ಬುಧವಾರ, ಆಗಸ್ಟ್ 28, 2013

ಲಂಕೇಶ್ ಪ್ರಶಸ್ತಿ ಮತ್ತು ನನ್ನ ಅಭಿಪ್ರಾಯ

ಬಷೀರ್ ಬಿ ಎಂ ಅವರಿಗೆ "ಲಂಕೇಶ್" ಪ್ರಶಸ್ತಿ ಬಂದಿದೆ ಅಂದಾಗ ಬಹುತೇಕ ನನ್ನ ಸ್ನೇಹಿತರಂತೆ ಒಮ್ಮೆ ಗಾಬರಿ ಆಯ್ತು ... ಅವರ ಪ್ರಳಯಾಂತಕ ಪತ್ರಿಕೆ ಸೇವೆಗೆ ಪ್ರಶಸ್ತಿ ದೊರೆಯುವಂತೆ ಆಯಿತೆ ಎಂದು ಒಮ್ಮೆ ಮಂಡೆ ಬಿಸಿ ಆಯ್ತು. ನಂತರ ಅವರಿಂದಲೇ ಗೊತ್ತಾಯ್ತು ಪ್ರಶಸ್ತಿ ಬಂದಿದ್ದು ಅವರ ಹನಿ ಕಥಾ ಸಂಕಲನ " ಅಂಗೈಯಲ್ಲೇ ಆಕಾಶ " ಕ್ಕೆ ಎಂದು ... ನಿಜಕ್ಕೂ ಇದು ನನಗೆ ಖುಷಿ ಮತ್ತು ಸಮಾಧಾನ ಎರಡು ತಂದುಕೊಟ್ಟ ಅಪರೂಪದ ಸಂದರ್ಭ... ಯಾರೇ ಏನೇ ಹೇಳಲಿ ಅವರೊಬ್ಬ ಅದ್ಬುತ ಕವಿ ಮತ್ತು ಕಥೆಗಾರ ಹಾಗೆಯೇ ಅಷ್ಟೇ ಕೆಟ್ಟ ಪತ್ರಕರ್ತ. ಈ ಪ್ರಪಂಚದ ಎಲ್ಲ ಸಮಸ್ಯೆಗಳಿಗೆ ಹಿಂದೂ ಸಂಘಟನೆಗಳೇ ಕಾರಣ ಅನ್ನುವುದು ಅವರ ಮೂಲಭೂತ ನಂಬಿಕೆ. ವಿಪರ್ಯಾಸ ಏನೆಂದರೆ ಅವರ ಕೆಟ್ಟ ವಿವಾದಿತ ಲೇಖನಗಳು ತೆಗೆದುಕೊಳ್ಳುವ ಪ್ರಚಾರದ ಅರ್ಧದಷ್ಟು ಪ್ರಚಾರ ಅವರ ಅತ್ಯುತ್ತಮ ಕವನ / ಕಥೆಗಳು ತೆಗೆದುಕೊಳ್ಳುವುದಿಲ್ಲ ... ಕನ್ನಡದ ಮಟ್ಟಿಗೆ ಅತಿ ವಿರಳ ಅನ್ನಿಸುವ ಮುಸ್ಲಿಂ ಚಿಂತಕರ ಪೈಕಿ ಒಬ್ಬರು ಅನ್ನಿಸಿಕೊಳ್ಳುವ ಯೋಗ್ಯತೆ ಇರುವ ಬಷೀರ್ ರು ಕಸಬ್, ಅಫ್ಜಲ್ ಅಂತಹ ಅಡ್ನಾಡಿಗಳನ್ನು ಸ್ವಧರ್ಮಿಯರು ಅನ್ನುವ ಒಂದೇ ಕಾರಣಕ್ಕೆ ಬೆಂಬಲಿಸುತ್ತಾರೆ ಮತ್ತು ಆ ಮೂಲಕ ತಮ್ಮನ್ನು ತಾವೇ ಅಪಮೌಲ್ಯ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆ ಉಲ್ಲೇಖಿಸ ಬೇಕೆಂದರೆ ಅವರ ವಕ್ ಭೂಮಿ ಅತಿಕ್ರಮಣದ ಬಗ್ಗೆ ಬರೆದ ಸಂಪಾದಕಿಯದ ಬಗ್ಗೆ ಚರ್ಚೆಯೇ ನಡೆಯಲಿಲ್ಲ. ಜನಪರ ಹೋರಾಟ ನಡೆಯಬೇಕು ಅಂತ ಕರೆ ಕೊಟ್ಟರು ಯಾರು ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದು ಮುಸ್ಲಿಂ ಸಮಾಜ ತನ್ನದೇ ಸಮಸ್ಯೆಗಳಿಗೆ ಪ್ರತಿಕ್ರಿಯಿಸುತ್ತಿರುವ ರೀತಿ. ಅದೇ ಸಂಪಾದಕೀಯ ಏನಾದರು ಮೋದಿ ಬಗ್ಗೆ ಆಗಲಿ ಅಥವಾ ಅಡ್ವಾಣಿ ಬಗ್ಗೆ ಬರೆದಿದ್ದರೆ ಅದರ ಕಥೆಯೇ ಬೇರೆ ಆಗುತಿತ್ತು...
ನನ್ನ ಪ್ರಕಾರ ಬಷೀರ್ ಅವರ ಚಿಂತನಾ ಶಕ್ತಿ ಟಿಪ್ಪು ಸುಲ್ತಾನನ ಖಡ್ಗಕ್ಕಿಂತಲೂ ಹರಿತವಾದದ್ದು ಆದರೆ ಅದನ್ನು ಅವರು ಆಲುಗಡ್ಡೆ ಕತ್ತರಿಸಲು ಬಳಸುತ್ತಿದ್ದಾರೆ ಅನ್ನುವುದೇ ವಿಪರ್ಯಾಸ. ಇನ್ನು ಮುಂದೆಯಾದರೂ ಅವರು ಅದನ್ನು ಸರಿಯಾದ ರೀತಿಯಲ್ಲಿ ಬಳಸಲಿ ಅಂತ ಆಶಿಸುತ್ತೇನೆ .... ಮತ್ತು ಅವರು ಪಡೆದ ಪ್ರಶಸ್ತಿಗೆ ಅಭಿನಂದನೆಗಳು ...
ಕನ್ನಡಕ್ಕೆ ಮತ್ತೊಬ್ಬ ನಿಸಾರ್ ಅಹಮದ್ ರ ಅಗತ್ಯವಿದೆ, ಅದರನ್ನ ಅವರು ತುಂಬಲಿ ಅಂತ ಆಶಿಸುತ್ತೇನೆ

3 ಕಾಮೆಂಟ್‌ಗಳು: