ಬುಧವಾರ, ಆಗಸ್ಟ್ 28, 2013

ಬುದ್ದಿಜೀವಿ ಆಗುವುದು ಹೇಗೆ ....? ಪುಸ್ತಕದ ಆಯ್ದ ಭಾಗಗಳು

ಬುದ್ದಿಜೀವಿಯಾದವರು ಯಾವಾಗಲು ಸಮಚಿತ್ತದಿಂದ ಇರಬೇಕು... ನಮ್ಮೊಡನೆ ಯಾರು ವಾದ ಮಾಡುತ್ತಿದ್ದರೋ ಅವರ ಮಾತನ್ನು ಕೇಳುವುದ್ದಕಿಂತ ಅವರಿಗೆ ಯಾವ ಪ್ರಶ್ನೆ ಕೇಳಬೇಕು ಅನ್ನುವುದು ನಮ್ಮ ತಲೆಯಲ್ಲಿ ಓಡುತ್ತಿರಬೇಕು...
ಇನ್ನು ಸಂದರ್ಭವನ್ನು ಹೇಗೆ ಉಪಯೋಗಿಸಬೇಕು ಅನ್ನುವುದನ್ನು ಉದಾಹರಣೆ ಸಮೇತ ವಿವರಿಸುತ್ತೇನೆ...

 ಪ್ರಕರಣ ೧ : ಮನುಸ್ಮೃತಿಯೇ  ಜಾತಿ ವ್ಯವಸ್ತೆಗೆ  ಕಾರಣ ಅನ್ನುವುದು ನಮ್ಮ ನಿಲುವು ಅಂತ ಇಟ್ಟುಕೊಳ್ಳಿ.... ನಮ್ಮ ಎದುರಾಳಿ ಅದಕ್ಕೆ ಪುರಾವೆ ಕೇಳುತ್ತಾರೆ.  ಆಗ ನಾವು “ ಪುರಾವೆ ಕೇಳಲು ಇದು ನ್ಯಾಯಾಲಯ ಅಲ್ಲ ಮತ್ತು ನೀವು ವಕೀಲರು ಅಲ್ಲ,  ನಮ್ಮ ಸುತ್ತಮುತ್ತ ನಡೆದಿದ್ದು ನೋಡಿ ಅರಿತುಕೊಳ್ಳಿ ಎಂದು ತಾಕಿತು ಮಾಡಬೇಕು “
ಪ್ರಕರಣ ೨ : ನಿಮ್ಮ ಎದುರಾಳಿ ಟಿಪ್ಪು ಸುಲ್ತಾನ್ ಒಬ್ಬ ಮತಾಂದ ಎಂದು ವಾದ ಮಾಡುತ್ತಿದ್ದಾರೆ ಅಂದು ಕೊಳ್ಳಿ. ಆಗ ನಿಮ್ಮ ಉತ್ತರ “ ಹಾಗನ್ನಲು ನಿಮ್ಮ ಬಳಿ ಪುರಾವೆ ಏನು ಇದೆ ಅನ್ನುವುದರಿಂದ ಶುರುವಾಗಬೇಕು, ಮತ್ತೆ ನಿಮ್ಮ ಎದುರಾಳಿ ಕೊಡುವ ಎಲ್ಲ  ಪುರಾವೆಗಳನ್ನು ನೀವು ಅಲ್ಲಗೆಳಯಬೇಕು, ನಾಶಗೊಂಡ ದೇವಸ್ಥಾನ , ಪೆಟ್ಟು ತಿಂದ ವಿಗ್ರಹಗಳು, ಸತ್ತ ಪೂರ್ವಜರು,  ಕೊನೆಗೆ ಟಿಪ್ಪು ಕತ್ತಿಯ ಮೇಲಿದ್ದ ಕಾಫಿರರ ಕೊಲ್ಲಬೇಕು ಅನ್ನೋ ವಾಕ್ಯ ಉಹೂಂ....  ಇದ್ಯಾವುದು ಪುರಾವೆಯೇ ಅಲ್ಲ ಅಂತ ಸಾರಬೇಕು. (ಪುರಾವೆ ಕೇಳುವುದು ನ್ಯಾಯಾಲಯದಲ್ಲಿ ಅನ್ನೋ ನಿಮ್ಮದೇ ವಾಕ್ಯ ನಿಮಗೆ ಮರೆತು ಹೋಗಬೇಕು ). ನಿಮ್ಮ ಎದುರಾಳಿ ತೀರ ಒತ್ತಾಯ ಮಾಡಿದರೆ “ ಟಿಪ್ಪು ಸುಲ್ತಾನ್ ನ ಮತಾಂದ ಅನ್ನುವವರು ಕೋಮುವಾದಿಗಳು “ ಅನ್ನೋ ಮೂಲಕ ಚರ್ಚೆಯನ್ನು ಯಾವ ಕ್ಷಣದಲ್ಲಿ ಬೇಕಾದರೂ ಬರಖಾಸ್ತು ಮಾಡಬಹುದು.... ( ಇದು ಬುದ್ದಿಜೀವಿಗಳಿಗೆ ಮಾತ್ರ ಇರುವ ಅವಕಾಶ, ಎದುರಾಳಿಗೆ ಇಂತಹ ಅವಕಾಶ ಇರುವುದಿಲ್ಲ )
ಇಲ್ಲಿ ಪುರಾವೆ ಅನ್ನೋದು, ನಮ್ಮ ಅನುಕೂಲಕ್ಕೆ , ನಮ್ಮ ದೃಷ್ಟಿಗೆ, ನಮ್ಮ ಅಭಿಪ್ರಾಯಕ್ಕೆ  ಪೂರಕವಾಗಿದ್ದರೆ ಮಾತ್ರ ಅದು  ಅಗತ್ಯ ಇದೆಯೋ ಇಲ್ಲವೋ ಅನ್ನುವುದು ನಿರ್ಧಾರವಾಗುತ್ತದೆ.... ಮೇಲಿನ ಎರಡು ಪ್ರಕರಣ ಉದಾರಣೆ ಮಾತ್ರ ಇಂತಹ ಸಾವಿರಾರು ಪ್ರಕರಣಗಳು ಸಿಗುತ್ತವೆ ಅವುಗಳ ಬಗ್ಗೆ ಮುಂದೆ ಚರ್ಚಿಸಲಾಗುವುದು....
ಇದಕ್ಕಿಂತಲೂ ಉದ್ದಾತ ಚಿಂತನೆ ಅಂದರೆ ಹಿಂದೂ ಮುಸ್ಲಿಂ ಕೋಮು ಗಲಭೆ ನಿಲ್ಲಬೇಕೆಂದರೆ  ಮೊದಲು  ಹಿಂದೂ ಧರ್ಮ ನಾಶವಾಗಬೇಕು ಅಂತ ..... ಹಿಂದೂ ಧರ್ಮವೇ ಯಾಕೆ ನಾಶವಾಗಬೇಕು ಮುಸ್ಲಿಂ ಧರ್ಮ ನಾಶ ಆದರೆ ಕೋಮುಗಲಭೆ ನಿಲ್ಲುದಿಲ್ಲವೇ  ಎಂದು ನಿಮಗೇನಾದರೂ ಅನ್ನಿಸಿದರೆ..........
ನೀವಿನ್ನು ಬುದ್ದಿಜೀವಿ ಆಗಿಲ್ಲ ಅಂತ ಅರ್ಥ ....
(ಬುದ್ದಿಜೀವಿ ಆಗುವುದು ಹೇಗೆ ....?  ಪುಸ್ತಕದ ಆಯ್ದ ಭಾಗ )


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ