶುಭಕೋರಿ ಹಾಕಲಾಗಿದ್ದ ಬ್ಯಾನರ್ ಒಂದರಲ್ಲಿ ಇವರಿಬ್ಬರ ಹೆಸರು ರರಾಜಿಸುತಿತ್ತು.ಘಟನೆ ನಡೆದ ಎರಡೇ ದಿನದಲ್ಲಿ ಆ ಬ್ಯಾನರ್ ಕಾಣೆಯಾಯಿತು.ಕಾರಣ?
ಯೋಗೀಶ್ ನೇರವಾಗಿ ಪೋಲೀಸರಿಗೆ ಶರಣಾಗದೆ ಪ್ರಮೋದ್ ಮದ್ವರಾಜ್ ಮೊರೆಹೋಗಿದ್ದು ಯಾತಕ್ಕಾಗಿ? ಆತ ಬಜರಂಗದಳದವನಾದರೆ ಪ್ರಮೋದ್ ಬಜರಂಗದಳದ ಸಂಚಲಕನೇ?
ಪೋಲೀಸರು ಬಿಡಿಸಿದ ಓತಿಕ್ಯಾತದ ಮುಸುಡಿನ ರೇಖಾಚಿತ್ರದ ಕಥೆ ಏನಯಿತು? ಇದೆಲ್ಲ ಜನರನ್ನು ದಿಕ್ಕುತಪ್ಪಿಸುವ ಯತ್ನವಲ್ಲವೇ?
ಒಬ್ಬರೌಡಿ ಶೀಟರ್ ಪೋಲಿಸರಿಗೆ ವಿಷಕುಡಿದು ಫೋನ್ ಮಾಡಿದಉದಾಹರಣೆ ಇದೆಯೇ? ಇದ್ದರೂ ಆತ ತನ್ನೊಂದಿಗೆ ಇದ್ದವರ ಮಾಹಿತಿಯನ್ನು ಹೇಳಿ ಸಾಯುವಷ್ಟು ಮೂರ್ಖನೇ?
ಇಡೀ ಊರಲ್ಲಿ ಸಾಲುಸಾಲು ಪ್ರತಿಭಟನೆ ತನಿಖೆಗಳು ನಡೆಯುತಿದ್ದರೂ ಅತ್ಯಾಚಾರಿಗಳು ರಾಜಾರೋಷವಾಗಿ ಓಡಾಡಿಕೊಂಡಿರಲು ಸಾಧ್ಯವೇ ?
ಓಡಾಡುತಿದ್ದರೂ ಅದು ಯಾರ ಧೈರ್ಯದಲ್ಲಿ?
ಇನ್ನೊಬ್ಬ ಆರೋಪಿ ಆನಂದ ಗೋವಾಗೆ ಪರಾರಿಯಾಗಿದ್ದವ ಬಡಗುಬೆಟ್ಟಿನಲ್ಲಿ ಪತ್ತೆಯಾಗಿದ್ದು ಹೇಗೆ? ಅದುಕೂಡ ಹಗ್ಗಹಾಕಿದ ಸ್ಥಿತಿಯಲ್ಲಿ?

ಮೂರನೇ ಆರೋಪಿ ಆನಂದನ ಕಥೆ ಬಾರಿ ಕಾಮೇಡಿ ಇದೆ.. ಆತ ಮನೆಯಲ್ಲಿ ಹಗ್ಗ ಹಾಕಿಕೊಂಡನಂತೆ... ಹಗ್ಗ ತುಂಡಾಗಿ ಬಿದ್ದನಂತೆ... ಮನೆಯವರು ಹೊರಗೆ ಓಡಿಸಿದರಂತೆ..... ಗದ್ದೆಯ ಪುಣಿಯಲ್ಲಿ ಓಡುವಾಗ ಊರಿನವರು ಹಿಡಿದರಂತೆ.. . ತೋಟದಲ್ಲಿ ಕಟ್ಟಿ ಹಾಕಿದ ನಾಯಿ ಹಗ್ಗ ತುಂಡು ಮಾಡಿಕೊಂಡು ಓಡಿದಾಗ ನಾವು ಹಿಂಬಾಲಿಸಿ ಹಗ್ಗ ತುಳಿದು ಹಿಡಿಯುತ್ತೇವಲ್ಲ ಹಾಗಿರಬೇಕು...
ಈಗ ನಾವುಈ ಆರೋಪಿಗಳನ್ನು ಹಿಡಿದುಕೊಟ್ಟಿದ್ದಾನೆ ಎನ್ನಲಾದ ಸುಖೇಶನ ಕಡೆಗೆ ಸ್ವಲ್ಪ ಗಮನಿಸಬೇಕು.ಈತ ಉದಯವಾಣಿಗೆ ನೀಡಿದ ಹೇಳಿಕೆಯಲ್ಲಿ ನಮ್ಮದೇ ಸರಕಾರ ಇದೆ ನಾನು ಎಲ್ಲಾ ಮಾತನಾಡಿದ್ದೇನೆ ಜಾಮೀನು ಮಾಡಿ ಕೊಡೋಣ ಸೆರೆಂಡರ್ ಆಗು ಎಂದಿದ್ದಾನೆ.ಮೊದಲೇ ರೌಡಿಶೀಟರಾಗಿರುವ ಯೋಗೀಶನಿಗೆ ಇಂಥ ಇನ್ನೆಷ್ಟು ಪ್ರಕರಣಗಳಲ್ಲಿ ಜಾಮೀನು ಮಾಡಿಕೊಡಲಾಗಿದೆ?
ತಮ್ಮ ಕಾರ್ಯಕರ್ತ ಈ ಪ್ರಕರಣ ಬೇಧಿಸಲು ಸಹಕರಿಸಿದ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿರುವ ಕಾಂಗ್ರೇಸಿಗರು ಈ ಪ್ರಕರಣ ಆಗಿರುವುದೂ ನಿಮ್ಮದೇ ಕಾರ್ಯಕರ್ತನಿಂದ ಎನ್ನುವುದನ್ನು ಯಾಕೆ ಮರೆತಿದ್ದೀರಿ ?
ಸುಖೇಶನ ಬಗ್ಗೆ ಹೆಮ್ಮೆ ಇರುವ ನಿಮಗೆ ಯೋಗೀಶ ಆನಂದ ಹರೀಶರ ಬಗ್ಗೆ ವಾಕರಿಕೆ ಬರುತ್ತಿಲ್ಲವೇ..?ಆಹುಡುಗಿಯ ತಲೆಗೆ ಕಲ್ಲುಹೊತ್ತು ಹಾಕೋಣ ಎಂದು ಇತರರಿಗೆ ಹುರಿದುಂಬಿಸಿದ ಯೋಗಿಶ ನಿಮ್ಮಕಾರ್ಯಕರ್ತ ಅನ್ನಲು ನಾಚಿಗೆಯಾಗುವುದಿಲ್ಲವೇ?

ಇನ್ನು ಕಾಂಗ್ರೇಸಿಗರ ಹೇಲನ್ನು ಪರಮ ಪ್ರಸಾದ ಎಂದು ತಿಂದು ತೇಗಿ ಜೀವನವನ್ನು ಪಾವನ ಮಾಡಿಕೊಂಡಿರುವ ಕರಾವಳಿಯ ಒಬ್ಬ ಶೋಕಿವಾಲ ಪತ್ರಕರ್ತನೊಬ್ಬ ಗೋಳಿಯಂಗಡಿಯ ಬಜರಂಗದಳದ ಕಾರ್ಯಕರ್ತ ಗಣೇಶ್ ಕುಮರ್ ಎಂಬವರ ಫೋಟೋಗೆ ಮಾರ್ಕ್ ಮಾಡಿ ಇವ ಯೋಗೀಶನ ಅಣ್ಣ ಎಂದು ಪ್ರಚಾರ ಮಾಡಿ ಈಗ ಬಾಲಸುಟ್ಟ ಮಂಗನ ರೀತಿ ಮುಖಮರೆಸಿಕೊಂಡಿದ್ದಾನೆ.ಅವನ ಬೆನ್ನಲ್ಲೇ ವಾರ್ತಾಬ್ಯಾರತಿಯ ಬಿಎಮ್ ಬಶೀರ್ ಎಂಬವನೂ ಇದೇ ರೀತಿಯ ಪ್ರಚಾರ ಮಾಡಲು ಹೋಗಿ ಹಳ್ಳಕ್ಕೆ ಬಿದ್ದಿದ್ದಾನೆ. ಎಷ್ಟಾದರೂ ಜನ ಬುದ್ದಿವಂತರಿದ್ದಾರೆ.ಸರಿತಪ್ಪುಗಳ ಅರಿವು ಅವರಿಗಿದೆ ಮಣಿಪಾಲ ಅತ್ಯಾಚಾರಪ್ರಕರಣವನ್ನು ವ್ಯವಸ್ತಿತವಾಗಿ ಮುಚ್ಚಿಹಾಕುವ ಸಂಚನ್ನು ಕಾಂಗ್ರೇಸಿಗರು ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.. ಈ ಬಗ್ಗೆ ಬಜರಂಗದಳ ಪ್ರತಿಭಟನೆ ಮಾಡಿತು ಎಂಬ ಒಂದೇ ಕಾರಣಕ್ಕಾಗಿ ಬಜರಂಗದಳದ ಬಗ್ಗೆ ಅಪಪ್ರಚಾರಮಾಡಲು ತಮ್ಮ ಕುಂಡೆಹರುಕರನ್ನು ಛೂ ಬಿಟ್ಟಿತು ಆದರೆ ಈಬಾಡಿಗೆಬಂಟರು ಲೆಕ್ಕಕ್ಕಿಂತ ಜಾಸ್ತಿ ಹರಿದುಕೊಂಡು ಪ್ಲಾನ್ ಹಿಟ್ ಆಗೋದಿಕ್ಕೆ ಮುಂಚೆನೇ ಠುಸ್ಸ್ ಆಗಿಬಿಟ್ರು...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ