ಗುರುವಾರ, ಡಿಸೆಂಬರ್ 5, 2013

ಸೌಹಾರ್ದಗಿತ್ತಿ ಮತ್ತು ಲಿಪ್ ಸ್ಟಿಕ್


ಅದು ಯಾರದೋ ಮನೆಯ ಅಂಗಳ.... ಅಂಗಳದ ಮಧ್ಯ ಏಟು ತಿನ್ನುತ್ತ ಬಿದ್ದಿರುವ ಒಬ್ಬ ವ್ಯಕ್ತಿ , ಆತನ ಹಣೆಯ ಮೇಲೆ “ ಸೆಕ್ಯುಲರ್ ಪತ್ರಕರ್ತ” ಅಂತ ಬರೆದಿದೆ .

ಆತನ ಸುತ್ತ ಆತನಿಗೆ ಥಳಿಸುತ್ತಿರೋ ೩೦ – ೪೦ ಯುವಕರು , ಅವರೆಲ್ಲರ ಹಣೆಯ ಮೇಲೆ “ಅಮಾಯಕ ಸೆಕ್ಯುಲರ್ ಯುವಕರು” ಅಂತ ಬರೆದಿದೆ.... ಅಮಾಯಕ  ಯುವಕರ ಥಳಿತಕ್ಕೆ, ಸೆಕ್ಯುಲರ್ ಪತ್ರಕರ್ತ ಹೈರಾಣಾಗಿ ಹೋಗಿದ್ದಾನೆ . ಆತನ ಮುಖದ ತುಂಬೆಲ್ಲ ರಕ್ತದ ಛಾಯೆ , ಮೂಗು , ಬಾಯಲ್ಲಿ ಧಾರಾಕಾರ ರಕ್ತ ಸುರಿಯುತ್ತಿದೆ. ಆತ ಅಕ್ಷರಶಃ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. 
ಅನತಿ ದೂರದಲ್ಲಿ ಒಬ್ಬಳು ಮಹಿಳೆ , ಇವರತ್ತ ಕೂಗುತ್ತಿದ್ದಾಳೆ. ಅವಳ ಹಣೆಯ ಮೇಲೆ “ಸೌಹಾರ್ದಗಿತ್ತಿ” ಅಂತ ಬರೆದಿದೆ... ಆಕೆ ಕೂಗುತ್ತಿರುವುದು ಪತ್ರಕರ್ತನನ್ನ ಉದ್ದೇಶಿಸಿ, ಆಕೆ ಚೀರುತ್ತಿದ್ದಾಳೆ “ ನಿನ್ನ ಮೇಲೆ ದಾಳಿ ಮಾಡಿರುವುದು ತಾಲಿಬಾಲಿನಿಯರಲ್ಲ , ಪಾಕಿಸ್ತಾನಿಯರಲ್ಲ, ಅವರೆಲ್ಲ ಭಾರತೀಯರು, ಸೆಕ್ಯುಲರ್ಗಳು , ಅಮಾಯಕರು .... ಯಾವುದೇ ಕಾರಣಕ್ಕೂ ಪ್ರತಿರೋಧ ತೋರಬೇಡ .... ಪ್ರತಿರೋಧ ತೋರಿದರೆ ನೀನು ಕೋಮುವಾದಿ ಆಗಿಬಿಡುತ್ತಿಯ.... ನೋವಾದರೂ , ಅವಮಾನ ಆದರು ಸಹಿಸಿಕೋ ... ಆದರೆ ಪ್ರತಿರೋಧ ತೋರಿ ಕೋಮುವಾದಿ ಆಗಬೇಡ “ ಎಂದು ಚೀರಿ ಚೀರಿ ಹೇಳುತ್ತಿದ್ದಳು .... 
ಸೌಹರ್ದಗಿತ್ತಿಯ ಮಾತು ಪತ್ರಕರ್ತನಿಗೆ ಎಷ್ಟು ಕೇಳಿತೋ, ಏನೋ ... ಆತ ನೋವಿನಿಂದ ಪ್ರಜ್ಞೆ ಕಳೆದುಕೊಂಡ.

ಥಳಿಸಿ ಥಳಿಸಿ ಸುಸ್ತಾದ ಅಮಾಯಕ ಯುವಕರು ಸೌಹರ್ದಗಿತ್ತಿಯ ಬಳಿ ಸಾರಿದರು ...
ಅಮಾಯಕ ಯುವಕರಲ್ಲೊಬ್ಬ ಸೌಹರ್ದಗಿತ್ತಿಯ ನೋಡಿ “ ನೀವು ತುಂಬಾ ಚೆಂದ ಕಾಣುತ್ತಿದ್ದಿರ ಮೇಡಂ” ಎಂದ... ಸೌಹರ್ದಗಿತ್ತಿಗೆ  ಅಮಾಯಕ ಯುವಕರ ಮೇಲಿದ್ದ ಪ್ರೀತಿ ಒಂದು ಇಂಚು ಜಾಸ್ತಿ ಆಯ್ತು.
ಮುಂದುವರಿದ ಯುವಕ “ ಮೇಡಂ ನಿಮ್ಮ ಡ್ರೆಸ್ಸ್ ಗೆ ಮತ್ತು ಲಿಪ್ ಸ್ಟಿಕ್ ಸರಿ ಹೊಂದುತ್ತಿಲ್ಲ ಅಂದ.... ಈಗ ಸೌಹರ್ದಗಿತ್ತಿಯ ಮುಖ ಕಪ್ಪಿಟ್ಟಿತು , ಒಂದು ವಿಷಾದದ ಛಾಯೆ ಮುಖ ಆವರಿಸಿತು... ಅಷ್ಟು ಹೊತ್ತು ಆಕೆಗಿರದಿದ್ದ ಕಳವಳ ಈಗ ಶುರುವಾಗಿತ್ತು. ಈ ಡ್ರೆಸ್ಸ್ ಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಚೆನ್ನಾಗಿ ಹೊಂದುತ್ತೆ ಅಂದ ಅದೇ ಅಮಾಯಕ. 

ಸೌಹಾರ್ದಗಿತ್ತಿ ತನ್ನ ಬ್ಯಾಗ್ ಎಲ್ಲ ಹುಡುಕಿದಳು ... ಇಲ್ಲ ಕೆಂಪು ಬಣ್ಣದ ಲಿಪ್ ಸ್ಟಿಕ್ ತಂದಿಲ್ಲ !!!!!!.... ಛೆ ಎಂತ ತಪ್ಪು ನಡೆದು ಹೋಯಿತು ಅಂದು ಕೊಂಡವಳ ದೃಷ್ಟಿ ಏಟು ತಿಂದು ಅರೆಶವ ಆಗಿದ್ದ ಪತ್ರಕರ್ತನ ಕಡೆ ಹೋಯಿತು....
ಸೀದಾ ಪರ್ತಕರ್ತನ ಬಳಿ ನಡೆದವಳೇ , ಆತನ ಮುಖದಿಂದ ಇಳಿಯುತ್ತಿದ್ದ ರಕ್ತವ ತನ್ನ ಬೆರಳಿನಿಂದ ಬಳಿದು ತುಟಿಗೆ ಸವರಿಕೊಂಡು , ಅಮಾಯಕ ಯುವಕರ ಕಡೆ ತಿರುಗಿ ಕೇಳಿದಳು “ ಈಗ ಹೇಗಿದೆ ...? “

“ಅದ್ಭುತ “ ಅನ್ನೋ ಉತ್ತರ ಬಂತು ಅಮಾಯಕ ಯುವಕರ ಕಡೆಯಿಂದ ....

ಮಂಗಳವಾರ, ನವೆಂಬರ್ 26, 2013

ಭಯೋತ್ಪಾದಕಿ ಆಯಿಶಾ ಬಾನು !? ಮತ್ತು ನಸೂ ಎಂಬ ಪತ್ರಕರ್ತ

ಪತ್ರಕರ್ತನಿಗೆ ಕಾಮನ್ ಸೆನ್ಸ್ ಇರಬೇಕ ? ಎಂದು ಯಾರದರು ಪ್ರಶ್ನಿಸಿದರೆ ನನ್ನ ಉತ್ತರ, ಖಂಡಿತ ಅಗತ್ಯ ಇಲ್ಲ . ಕಾನೂನಿನ ಪರಿಜ್ಞಾನವೇ ಇಲ್ಲದ ಎಷ್ಟೋ ಜನ ಇಂದು ಪತ್ರಕರ್ತರು ಅನ್ನಿಸಿಕೊಂಡಿದ್ದಾರೆ . ಉದಾರಣೆ ಬೇಕಾ  ? ದಯವಿಟ್ಟು ಭೇಟಿ ಮಾಡಿ , ಮಂಗಳೂರಿನ ಕ್ಯಾತ ಪತ್ರಕರ್ತ ನಸೂ ಅಲಿಯಾಸ್ ನಸ  (ಇದರ ಅರ್ಥ ಕೊನೆಯಲ್ಲಿ ಹೇಳ್ತಿನಿ )... ಈ ಮನುಷ್ಯನ ಹಳವಂಡ ಏನೇ ಇರಲಿ , ಈಗ ವಿಷಯಕ್ಕೆ ಬರೋಣ .


 ಭಯೋತ್ಪಾದಕಿ ಆಯಿಶಾ ಬಾನು !? ಸುದ್ದಿಯ ಇನ್ನೊಂದು ಮುಖ    ಅನ್ನೋ ಲೇಖನ ವರ್ತಮಾನದಲ್ಲಿ ಪ್ರಕಟವಾಗುತ್ತೆ , ಬರೆದವರು ನಮ್ಮ ಪ್ರೀತಿಯ ನಸ.
ಇಡಿ ಲೇಖನ ಸುತ್ತಿದ್ದು ಅಯೆಶು ಬಾನುಳ ಇತಿಹಾಸ ಮತ್ತು ೨ ಮಕ್ಕಳು ಕೊಟ್ಟು ಪರಾರಿ ಆದ ಪತಿರಾಯ ಮತ್ತು ಅವಳನ್ನು ನೋಡಿಕೊಂಡ DYFI ಸಂಘಟನೆ ಸುತ್ತ... ಅಪರೂಪಕ್ಕೆ ಸಂಘಟನೆ ಒಂದು ಒಳ್ಳೆ ಕೆಲಸ ಮಾಡಿದೆ ಶ್ಲಾಘಿಸೋಣ ಆದರೆ ಲೇಖನದ ಕೊನೆಯ ಪ್ಯಾರ ಇದೆಯಲ್ಲ , ಅದು ಸುಳ್ಳುಗಳ ಸಂತೆ.
ಪಾಪ ಬಡ ದಂಪತಿಗಳು ಹುಂಡಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರಂತೆ 
 ಹುಂಡಿ ವ್ಯವಹಾರ ಅನ್ನೋದು ಸಂಪೂರ್ಣ ವಿಶ್ವಾಸದ ಮೇಲೆ ನಡೆಯೋ ದಂದೆ . ಎಲ್ಲೋ ಕೊಟ್ಟ ಇನ್ನೆಲ್ಲೋ ತಲುಪುತ್ತೆ ಅಂದರೆ ಅದರ ನೆಟ್ವರ್ಕ್ ಬಗ್ಗೆ ಯೋಚಿಸಿ ? ಸುಖಾ  ಸುಮ್ಮನೆ ಯಾರು ಯಾರು ಕೈಗೂ ಹಣ ಕೊಡುವುದಿಲ್ಲ ಅಲ್ಲವೇ ? ಹುಂಡಿ ವ್ಯವಹಾರ ಮಾಡಲು ಆಯೇಶ ಮತ್ತು ಆಕೆ ಪತಿಗೆ ಇದ್ದ ಯೋಗ್ಯತೆ ಏನು ? ಇರಲು ಒಂದು ಮನೆಯು ಇಲ್ಲದ ಆಕೆಗೆ ಕೋಟಿ ಕೋಟಿ ಹಣ ಹಂಚಲು ಕೊಡುತ್ತಾರೆ ಎಂದರೆ ನಂಬಲು ಸಾದ್ಯವೇ ?
ಇರಲಿ ಕೊಟ್ಟರು ಅಂದುಕೊಳ್ಳೋಣ ಆಕೆಗೆ ಬಿಹಾರದವರೆಗೆ ನೆಟ್ವರ್ಕ್ ಬೆಳೆದಿದ್ದಾರು ಹೇಗೆ ? ಬಿಹಾರಕ್ಕೆ ಹಣ ಸಾಗಿಸಲು ಸ್ವಂತ ಮನೆಯು ಇಲ್ಲದ ಮಂಗಳೂರಿನ ಗೃಹಿಣಿ ಯೇ ಬೇಕಿತ್ತೆ ? ಬಿಹಾರದಲ್ಲಿ ಯಾರು ಈ ದಂದೆ ಮಾಡುವವರು ಇಲ್ಲವೇ ? ಅದು ಕೋಟಿ ಲೆಕ್ಕದಲ್ಲಿ ...
ಹವಾಲ ಹಣ ಯಾರಿಗೆ ಸೇರುತ್ತಿದೆ ಅಂತ ಜುಬೇರ್ ದಂಪತಿಗೆ ಗೊತ್ತಿರಲಿಲ್ಲ ಅಂತ ನಸ ಹೇಳುತ್ತಾರೆ . ಅದೇ ಮೇಲಿನ ಪ್ಯಾರದಲ್ಲಿ ಬಡಪಾಯಿ ಮುಸ್ಲಿಂ ಯುವಕರು ಕೂಲಿ ನಾಲಿ ಮಾಡಿ ಮನೆಗೆ ತೆರಿಗೆ ತಪ್ಪಿಸಲು ಹಣ ಕಳಿಸುತ್ತಿದ್ದರು ಅಂತ ಉಲ್ಲೇಖಿಸಿದ್ದಾರೆ .   ಅಂದರೆ ಹಣ ಯಾರಿಗೆ ಕೊಡುತ್ತಿದ್ದೇವೆ ಜುಬೇರ್ ದಂಪತಿಗೆ ಗೊತ್ತಿಲ್ಲ ಅಂದರೆ ಪ್ರಾಮಾಣಿಕವಾಗಿ ದುಡಿದ ಹಣ ಅಲ್ಲ ಅಂತ ಅರ್ಥ ತಾನೇ... ಆ ಸಮಯದಲ್ಲೇ ಇದನ್ನ ನಿಲ್ಲಿಸಬಹುದಿತ್ತಲ್ಲ ? ಕೋಟಿ ಗಟ್ಟಲೆ ಹಣ ವರ್ಗಾವಣೆ ಮಾಡುವವರು ಅಷ್ಟೊಂದು ದಡ್ಡರು ಎಂದರೆ ನಂಬಲು ಸಾದ್ಯವೇ ?
ಇನ್ನು ಪೋಲಿಸ್ ರು ಅಧಿಕೃತವಾಗಿ ಏನು ಹೇಳಿಲ್ಲ ...... ಯಾರಿಗೆ ಹೇಳಿಲ್ಲ ? ನಿಮಗೆ ಹೇಳಬೇಕಿತ್ತೆ ? ವಾರಂಟ್ ಕೈಯಲ್ಲಿ ಹಿಡಿದು ಬರುವ ಅಧಿಕಾರಿ ಯಾರಿಗೆ ಹೇಳಬೇಕೋ ಅವರಿಗೆ ಹೇಳಿಯೇ ಬಂದಿರುತ್ತಾರೆ ....
 ಇನ್ನು ಬಂದಿಸಲು ಬಂದಿದ್ದು ಇಬ್ಬರೇ ಪೋಲಿಸ್ ರು .. ಸ್ವಾಮೀ  ಇದೇನು ವಿಕ್ರಮ್ ನ "ಅಪರಿಚತಡು " ಚಿತ್ರ ಅಲ್ಲ ... ಒಂದು ಹೆಂಗಸು ಮತ್ತು ಅದರ ತರಕಲಂಗಡಿ ಗಂಡನ ಬಂದಿಸೋಕ್ಕೆ ಇನ್ನೆಷ್ಟು ಜನ ಬೇಕು ? ಆಕೆ ಖಂಡಿತ ಕಿಂಗ್ ಪಿನ್ ಅಲ್ಲ , ಯಾರೋ ಕೈಯಿಂದ ಉಪಯೋಗಕ್ಕೊಳಗಾದ ಆಯುಧ ಅಂತ ಪೋಲಿಸ್ ರಿಗೆ ಚೆನ್ನಾಗಿ ಗೊತ್ತಿದೆ.
ನಿಮ್ಮ ಲೇಖನದ ಕೊನೆಯ ಲೈನ್ ಖಂಡಿತ ಒಪ್ಪುತ್ತೇನೆ , ಸುಳ್ಳು ಪ್ರೀತಿಯ ನಾಟಕ ಆಡುವವರ  ಹಿಂದೆ ಹೋದರೆ ಕೊನೆಗೆ ಎಲ್ಲಿಗೆ ಸೇರುತ್ತಾರೆ ಅನ್ನೋದಕ್ಕೆ ಆಕೆ ಸಾಕ್ಷಿ ಆದಳು ಅಷ್ಟೇ ...

ಇನ್ನು ನಿನ್ನೆ ನಸು ಫೇಸ್ಬುಕ್ ಲ್ಲಿ ಕೊಟ್ಟ ಸಮಜಾಯಿಷಿ ಹೀಗಿದೆ "  ಕರ್ನಾಟಕ ಪೋಲಿಸ್ ಕಮಿಷನರ್ ಮತ್ತು ಬಿಹಾರ್ ಪೋಲಿಸ್ ರನ್ನ ಸಂಪರ್ಕಿಸಿದ್ದ ನಸುಗೆ , ಆಕೆಗೆ ಪಾಕಿಸ್ತಾನದಿಂದ ಹಣ ವರ್ಗಾವಣೆ ಆಗಿಲ್ಲ ಮತ್ತು ಆಕೆಯನ್ನ ಕೇವಲ ಹವಾಲ ವ್ಯವಹಾರದ ಕಾರಣಕ್ಕೆ ಬಂದಿಸಿದ್ದೇವೆ ಅಂತ ಹೇಳಿದ್ದರಂತೆ "
ಅಲ್ಲ ಸ್ವಾಮೀ ವಿಚಾರಣೆ ಮದ್ಯೆ ಯಾವ ಪೋಲಿಸ್ , ವಿಚಾರಣ ವಿಷಯಗಳನ್ನ ಬಿಟ್ಟುಕೊಡುತ್ತಾನೆ ? ಇಷ್ಟಕ್ಕೂ ನಸು ಅಂತಹ ಬೋರ್ಡಿಗಿಲ್ಲದ ಪತ್ರಕರ್ತರು ಕಾಲು ಕಾಲಿಗೆ ಸಿಗೋ ಈ ಕಾಲದಲ್ಲಿ . ಇಂತಹ ಸಾವಿರ ಪತ್ರಕರ್ತರು ಅವರನ್ನ  ಸಂಪರ್ಕಿಸಿರುತ್ತಾರೆ , ಎಲ್ಲರಿಗು ಸಮಜಾಯಿಸಿ ಕೊಡುತ್ತ ಯಾರು ಕೂತಿರುತ್ತಾರೆ ? ಅವರ ಏನೇ ಹೇಳಿದರು ಅವರ ಅಭಿಪ್ರಾಯ ಚಾರ್ಜ್ ಶೀಟ್ ದಾಖಲಿಸಿದ ಮೇಲೆಯೇ ಅಲ್ಲವೇ ಗೊತ್ತಾಗೋದು ? ನಸುಗೆ ಇಷ್ಟು ಗೊತ್ತಿಲ್ಲವೇ... ? ಅದು ಆರು ತಿಂಗಳು ಜೈಲ್ ಜೀವನ ಕಳೆದ ಮೇಲು ? ಆಶ್ಚರ್ಯ ...
ಒಂದು ಪಕ್ಷ ಪೋಲಿಸ್ ರು ನಸುಗೆ ಕೊಟ್ಟ ಮಾಹಿತಿ ಸತ್ಯ ಅಂತ ಇಟ್ಟುಕೊಳ್ಳೋಣ , ನಿಜ ಹೇಳಬೇಕೆಂದರೆ  ಭಯೋತ್ಪಾದಕರಿಗೆ ಹಣ ಬರುತ್ತಿರುವುದು ಅರಬ್ ನಿಂದಲೇ ಹೊರತು ಬಡ ಪಾಕಿಸ್ತಾನದಿಂದ ಅಲ್ಲ . ಅಲ್ಲಿಗೆ ಅದನ್ನು ಭಯೋತ್ಪಾದಕರಿಗೆ ಬಂದ ಹಣ ಅಲ್ಲ ಅಂತ ಹೇಳಲು ಸಾದ್ಯವಿಲ್ಲ .
ಆಕೆಗೆ ಯಾರ ಕೈಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ ಇರಬಹುದು ... ಆದರೆ ಹಣ ಪಡೆದವರು ಭಯೋತ್ಪಾದಕರು ಆಗಿರಬಹುದು ಅಲ್ಲವೇ ? ಇಲ್ಲ ಅನ್ನಲು ನಿಮ್ಮ ಪ್ರಕಾರ ಆಕೆಗೆ ಹಣ ತೆಗೆದುಕೊಂಡವರು ಯಾರು ಅಂತಾನೆ ಗೊತ್ತಿಲ್ಲ ... !!!!

ಒಂದು ಪಕ್ಷ ಆಕೆಗೆ ಭಯೋತ್ಪದಕರಿಗೆ ಹಣ ಕೊಡುತ್ತಿದ್ದೇನೆ ಅಂತ ಗೊತ್ತಿಲ್ಲದೇ,  ಹಣ ಕೊಟ್ಟರು ಕೂಡ ಅದು ಭಯೋತ್ಪಾದನೆಗೆ ಸಹಾಯಕ ಕೆಲಸವೇ ಅಲ್ಲವೇ ? ಭಯೋತ್ಪಾದಕರಿಗೆ ಸಹಾಯ ಮಾಡಿದವರನ್ನ  ಭಯೋತ್ಪದಕಿ ಅಂತ ಕರೆಯದೆ ಅಂಗನವಾಡಿ ಸಹಾಯಕಿ ಅಂತ ಕರೆಯಲು ಆಗದು ಅಲ್ಲವೇ ?
ಇನ್ನು ನೀವು ಹೇಳಿದ್ದನ್ನು ನಂಬೋಣ ಅಂದರೆ ನೀವು ಉಳಿಸಿಕೊಂಡಿರುವ ವಿಶ್ವಾರ್ಹತೆ ಆದರು ಏನು ? 
 ನಿಮ್ಮ ಯೋಗ್ಯತೆ ಬಗ್ಗೆ ಹೇಳಲು ಏನಿದೆ ? ಮಣಿಪಾಲ ರೇಪ್ ಕೇಸ್ ನ ಆರೋಪಿಯನ್ನ ಬಜರಂಗ ದಳದ ಕಾರ್ಯಕರ್ತನ ತಮ್ಮ ಎಂದು ನೀವು ಸುಳ್ಳು ಸುದ್ದಿ ಹಬ್ಬಿಸಿದ್ದು, ಅದು ಸುಳ್ಳು ಅಂತ ಗೊತ್ತಾದ ಕೂಡಲೇ , ಪೋಲಿಸ್ ರನ್ನ ಕಂಡು ಪರಾರಿ ಆಗುವ ಮೆಜೆಸ್ಟಿಕ್ ರಾತ್ರಿ ರಾಣಿಯರಂತೆ , ಫೇಸ್ಬುಕ್ ನ ಪೋಸ್ಟ್ ಡಿಲಿಟ್ ಮಾಡಿ ಓಡಿ ಹೋಗಿದ್ದು , ಇದನ್ನ ಕರ್ನಾಟಕದ ಜನ ಕೆಲವು ದಶಕ ಮರೆಯೋದಿಲ್ಲ ಬಿಡಿ , ಮಾಡಿದ ತಪ್ಪಿಗೆ ಒಂದು ಕ್ಷಮೆ ಕೇಳಬೇಕು ಅನ್ನೋ ನೈತಿಕತೆ ಕೂಡ ಇಲ್ಲದ ನೀವು , ದೊಡ್ಡ ಜನಗಳ ಬಗ್ಗೆ ತುಚ್ಚವಾಗಿ ಮಾತಾಡುವ ಧೈರ್ಯ ಪ್ರದರ್ಶಿಸುತ್ತಿರಿ . ಏನಾದರು ನಾಚಿಕೆ ಮಾನ ಅನ್ನೋದು ಏನಾದರು ನಿಮಗಿದೆಯೇ ?
ಪತ್ರಕರ್ತ ಆದವನಿಗೆ ಬುದ್ದಿ ಇಲ್ಲದೆ ಇದ್ದರು ಪರವಾಗಿಲ್ಲ , ಸೊಂಟದ ಕೆಳಗೆ ಇರಬಾರದು ... ಈಗ ನಿಮಗೆ ಇರೋದು ಅಲ್ಲೇನೆ ...  ಸ್ವಲ್ಪ ಅದನ್ನು ಮೇಲೆ ತಂದು ಕೊಳ್ಳುವ ಪ್ರಯತ್ನ ಮಾಡಿ.

ಇನ್ನು ಇಂತಹ ಘನಂದಾರಿ ಲೇಖನ ಪ್ರಕಟಿಸಿದ ವರ್ತಮಾನದ ರವಿ ಕೃಷ್ಣ ರೆಡ್ಡಿ ಯವರ ಬಳಿ ಬರೋಣ , ಎರಡು ಚುನಾವಣೆಗೆ ನಿಂತು ಹೋರಾಡಿದ ಧೀರ , ಭ್ರಷ್ಟಾಚಾರ ನಿಮೂರ್ಲನೆಗೆ ಮೇಲಿನಿಂದ ಉದುರಿ ಬಿದ್ದ ಸಾಕ್ಷಾತ್ ಶ್ರೀ ಕೃಷ್ಣನಂತೆ ಪೋಸ್ ಕೊಡುವ ರೆಡ್ಡಿಯವರೇ , ನಿಮಗೆ ಹವಾಲ ಹಣ ದಂಧೆ ಒಂದು ಭ್ರಷ್ಟಾಚಾರ ದ ಭಾಗ ಎಂದು ಗೊತ್ತಿಲ್ಲವೇ ? ಇದನ್ನು ನಿಮಗೆ ಸಂತೋಷ್ ಹೆಗ್ಡೆ  ರ  ಮೂಲಕವೇ ಹೇಳಿಸಬೇಕೆನು ? ಒಂದು ಹವಾಲ ದಂಧೆ ನಡೆಸುವವಳ (ಭಯೋತ್ಪಾದಕಿ ಬಿಟ್ಟುಬಿಡಿ ) ಪರ ವಕಾಲತ್ತು ನಡೆಸುವ ದರ್ದು ನಿಮಗೇನಿದೆ ? ನಾಳೆ ತಲೆಹಿಡುಕರ ಸಂಘದವರಿಗೂ ಲೇಖನ ಬರೆಯಲು ಅವಕಾಶ ಕೇಳಿದರೆ ಇಲ್ಲ ಅನ್ನದೆ ಅವಕಾಶ ಕೊಡುತ್ತಿರೆನೋ... ? ಅಲ್ಲವೇ ? ... ಇನ್ನೊಮ್ಮೆ ನಾನು ಭ್ರಷ್ಟಾಚಾರದ ವಿರುದ್ದ ಅಂತ ಹೇಳಿಕೆ ಕೊಡುವ ಮುನ್ನ ಅಕ್ಕ ಪಕ್ಕ ನೋಡಿಕೊಳ್ಳಿ , ಕೊಳೆತ ಮೊಟ್ಟೆ , ಟೊಮೇಟೊ ಬಿದ್ದವೋ ಮುಖದ ಮೇಲೆ .

ಕೊನೆ ಮಾತು : ದೇಶದ್ರೋಹಿಗಳ ಮುಂದೆ ಲಂಗೋಟಿ ಬಿಚ್ಚಿಕೊಂಡು ಓಡಾಡುವವರ ಮದ್ಯೆ , "ಚಡ್ಡಿ " ಹಾಕಿಕೊಂಡಿರುವವನೆ ಮರ್ಯಾದಸ್ಥ. 

ಚಿತ್ರಕೃಪೆ : ಭೂತಕಾಲದಲ್ಲಿರೋ "ವರ್ತಮಾನ"

ಭಾನುವಾರ, ಸೆಪ್ಟೆಂಬರ್ 22, 2013

ಭಾಷಾ ಚಳುವಳಿಗಳು ಮತ್ತು ನವ ವರ್ಣಾಶ್ರಮ

ಇತ್ತೀಚಿಗೆ ಒಂದು ವಿಶಿಷ್ಟ ಚರ್ಚೆಯಲ್ಲಿ ನಾನು ಭಾಗವಹಿಸಬೇಕಾದ ಅನಿವಾರ್ಯತೆಗೆ  ಸಿಲುಕಬೇಕಾಯಿತು , ಅದೇನೆಂದರೆ ಭಾಷಾ  ಪ್ರಾಮುಖ್ಯ ಚಳುವಳಿಗಳು ಹೇಗೆ ನವ ವರ್ಣಾಶ್ರಮವನ್ನ ಹುಟ್ಟುಹಾಕುತ್ತದೆ ಎಂದು.. ಈ ತರಹದ ಚರ್ಚೆಗೆ ಕಾರಣವಾದವರು ಕರವೇ ಸಂಘಟನೆಯ ಶ್ರೀಯುತ ದಿನೇಶ್ ಕುಮಾರ್ ಅವರು.  ಫೇಸ್ಬುಕ್ ನಲ್ಲಿ ಅವರು ಹಾಕಿದ್ದ ಒಂದು ಪೋಸ್ಟ್ ಮುಖಾಂತರ ಶುರುವಾದ ಚರ್ಚೆಯನ್ನು ಶ್ರೀಯುತರು ಮುಂದುವರಿಸಲು ಇಷ್ಟ ಪಡಲಿಲ್ಲ , ತೀರ ಒತ್ತಾಯ ಮಾಡಿದ್ದಕ್ಕೆ ನಾನು ಅವರಿಂದ ಅಸೃಷ್ಯ ಆಗಬೇಕಾಯಿತು.  ಇರಲಿ . ಅವರ ಪ್ರಕಾರ ಮನುಷ್ಯರ ಎರಡು ಕೈಗಳಲ್ಲಿ ಬಲಗೈ ಎಡಗೈ ಗಿಂತ ಶ್ರೇಷ್ಠ ಅನ್ನುವುದು ವರ್ಣಾಶ್ರಮದ ಪ್ರತೀಕ. ನಿಜ ಯಾವುದೋ ಒಂದನ್ನು ಇನ್ನೊಂದಕ್ಕೆ ಹೋಲಿಸಿ ಶ್ರೇಷ್ಠ ಅಥವಾ ನಿಕೃಷ್ಟ ಅನ್ನುವುದು ತಪ್ಪು ಆದರೆ ... ತಮ್ಮದೇ ಕೈಗಳ ಬಗ್ಗೆ ಇಷ್ಟು ಸ್ಮೂಕ್ಷ್ಮತೆ ಹೊಂದಿರುವ ಶ್ರೀಯುತರು ತಮ್ಮದೇ ಹೋರಾಟ ಹೇಗೆ ವರ್ಣಾಶ್ರಮ ಹುಟ್ಟುಹಾಕುತ್ತಿದೆ ಅನ್ನುವುದು ತಿಳಿದಿರಲಾರರೆ ..? ಇರಲಿ

ಭಾಷಾ ಚಳುವಳಿ ವಿಷಯಕ್ಕೆ ಬಂದರೆ ಮುಖ್ಯವಾಗಿ ಚರ್ಚೆಗೆ ಬರುವವರು ಇಬ್ಬರು ಒಬ್ಬರು ದ್ರಾವಿಡ ತಮಿಳು ಹೋರಾಟಗಾರ ಪೆರಿಯಾರ್ , ಮತ್ತೊಬ್ಬರು ಮರಾಟಿ  ಭಾಷಾ ಹೋರಾಟಗಾರ ಬಾಳ್ ಠಾಕ್ರೆ.

ಪೆರಿಯಾರ್ ಒಬ್ಬ ನಾಸ್ತಿಕ , ವೈದಿಕ ಸಮಾಜ , ಬ್ರಾಹ್ಮಣರನ್ನ ದ್ವೇಷಿಸುತ್ತಿದ್ದ ವ್ಯಕ್ತಿ , ಅದು ಎಷ್ಟರ ಮಟ್ಟಿಗೆ ಅಂದರೆ " ಒಬ್ಬ ಬ್ರಾಹ್ಮಣ ಮತ್ತು ಒಂದು ಹಾವು ಎದುರಿಗೆ ಬಂದರೆ , ಮೊದಲು ನಾನು ಕೊಲ್ಲುವುದು  ಬ್ರಾಹ್ಮಣನನ್ನ" ಅನ್ನುವಷ್ಟು. ಪೆರಿಯಾರ್ ಹಿಂದೂ ಸಮಾಜದಲ್ಲಿದ ಮೇಲು ಕೀಳು, ಬ್ರಾಹ್ಮಣ್ಯದಂತಹ ವಿಷಯಗಳನ್ನು ಉಗ್ರವಾಗಿ ಖಂಡಿಸುತ್ತಿದ್ದರು , ಅದರ ವಿರುದ್ದ ಅವರು " ಸ್ವಾಭಿಮಾನ ಚಳುವಳಿಗೆ" ಕರೆಕೊಟ್ಟವರು, ಹಾಗೆಯೇ  ತಮಿಳರ ಮೇಲಿನ ಹಿಂದಿ ಹೇರಿಕೆ, ಆರ್ಯರ ( ಉತ್ತರ ಭಾರತೀಯರ) ವಿರುದ್ದದ ಚಳುವಳಿಗಳನ್ನ ವ್ಯಾಪಕವಾಗಿ ನಡೆಸಿದವರು. ಒಂದು ಸಮಯದಲ್ಲಿ ಆರ್ಯರ ದೇವರುಗಳು ಕರೆಯಲ್ಪಡುತಿದ್ದ ರಾಮ ಕೃಷ್ಣರ ಫೋಟೋಗಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿಸುತ್ತಿದ್ದರು ಪೆರಿಯಾರ್.
ಹಿಂದಿ ಹೇರಿಕೆಯಿಂದ ದ್ರಾವಿಡರ ಸಂಸ್ಕೃತಿಯನ್ನ  ಆರ್ಯರು ಕಲುಷಿತಗೊಳಿಸಲು ಪ್ರಯತಿಸುತ್ತಿದ್ದಾರೆ  ಅನ್ನುವುದು ಪೆರಿಯಾರ್ ಅವರ ವಾದವಾಗಿತ್ತು... ಅವರ ದ್ರಾವಿಡ ಚಳುವಳಿ ತಮಿಳು ನಾಡಿನ ಮಟ್ಟಿಗೆ ಒಂದು ಕ್ರಾಂತಿಗೆ ಕಾರಣವಾಯಿತು ಆದರೆ ....    ಯಾವ ದಿಕ್ಕಿನಿಂದ ನೋಡಿದರು ಪೆರಿಯಾರ್ ಮಾಡಿದ್ದು ಅದೇ ವರ್ಣಾಶ್ರಮದ ಸಮರ್ಥನೆಯೇ.  ಒಂದು ಕಡೆ ಬ್ರಾಹ್ಮಣರ ಮೇಲೆ ದ್ವೇಷ,  ಇನ್ನೊಂದು ಕಡೆ ತಮಿಳೇತರ  ಮೇಲೆ ಅಸಮಾಧಾನ ಇದು ಹೇಗೆ ಸಾಧ್ಯ ?. ಒಬ್ಬ ತಮಿಳು ಬ್ರಾಹ್ಮಣನನ್ನ ಆತ  ಬ್ರಾಹ್ಮಣ ಅನ್ನೋ ಕಾರಣಕ್ಕೆ ದ್ವೇಷಿಸಬೇಕಾ ? ಅಥವಾ ಆತ  ತಮಿಳಿಗ ಅನ್ನೋ ಕಾರಣಕ್ಕೆ ಅಪ್ಪಿಕೋಬೇಕ  ?  ಅಥವಾ ಆರ್ಯ ದಲಿತನನ್ನ ಆತ  ದಲಿತ ಅನ್ನೋ ಕಾರಣಕ್ಕಾಗಿ ಇಷ್ಟ ಪಡಬೇಕ ? ಅಥವಾ ಒಬ್ಬ ಆರ್ಯ ಅನ್ನೋ ಕಾರಣಕ್ಕೆ ದ್ವೇಷಿಸಬೇಕ ? ಬಹುಶ ಈ ವಿಷಯದ ಮೇಲೆ ಪೆರಿಯಾರ್ ಮಾತಾಡಿದ್ದು ನಾನು ಕೇಳಿಲ್ಲ.

ಬಾಳ್ ಠಾಕ್ರೆ ಯವರ ಶಿವಸೇನೆಯದು  ಇನ್ನೊಂದು ಮುಖ, ಒಂದು ಕಡೆ ಮರಾಟಿ ಗರೆಲ್ಲ ಒಂದಾಗಬೇಕು, ಆದರೆ ಅದರಲ್ಲಿ ಮುಸ್ಲಿಮರು ಹೊರತಾಗಬೇಕು ... ಇದು ಹೇಗೆ ಸಾದ್ಯ ? ಮರಾಟಿಗ ಅಥವಾ ತಮಿಳಿಗ  ಅಂದ ಮೇಲೆ ಮುಗಿಯಿತು ಆತ  ಹಿಂದುವೋ ಮುಸ್ಲಿಮನೋ ಪಾರ್ಸಿಯೋ, ಬ್ರಾಹ್ಮಣನೋ , ದಲಿತನೋ . ಆತನ ಧರ್ಮ, ಜಾತಿ  ಅಲ್ಲಿ ಮುಖ್ಯವಾಗಬಾರದು ಅಲ್ಲವೇ  ..?
ಈ ಜಿಜ್ನಾಸೆಯ ಬಗ್ಗೆ ಇನ್ನು ಹೇಳಬೇಕು ಅಂದರೆ ರೈತ ಸಂಘದ ವಿಷಯದಲ್ಲಿ ತೇಜಸ್ವಿ ಅವರಿಗೆ ಮತ್ತು ದೇವನೂರು ಅವರಿಗೆ ಇದ್ದ ಭಿನ್ನಾಭಿಪ್ರಾಯ ಉಲ್ಲೆಕಿಸಬಹುದು, ರೈತ ಸಂಘದಲ್ಲಿ ಮೀಸಲಾತಿ ಇರಬಾರದು, ರೈತರು ಅಂದ ಮೇಲೆ ಎಲ್ಲರು ಒಂದೇ  ಅನ್ನುವುದು ತೇಜಸ್ವಿ ಅವರ ವಾದ ಆದರೆ , ಮೇಲ್ಜಾತಿಯ ರೈತ , ದಲಿತ ರೈತನ ಶೋಷಣೆ ಮಾಡಬಹುದು, ಹಾಗಾಗಿ ರೈತ ಸಂಘದಲ್ಲಿ ಮೀಸಲಾತಿ ಬೇಕು ಅನ್ನುವುದು ದೇವನೂರರ ವಾದ. ಕೊನೆಗೆ ಈ ಜಿಜ್ನ್ಯಾಸೆ ರೈತ ಸಂಘದ ಸಮಾಪ್ತಿಯೊಂದಿಗೆ ಪರ್ಯವಪಸನಗೊಂಡಿದ್ದು ವಿಪರ್ಯಾಸ.
ಭಾಷೆ ಅನ್ನುವುದು ಹುಟ್ಟಿದ್ದೇ ಸಂವಹನಕ್ಕಾಗಿ, ಕನ್ನಡ ಪರಿಸರದಲ್ಲಿ ಹುಟ್ಟಿದ್ದ ನನಗೆ ಕನ್ನಡ ಕಲಿಯುವುದು ದೊಡ್ಡ ಸಾಧನೆ ಆಗಿರಲಿಲ್ಲ ಅದು ನನ್ನ ಅನಿವಾರ್ಯತೆ ಆಗಿತ್ತು ... ಹಾಗೆಯೇ ನಾನು ತಮಿಳು ಪರಿಸರದಲ್ಲಿ ಹುಟ್ಟಿದ್ದರೆ ನನ್ನ ಭಾಷೆ ತಮಿಳ್ ಆಗಿರುತ್ತಿತ್ತು, ಇದರಲ್ಲಿ ಶ್ರೇಷ್ಠತೆ ಏನಿದೆ ? ಯಾರು ಕೂಡ ಇಲ್ಲೇ ಹುಟ್ಟಬೇಕು, ಇಂತಹ ಜಾತಿಯಲ್ಲೇ ಹುಟ್ಟಬೇಕು  ಅಂತ ಅರ್ಜಿ ಹಾಕಿರುವುದಿಲ್ಲ, ಹಾಗಾದರೆ ನಮ್ಮ ಹುಟ್ಟು ಆಗಲಿ ಅಥವಾ ನಾವು ಆಡುವ ಮಾತಾಗಲಿ ನಮಗೆ ಶ್ರೇಷ್ಠತೆ ತಂದು ಕೊಡುವುದು ಹೇಗೆ ?
ಮಹಾರಾಷ್ಟ್ರದಲ್ಲಿ ಮರಾಟಿಗ ಶ್ರೇಷ್ಠ , ತಮಿಳುನಾಡಲ್ಲಿ ತಮಿಳಿಗ ಶ್ರೇಷ್ಠ , ಕರ್ನಾಟಕದಲ್ಲಿ ಕನ್ನಡಿಗ ಶ್ರೇಷ್ಠ .. ಇದು ವರ್ಣಶ್ರಮವಲ್ಲದೆ  ಇನ್ನೇನು ?
ಕನ್ನಡವನ್ನ ಧರ್ಮ ಎಂದು ಸ್ವೀಕರಿಸುವ , ಕನ್ನಡಕ್ಕೆ ಚ್ಯುತಿ ಬಂದರೆ ಜೀವ ಕೊಡುತ್ತೇವೆ ಅನ್ನುವವರಿಗೂ ,  ಹಿಂದೂ ಧರ್ಮಕ್ಕೆ ಚ್ಯುತಿ ಬಂದರೆ ಜೀವ ಕೊಡಲು ಸಿದ್ದ ಅನ್ನುವ RSS ಸಂಘ ಪರಿವಾರಗಳಿಗೆ ಏನು ವ್ಯತ್ಯಾಸ ? . RSS  ದು ಹಿಂದೂ ಕೋಮುವಾದ ಆದರೆ ಇವರದು ಕನ್ನಡ ಕೋಮುವಾದವೇ ?
ಕರ್ನಾಟಕದಲ್ಲಿ ಕನ್ನಡಿಗ ನೆಲೆ ಕಳೆದುಕೊಳ್ಳುತ್ತಿದ್ದಾನೆ ಅನ್ನುವಾಗ ಆಗುವ ನೋವು , ಹಿಂದೂಗಳು ಹಿಂದೂಸ್ಥಾನದಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ ಅನ್ನುವ ನೋವಿಗಿಂತ ಹೇಗೆ ಬಿನ್ನ ?
ಇದು ಸಂಘಟನೆಗಳ ಸೈದ್ದಂತಿಕ ಘರ್ಷಣೆ ಅನ್ನಬಹುದು, ಎಂದಿಗೂ ಭಾಷೆ ನಮ್ಮ ಧರ್ಮ ಆಗಬಾರದು , ಮತ್ತು ಧರ್ಮ ನಮ್ಮ ಭಾಷೆ ಆಗಬಾರದು ... ಇದು ಸೈದ್ದಾಂತಿಕ ಗೊಂದಲ ಅನ್ನದೆ ಬೇರೆ ದಾರಿ ಇಲ್ಲ . ನಾನು ಕನ್ನಡ ಪರ  ಹೋರಾಟವನ್ನ ತಪ್ಪು ಅನ್ನುತ್ತಿಲ್ಲ ಆದರೆ ದಿನೇಶ್ ಕುಮಾರ್ ಅಂತವರು RSS  ಸಂಘಟನೆಗಳು ಮಾಡುತ್ತಿರುವ ಕೆಲಸವನ್ನ ಖಂಡಿಸುವ ಮುನ್ನ ತಾವು ಮಾಡುತ್ತಿರುವುದೇನು ಅನ್ನುವುದನ್ನ ಯೋಚಿಸಬೇಕು.. ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವುದರ ಪರಿಣಾಮ ಅರಿತರೆ ಒಳ್ಳೆಯದು

ತಮಿಳುನಾಡಿಗೆ , ಮಹಾರಾಷ್ರಕ್ಕೆ ಹೋಲಿಸಿದರೆ ಕರ್ನಾಟಕ ಭಾಷಾಭಿಮಾನ ವಿಷಯದಲ್ಲಿ ದುರುದೃಷ್ಟ ರಾಜ್ಯ ಅನ್ನಬಹುದು, ಎರಡು ರಾಜ್ಯಗಳು ಭಾಷೆಯನ್ನ ತಳಹದಿ ಮಾಡಿಕೊಂಡು ರಾಜಕೀಯ ಲಾಭ ಮಾಡಿಕೊಂಡರೆ ಈ ರಾಜ್ಯದ ಜನ ಬಾಯಿ ಬಿಟ್ಟು ನೋಡುವುದು ಬಿಟ್ಟು ಇನ್ನೇನು ಮಾಡಲಾಗದ ಅಸಹಾಯಕತೆ ಹೊದ್ದು ಕೊಂಡರು  ಅಷ್ಟೇ... ಬೀದಿ ಬೀದಿಗೆ ಒಬ್ಬರು ಕನ್ನಡ ಹೋರಾಟಗಾರರು ಸಿಗುವ ಈ ನಾಡಿನಲ್ಲಿ ಕನ್ನಡ ಉದ್ದಾರ ಮಾಡಿದವರು ಎಷ್ಟು ಭಗವಂತ ಬಲ್ಲ. ಕನ್ನಡ ಕಾಳಜಿ ಬಿಟ್ಟು ಮತ್ತೆಲ್ಲ ಮಾತಾಡುವ ಚಂಪಾ , ನ್ಯೂಸ್ ಚಾನೆಲ್ ಗಳ ಪಾಲಿಗೆ ಜೋಕೆರ್ ತರಹ ಆಗಿರುವ ವಾಟಾಳ್ , ಕನ್ನಡವನ್ನೇ ಸರಿಯಾಗಿ ಮಾತಾಡಲು ಬಾರದ ನಾರಾಯಣ ಗೌಡರು ಇವರನ್ನೆಲ್ಲ ಕನ್ನಡದ ಕಟ್ಟಾಳುಗಳು ಅನ್ನೋ ಮನಸ್ಸು .. ಇವರ ಕೈಗೆ ನಮ್ಮ ಕನ್ನಡ ಅಭಿಮಾನ ಕೊಡಬಹುದು ಅನ್ನಿಸುತ್ತದೆಯೇ ?
ಕನ್ನಡ ರಕ್ಷಣೆ ಒಂದೇ ಗುರಿ ಆಗಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಇಷ್ಟೊಂದು ಬಣಗಳೇಕೆ ? ಪ್ರತಿಭಟನೆ ಒಂದು ಬಿಟ್ಟರೆ ಈ ಬಣಗಳು ಮಾಡಿರುವ ಘನಂದಾರಿ ಕೆಲಸವಾದರೂ ಏನು ? ಹೆಸರು ಕನ್ನಡ ಹೋರಾಟ ಆದರೆ ಬ್ಯಾನೆರ್ ತುಂಬಾ ಇವರದೇ ಮುಖ , ಇದು ಕನ್ನಡ ಅಭುದ್ಯಕ್ಕಾಗಿ  ಹೋರಾಟವೋ ಸ್ವಾಭುದ್ಯಕ್ಕಾಗಿ ಹೋರಾಟವೋ ?




ಬರಿ ಭಾಷಣದಲ್ಲಿಯೇ  ಮರಾಟಿಗರ , ತಮಿಳಿಗರ ಸ್ವಾಭಿಮಾನ ಕೆರಳಿಸುತ್ತಿದ್ದ ಪೆರಿಯಾರ್, ಠಾಕ್ರೆಗೆ ಸಮನಾದ ಒಬ್ಬನೇ ಒಬ್ಬ ಸೊ ಕಾಲ್ಡ್ ಕನ್ನಡ ಹೋರಾಟಗರ ಈ ರಾಜ್ಯದಲ್ಲಿ ಇಲ್ಲ.
ಕಾವೇರಿ ಹೋರಾಟಕ್ಕೆ ಕರಾವಳಿಗರ ಬೆಂಬಲ ಸಿಗದು, ಮಲಯಾಳಿಗಳ ದೌರ್ಜನ್ಯ ವಿರುದ್ದದ ಕೂಗು ದಕ್ಷಿಣ ಕನ್ನಡ ಜಿಲ್ಲೆ ಬಿಟ್ಟು ಹೊರಬರದು, ಬೆಂಗಳೂರಿಗರ ತಮಿಳರ ಸಮಸ್ಯೆ , ಉತ್ತರ ಕರ್ನಾಟಕವನ್ನ ಬಾದಿಸದು, ಅವರ ಕೃಷ್ಣೆಯ ಕೂಗು ಬೆಂಗಳೂರು ಗೆ ತಲುಪದು. ಇಡಿ ಕರ್ನಾಟಕವನ್ನ ಒಂದೇ ಅನ್ನಿಸುವ ಭಾವನೆ ಬರಿಸಲು ಇವರ್ಯರಿಂದಲೂ ಸಾದ್ಯವಿಲ್ಲ.  
ಕನ್ನಡ ಸಂಘಟನೆಗಳು ಎಷ್ಟು ಕನ್ನಡ ಶಾಲೆಗಳನ್ನ ಪೋಷಿಸುತ್ತಿವೆ ? ಎಷ್ಟು ಕನ್ನಡ ಪುಸ್ತಕ ಪ್ರಕಟಿಸುತ್ತಿವೆ ? ಶಿವಸೇನೆಯ ಮುಖವಾಣಿ "ಸಾಮಾನ" ಸಾವಿರಾರು ಪ್ರತಿ ಮಾರಟವಾಗುತ್ತದೆ, ಆದರೆ ಕರವೇಯಾ "ನಲ್ನುಡಿ " ಕಣ್ಣಿಗೂ ಕಾಣದ ಗುಪ್ತಗಾಮಿನಿ ಆಗಿದೆ. ಕಣ್ಣಿಗೆ ಕಾಣದ ಪತ್ರಿಕೆಗೆ ಒಬ್ಬ ಸಂಪಾದಕರು ಬೇರೆ .  ಹಾಗಾದರೆ ಕನ್ನಡದ ಹೆಸರಲ್ಲಿ ಈ ಸಂಘಟನೆಗಳು  ಮಾಡುತ್ತಿರುವುದಾದರೂ ಏನು ?
ಹಾಲಿ ಮಂಡ್ಯ ಸಂಸದೆ ರಮ್ಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಂತಿನಗರದಲ್ಲಿ ಮಾಡಿದ ತಮಿಳು ಭಾಷಣ  ನೆನಪಿರಬಹುದು.  ಅಂದು ಅಬ್ಬರಿಸಿದ್ದ ನಾರಾಯಣ ಗೌಡರನ್ನು ಆಕೆ ನೇರ ನೇರ ಹೀಗೆ ಟೀಕಿಸಿದ್ದರು , ಆದರೆ ನಾರಾಯಣ ಗೌಡರು ಮಾಡಿದ್ದೇನು ? ಆಕೆಯ ವಿರುದ್ದ ಉಗ್ರ ಹೋರಾಟ ದ ಬೆದರಿಕೆ ಹಾಕಿದ್ದ ಅವರು, ಆಕೆ ಮಂಡ್ಯ ಲೋಖಸಭಾ ಚುನಾವಣೆಗೆ ನಿಂತರೆ ಕಮಕ್ ಕಿಮಕ್ ಅನ್ನಲಿಲ್ಲ. ಕೊನೆಯ ಪಕ್ಷ ಆಕೆ ಹೇಳಿದಂತೆ ತನ್ನ ಮಕ್ಕಳು ಇಂಗ್ಲಿಷ್ ಮಾದ್ಯಮದಲ್ಲಿ ಓದುತ್ತಿಲ್ಲ ಅಂತ ಕೂಡ ಹೇಳಲಿಲ್ಲ , ಅಲ್ಲಿಗೆ ಮೌನಂ ಸಮ್ಮತಿ ಲಕ್ಷಣಂ ಅಂದ ಹಾಗಾಯ್ತು ಅಲ್ಲವೇ ?



ಚುನಾವಣಾ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಿಕ್ಕ ೪೨.೫ ಲಕ್ಷ ಅಕ್ರಮ ಹಣದ ಬಗ್ಗೆ ನಾರಾಯಣ ಗೌಡರು ಗುಲ್ಲಗದಂತೆ ನೋಡಿಕೊಂಡರು. ಸಾಮಾನ್ಯನೊಬ್ಬ ಒಂದು ರುಪಾಯಿ ಕದ್ದು ಸಿಕ್ಕಿಬಿದ್ದರು ಗಂಟೆಗಟ್ಟಲೆ ತೋರಿಸುವ ಕನ್ನಡ ಚಾನೆಲ್ ಗಳು ಯಾಕೆ ಸುಮ್ಮನಾದವು ಅನ್ನುವುದು ಗೊತ್ತಿಲ್ಲದ ಸಂಗತಿ ಅಲ್ಲ .  ನಾರಾಯಣ ಗೌಡರು ಯಾವ ಪಕ್ಷದ ಪರ ಕೆಲಸ ಮಾಡುತ್ತಾರೆ ಅನ್ನುವುದು ಗುಟ್ಟಾದ ಸಂಗತಿ ಏನಲ್ಲ.



ತಮಿಳ್ ಚಿತ್ರ ಕನ್ನಡಕ್ಕೆ ರೀಮೇಕ್ ಮಾಡಿ , ಏನೋ ಮಾಡಿದೆ ಎಂದು ಬೀಗುವ ಪ್ರವೀಣ್ ಶೆಟ್ಟಿ, ಯುವಕರಿಗೆ ಕೆಲಸ ಕೊಡಿಸುತ್ತೇನೆ ಎಂದು ದುಡ್ಡು ತಿಂದು ಕೊನೆಗೆ ಅಥಣಿಯಲ್ಲಿ ಪೆಟ್ಟು ತಿಂದ ನವ ನಿರ್ಮಾಣ ಸೇನೆಯ ಭೀಮ ಶಂಕರ ಪಾಟಿಲ್, ಇವರ್ಯಾರು ಕನ್ನಡಕ್ಕಾಗಿ ಹೋರಾಟ ಮಾಡಲು ಬಂದವರಂತೆ ಕಾಣಿಸುತ್ತಿಲ್ಲ.. ಕನ್ನಡ ತಾಯಿ ಇವರೆಲ್ಲರ ಪಾಲಿಗೆ ಅನ್ನದಾತೆ ಆಗಿದ್ದಾಳೆ ಅಷ್ಟೇ . 

ನಿಜ ಹೇಳಬೇಕು ಅಂದರೆ ಇವರ್ಯಾರಿಗೂ ಕನ್ನಡದ ಬಗ್ಗೆ ಕನ್ನಡ ರಕ್ಷಣೆ ಬಗ್ಗೆ ಮಾತನಾಡುವ ಯೋಗ್ಯತೆ  ಇಲ್ಲ, ಕನ್ನಡ ಹೋರಾಟದ ಮುಖವಾಡ  ಹೊತ್ತು ತಮ್ಮ ಬೇಳೆ  ಬೇಯಿಸಿಕೊಳ್ಳಲು ಪ್ರಯತಿಸುತ್ತಿರುವ ಇಂಥವರ ಮದ್ಯೆ ನಲುಗುತ್ತಿರುವ ಕನ್ನಡ ತಾಯಿ ಮತ್ತು ಕನ್ನಡಿಗರು ಕರುಣೆಗೆ ಅರ್ಹರು ಅಷ್ಟೇ .
 ಇಷ್ಟೆಲ್ಲಾ ಸಮಸ್ಯೆಗಳ ಮದ್ಯೆ , ಎಡಗೈಗು , ಬಲಗೈಗು ವರ್ಣಾಶ್ರಮ ಕಲ್ಪಿಸಿ ಏನೋ ಕಂಡು ಹಿಡಿದೇ ಎಂದು ಬೀಗುವ ಬುದ್ದಿಜೀವಿಗಳು.... ತಾಯಿ ಕನ್ನಡಾಂಬೆ, 

ಕೊನೆಮಾತು : "ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ" ಅನ್ನುವ ರಕ್ಷಣಾ ವೇದಿಕೆಯವರೇ ಕರ್ನಾಟಕದಲ್ಲಿ ನೂರಾರು ಸಾವಿರಾರು ವರ್ಷದಿಂದ ಬದುಕಿರುವ ತುಳುವರು , ಕೊಂಕಣಿಗರು , ಕೊಡವರು ನಿಮಗೆ ಯಾವ ತರಹ ಕಾಣಿಸುತ್ತಾರೆ ?. ಕನ್ನಡಿಗನಿಗೆ ಬೇಕಾಗಿರುವುದು ಸಾರ್ವಭೌಮತೆ ಅಲ್ಲ , ಸ್ವಾಭಿಮಾನದ ಬದುಕು ನೆನಪಿರಲಿ..
        

ಶುಕ್ರವಾರ, ಆಗಸ್ಟ್ 30, 2013

ಡುಂಡಿ - ಬಷೀರ್ ಸಂಪಾದಕೀಯಕ್ಕೆ ಒಂದು ಪ್ರತ್ಯುತ್ತರ

ಲೇಖಕರು - ಸತ್ಯನಾರಾಯಣ ರಾಮಚಂದ್ರನ್


ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ ಬರೆದ ಬಶೀರನಿಗೆ ಆತನ ಲೇಖನಕ್ಕೆ ಉತ್ತರವಾಗಿ :

ಕೊಲೆಗಾರ ಒಂದು ಜೀವಕ್ಕೆ ಹಾನಿ ಮಾಡಿದರೆ ಮನೋವಿಕಾರಿ ಲೇಖಕ ಒಂದು ಇಡೀ ಜನಾಂಗದ ನೋವಿಗೆ ಕಾರಣ ಆಗುತ್ತಾನೆ. ಅಷ್ಟೇ ಅಲ್ಲದೆ ಮನೋ ವಿಕಾರಿಗಳನ್ನು ರಸ್ತೆಯಲ್ಲೇ ಸ್ವೇಚ್ಚೆಯಿಂದ ಓಡಾಡಲು ಬಿಟ್ಟರೆ ಹುಚ್ಚು ಹಿಡಿದ ನಾಯಿಯಂತೆ ಅವರು ಯಾರನ್ನಾದರೂ ಕಚ್ಹ ಬಹುದು ಅಥವಾ ಜನಗಳೇ ಆ ಮನೋವಿಕಾರಿಯನ್ನು ಕಲ್ಲು ಹೊಡೆದು ಸಾಯಿಸ ಬಹುದು.
ಆದ್ದರಿಂದ ಅಂತಹವರನ್ನು ಆದಷ್ಟು ಬೇಗನೆ ಬಂದಿಸಿ ಅವರ ಪ್ರಾಣ ಹರಣ ತಡೆಯುವುದು ಪೋಲೀಸರ ಕೆಲಸ. ನೀವೇ ಹೇಳಿದಂತೆ ಇಂತಹ ಲೇಖಕರ ಹಿಂದಿರುವುದು ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಅಲ್ಲಾ. ಬದಲಾಗಿ ಬುದ್ದಿ ಜೀವಿಗಳು ಎಂಬ ನಿಮ್ಮಂತಹ ಮಾತೃ ದ್ರೊಹಿಗಳು ಸಮಾಜ ದ್ರೋಹಿಗಳು ಈ ದೇಶದಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ದೇಶ ದ್ರೊಹಿಗಳು. ನಿಮ್ಮಂತಹ ದ್ರೋಹಿಗಳ ಬೆಂಬಲ ಎಂದಿಗೂ ಸಹ ಸಮಾಜದ ಸ್ವಾಸ್ತ ಆರೋಗ್ಯಕ್ಕೆ ಮಾರಕ ಎಂದು ತಿಳಿದೇ ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ. 

"ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ" ಎಂದು ಅಪಾದಿಸುತ್ತಿರಿ. ಹುಚ್ಚು ನಾಯಿ ಎಷ್ಟು ಜನಕ್ಕೆ ಕಚ್ಚಿತು ಎಂದು ಲೆಕ್ಕ ಇಟ್ಟು ಅದನ್ನು ಹಿಡಿಯ ಬೆಕಿಲ್ಲ. ಅದಕ್ಕೆ ಹುಚ್ಚು ಹಿಡಿದಿದೆ ಎಂಬ ಒಂದೇ ಕಾರಣ ಸಾಕು. 

"ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು" - . ಎಂದು ಹೇಳುತ್ತಿದ್ದೇರಿ. ಸಾಹಿತ್ಯ ವಲದವರು ಮಾತ್ರ ಗದ್ದಲ ಎಬ್ಬಿಸ ಬಹುದೆಂದರೆ ಆ ಪುಷ್ಕ ಅವರಿಗೆ ಮಾತ್ರ ಮಿಸಲಾಗಿರಬೆಕು. ಅದಲ್ಲದೆ ಸಾರ್ವಜನಿಕ ಪ್ರಕಟಣೆ ಆದರೆ ಅದರ ಮೇಲೆ ಎಲ್ಲರಿಗು ಹಕ್ಕಿರುತ್ತದೆ. ಅದೇನು ನೀವು ನಿಮ್ಮ ಪಾಕಿಸ್ತಾನದಲ್ಲಿರುವ ಪ್ರಿಯತಮೆಗೆ ಬರೆದ ಪ್ರೇಮ ಪತ್ರ ಅಲ್ಲ. 
."ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ" ಎನ್ನುತ್ತಿರಿ ಮತ್ತೆ ಲೇಖಕನಿಗೆ ಸಾರ್ವತ್ರಿಕ ಶಾಪ ಏಕೆ ಎಂದೂ ಕೇಳುತ್ತೇರಿ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು. 
"ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ". ಎನ್ನುವ ನೀವು ಅಸಂಖ್ಯಾತ ಹಿಂದೂಗಳ ನಂಬಿಕೆಗೆ ದ್ರೋಹ ಮಾಡುವುದು ಎಷ್ಟು ಸರಿ? 
"‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು" -  ಯಾವ ಅಧಾರಗಳು ?.ಗ಼ಣೆಶನ ಸಮ ಕಾಲೀನರು ದಾಖಲಿಸಿರುವ ಸತ್ಯವೇ??

" ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ" ಎಂದು ಬರೆದಿದ್ದೆರಿ. ಈಗ ಅದನ್ನೇ ನೀವು ಮಾಡಿ...ಪೊಲಿಸರ ವಿರುದ್ದ ಮೊಕದ್ದೊಮ್ಮೆ ಹಾಕಿ. 
" ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ" ಎನ್ನುತ್ತೇರಿ. ಸಾಂಕಾಮಿಕ ರೋಗ ಹರಡದಂತೆ ಎಚ್ಚರವಹಿಸಿದ್ದಾರೆ ಅಷ್ಟೇ 

"ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ". ಇದು ಯಾವುದಕ್ಕೆ ನಿಮ್ಮ ಮುನ್ನುಡಿ ಎಂಬುದು ನಿಮ್ಮ ಮುಂದಿನ ಸಾಲುಗಳಲ್ಲಿ ಗೊತ್ತಾಗುತ್ತದೆ. 
"ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದರು" ಎನ್ನುವ ನೀವು ಆಗ ಬೈರಪ್ಪನವರು ಇಸ್ಲಾಂ ಬಗ್ಗೆ ಬರೆದಿದ್ದರೆ ನೀವೇಕೆ ಸುಮ್ಮನಿದ್ದಿರಿ?? ಅವರ ವಿರುದ್ದ ನ್ಯಾಯಾಲಯಕ್ಕೆ ಏಕೆ ಹೋಗಲಿಲ್ಲಾ .. ಏಕೆಂದರೆ  ಬೈರಪ್ಪನವರು ಬರೆದಿದ್ದು ಸತ್ಯ. ಅದಕ್ಕೆ ನೀವು ಸುಮ್ಮನಾದಿರಿ. "ಮೌನಂ ಸಮ್ಮತಿ ಸೂಚಕಂ"  ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನಸರಿಯಾದ ಕ್ರಮ ..

"ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ" ಎಂದು ನೀವೇ ಹೆಳುತ್ತೇರಿ. ಅದೇ ಕಾರಣಕ್ಕಾಗಿ ಬಂದಿಸಿದ್ದಾರೆ ಎಂದು ಗೊತ್ತಿಲ್ಲವೇ??
" ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಎಂದು ಹಪ ಹಪಿಸುತ್ತೇರಿ.." ನಿಜ ಅದು. ಆದರೆ ನಿಮ್ಮಂತಹ ಡೋಂಗಿ ಮತೀಯವಾದಿ ಲೇಖಕರಿಗೆ ಇದು ಅನ್ವಯಿಸುವುದಿಲ್ಲ.

"ಡುಂಡಿ" ಯೋಗೇಶ ಮಾಸ್ಟರ್ ಅನ್ನೋ "ಹುಚ್ಚು ಮನುಷ್ಯನ ಹತ್ತು ಮುಖಗಳು"

 ಇಂತಹ ಮನುಷ್ಯನಿಂದ ಇನ್ನೆಂತಹ  ಸಂಶೋದನೆ ನಿರೀಕ್ಷಿಸುವುದು ಸಾದ್ಯ ..?











"ಡುಂಡಿ" ಅನ್ನೋ ಸಂಶೋದನೆ ಮತ್ತು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನೋ ವಿಕೃತಿ

ಬಿ ಎಂ ಬಷೀರ್ ಎಂಬ ಮನುಷ್ಯನ ದ್ವಂದದ ಬಗ್ಗೆ ಬರೆಯಲು ವರುಷವೇ ಸಾಲದೇನೋ , ಈ ಕೆಳಗಿನ ಎರಡು ಲೇಖನ ನೋಡಿ , ಒಂದು ಹಿಂದೂಗಳ ದೇವರಾದ ಗಣಪತಿಯನ್ನ ಅವಮಾನಿಸಿದ "ಡುಂಡಿ" ಕಾಂದಬರಿ ಲೇಖಕನ ಬಂದನದ ಕುರಿತು , ಇನ್ನೊಂದು ಪ್ರವಾದಿ ಮೊಹಮದ್ ರವರ ಬಗ್ಗೆ ಕೆಟ್ಟದಾಗಿ ಚಿತ್ರಿಸಿದ "ಇನೋಸೆನ್ಸ್ ಆಫ್ ಮುಸ್ಲಿಂ" ಎಂಬ ಚಿತ್ರ ನಿರ್ದೇಶಕನ ಕುರಿತು.
ಡುಂಡಿ ಲೇಖಕನ ಕುರಿತು ಇರುವ ಅವರ ಸಹಾನುಭೂತಿ, ಇನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನಿರ್ದೇಶಕನ ಕುರಿತು ಅವರಿಗಿಲ್ಲ. ಡುಂಡಿ ಕೃತಿ ಚರ್ಚೆಗೆ ಒಳಪಡಬೇಕು ಅನ್ನೋ ಮನುಷ್ಯ , ಆ ಚಿತ್ರವನ್ನು ಕೂಡ ವಿಮರ್ಶೆಗೆ ಒಳಪಡಿಸಬೇಕು ಅನ್ನೋದಿಲ್ಲ... 
ಪುಸ್ತಕದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯನ್ನು ಖಂಡಿಸುವ ಬಷೀರರು, "ಮುಸ್ಲಿಂ" ಚಿತ್ರದ ವಿರುದ್ದ ನಡೆದ ಪ್ರತಿಭಟನೆಯನ್ನ ಸಮರ್ಥಿಸಿಕೊಳ್ಳುತ್ತಾರೆ...
ಡುಂಡಿ ಪುಸ್ತಕ ರಚಿಸಿದ್ದು ಕೆಲವು ಸಂಶೋದನೆಗಳ ಮೇಲೆ ಎಂದು ಸಮರ್ಥಿಸುವ , ಅವರು "ಇನ್ನೋಸೆನ್ಸ್ ಆಫ್ ಮುಸ್ಲಿಂ " ಅನ್ನ ಒಂದು ಸಂಶೋಧನೆ ಎನ್ನಲಾರರು  
"ಡುಂಡಿ" ಯನ್ನ ನಿಷೇದಿಸುವುದು ಅಭಿವ್ಯಕ್ತಿ ಸ್ವಾತ್ರಂತ್ಯದ ಹರಣ ಎಂದು ಪ್ರತಿಪಾದಿಸುವ ಬಷೀರರು , "ಮುಸ್ಲಿಂ" ಚಿತ್ರವನ್ನು ವಿಕೃತಿ ಅನ್ನುತ್ತಾರೆ .... 
ಪರಧರ್ಮವನ್ನು ಹೀಯಾಳಿಸಿದರೆ ಖುಷಿ ಪಡುವ , ಸ್ವ ಧರ್ಮದ ಬಗ್ಗೆ ಯಾರಾದರು ಟೀಕಿಸಿದರೆ ತಿರುಗಿ ನಿಲ್ಲುವ ಇಂಥವರು ಪತ್ರಿಕೋದ್ಯಮದ ಮಟ್ಟಿಗೆ ಕಪ್ಪು ಚುಕ್ಕೆಯೇ ...

ಎರಡು ಲೇಖನ ಕೆಳಗೆ ಕೊಟ್ಟಿದ್ದೀನಿ , ಬಷೀರ್ ಎಂಬ ಅರೆಬೆಂದ ಮನಸ್ಥಿತಿ ನಿಮಗೆ ಅರ್ಥ ಆಗಲಿ ಅಂತ....    



---------------------------------------------------------------------------------------------------------

ವಾರ್ತಾಭಾರತಿ ದೈನಿಕದ ಶುಕ್ರವಾರದ ಸಂಚಿಕೆಯ ಸಂಪಾದಕೀಯ 

ಗಣಪತಿಗೆ ಮಾಡಿದ ಅಪಚಾರ
ಶುಕ್ರವಾರ - ಆಗಸ್ಟ್ -30-2013

ಒಬ್ಬ ಕೊಲೆಗಾರನನ್ನು, ಒಬ್ಬ ಕ್ರಿಮಿನಲ್‌ನನ್ನು ಬಂಧಿಸುವಾಗ ಪೊಲೀಸರು ಸಾವಿರ ಬಾರಿ ಯೋಚಿಸುತ್ತಾರೆ. ಆದರೆ ಒಬ್ಬ ಲೇಖಕನನ್ನು ಮಾತ್ರ, ಅತ್ಯಂತ ಸುಲಭವಾಗಿ ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಯಾಕೆಂದರೆ ಲೇಖಕರ ಹಿಂದಿರುವುದು, ಅವನ ಬಡಪಾಯಿ ಓದುಗರು ಮಾತ್ರ. ಕಪಟ ರಾಜಕಾರಣಿಗಳು, ಭೂಗತ ಪಾತಕಿಗಳು, ಅಕ್ರಮ ಗಣಿಗಾರಿಕೆ ನಡೆಸುವ ಪಾಳೆಗಾರರು ಇರುವುದಿಲ್ಲ. ಅವನನ್ನು ಬಂಧಿಸಿದರೆ ಕೇಳುವವರು ಯಾರೂ ಇಲ್ಲ ಎನ್ನುವುದು ಪೊಲೀಸರಿಗೆ ಚೆನ್ನಾಗಿ ಗೊತ್ತಿದೆ. ಹೆಚ್ಚೆಂದರೆ, ಒಂದು ಹತ್ತು ಮಂದಿ ಚಿಂತಕರು, ಲೇಖಕರು ಸೇರಿ ಪ್ರತಿಭಟನೆ ನಡೆಸಬಹುದು. ಕೆಲವು ಜನ ಸೇರಿದರೆ ಅವರನ್ನು ಲಾಠಿಯಲ್ಲಿ ಮಣಿಸಬಹುದು. ಮತ್ತೂ ಜನ ಸೇರಿದರೆ ಅವರಿಗೆ ನಕ್ಸಲೀಯರೆಂಬ ಹಣೆಪಟ್ಟಿ ಕಟ್ಟಿ ಅವರನ್ನು ಮುಂದೆ ಹೆಜ್ಜೆ ಇಡದಂತೆ ಮಾಡಬಹುದು. ಬಹುಶಃ ಈ ಸರಳ ಯೋಚ
ನೆಯ ಬಲದಿಂದಲೇ ಇರಬೇಕು, ಗುರುವಾರ ಓರ್ವ ಲೇಖಕನನ್ನು ಪೊಲೀಸರು ಬಂಧಿಸಿ ಎಳೆದೊಯ್ದಿದ್ದಾರೆ. ಅಂದ ಹಾಗೆ ಈತ ಯಾವುದೇ ಮಾಧ್ಯಮಗಳು ದಿನನಿತ್ಯ ನಡೆಸುವಂತೆ ಕೋಮು ಪ್ರಚೋದಕವಾದ ಬರಹಗಳನ್ನು ಬರೆದಿಲ್ಲ. ಗಾಂಧಿಯನ್ನು ಕೊಂದ ಗೋಡ್ಸೆಯನ್ನು ಸಮರ್ಥಿಸಿಲ್ಲ. ಆತ ಒಂದು ಕಾದಂಬರಿಯನ್ನು ಬರೆದ. ಅದೊಂದೇ ಕಾರಣಕ್ಕೆ ಕೃತಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೊಲೀಸರು ಆತನನ್ನು ಬಂಧಿಸಿ ಎತ್ತೊಯ್ದರು. 
‘ಢುಂಢಿ’ ಎನ್ನುವ ಕಾದಂಬರಿಯನ್ನು ಬರೆದ ಲೇಖಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿದ ಅಥವಾ ಬಂಧಿಸಲು ಆದೇಶ ನೀಡಿದ ಪೊಲೀಸ್ ಅಧಿಕಾರಿ ಈ ಕಾದಂಬರಿಯ ಎಷ್ಟು ಹಾಳೆಗಳನ್ನು ಬಿಡಿಸಿದ್ದಾರೆ ಎನ್ನುವುದರ ಕುರಿತಂತೆ ಮಾಹಿತಿಯಿಲ್ಲ. ಕೆಲವು ಮಾಧ್ಯಮಗಳು ಈ ಕೃತಿಯ ಕುರಿತಂತೆ ಅನವಶ್ಯ ಚರ್ಚೆಯನ್ನು ಹುಟ್ಟಿಸಿ ಹಾಕಿರುವುದೇ ಲೇಖಕನ ಬಂಧನಕ್ಕೆ ಕಾರಣವಾಗಿದೆ. ಯಾಕೆಂದರೆ ಢುಂಢಿ ಕಾದಂಬರಿಯ ಕುರಿತಂತೆ ಗಂಭೀರವಾದ ವಿಮರ್ಶೆಯಾಗಲಿ, ಚರ್ಚೆಯಾಗಲಿ ಈವರೆಗೆ ಎಲ್ಲೂ ನಡೆದಿಲ್ಲ. ಈ ಕೃತಿಯ ಕುರಿತಂತೆ ಗದ್ದಲ ಎಬ್ಬಿಸಿದವರು ಸಾಹಿತ್ಯ ವಲಯದವರಲ್ಲ. ಬದಲಿಗೆ ಕೆಲವು ಪತ್ರಿಕೆಗಳ ವರದಿಗಾರರು. ಅದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಓರ್ವ ಹಿರಿಯ ಸಾಹಿತಿ ಮಾಡಿದ ಭಾಷಣ ಮತ್ತು ಪುಸ್ತಕದ ಮುನ್ನುಡಿಯನ್ನಷ್ಟೇ ಓದಿ ಚರ್ಚೆ ಮಾಡಿ, ಸಮಾಜವನ್ನು ಕಲಕಿದ್ದಾರೆ. ಇದೀಗ ಅದರ ಫಲವನ್ನು ಲೇಖಕ ಉಣ್ಣುವಂತಹ ಸ್ಥಿತಿ ನಿರ್ಮಾಣವಾಗಿದೆ.

ವಿಘ್ನ ನಿವಾರಕ ಗಣಪತಿಯ ಕುರಿತಂತೆ ಪುರಾಣದಲ್ಲಿ ನೂರಾರು ಕತೆಗಳಿವೆ. ಗಣಪತಿಯನ್ನು ಭಾರತೀಯರಲ್ಲಿ ಬಹುತೇಕ ಮಂದಿ ವಿಘ್ನ ನಿವಾರಕ ಎಂದು ನಂಬುತ್ತಾರೆ. ಒಂದು ರೀತಿಯಲ್ಲಿ ಅವನ ರೂಪವೇ ವಿಮರ್ಶೆ, ಗೇಲಿಗೆ ಒಳಪಡುತ್ತದೆ. ಆಕಾಶದಲ್ಲಿರುವ ಚಂದ್ರನೇ ಗಣಪತಿಯನ್ನು ನೋಡಿ ನಕ್ಕು ಶಾಪಕ್ಕೆ ಒಳಗಾದ ಕತೆ ನಮ್ಮ ಮುಂದಿದೆ. ಬುಡಕಟ್ಟು ಪ್ರದೇಶಗಳಲ್ಲಿ ಗಣಪತಿಯ ಕುರಿತಂತೆ ಅವರು ತಮ್ಮದೇ ಆದ ನಂಬಿಕೆಗಳನ್ನು ಹೊಂದಿದ್ದಾರೆ. ‘ಢುಂಢಿ’ ಕೃತಿ ಕೆಲವು ಅಧ್ಯಯನಗಳ ಆಧಾರದಲ್ಲಿ ಬರೆದಿರುವುದು. ಉದ್ದೇಶಪೂರ್ವಕವಾಗಿ ಒಂದು ನಂಬಿಕೆಯನ್ನ್ನು ಕೆಡಿಸುವ ಗುರಿ ಆ ಕೃತಿಗಿಲ್ಲ. ಒಂದು ವೇಳೆ ಆ ಕೃತಿ ಅದನ್ನು ನಂಬಿದವರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನ್ಯಾಯಾಲಯಕ್ಕೆ ತೆರಳುವ ಅಧಿಕಾರವಿದೆ. ಆದರೆ, ಶೀತವಾಯಿತೆಂದು ಮೂಗನ್ನೇ ಕತ್ತರಿಸಲು ಹೊರಟವರಂತೆ, ಬರೆದ ಲೇಖಕನನ್ನೇ ಅವಸರದಲ್ಲಿ ಬಂಧಿಸಲು ಹೊರಟಿದೆ ನಮ್ಮ ಕಾನೂನು ವ್ಯವಸ್ಥೆ.
ಲೇಖಕರು ತಮ್ಮ ದುರುದ್ದೇಶಕ್ಕಾಗಿ ಇನ್ನೊಬ್ಬರ ನಂಬಿಕೆಗಳನ್ನು ನೋಯಿಸುವುದು ಎಷ್ಟರ ಮಟ್ಟಿಗೂ ಸರಿಯಲ್ಲ. ಅದು ಎಲ್ಲ ರೀತಿಯಲ್ಲೂ ಖಂಡನೀಯ. ಈ ಹಿಂದೆ ಎಸ್. ಎಲ್. ಭೈರಪ್ಪ ‘ಆವರಣ’ ಕೃತಿಯಲ್ಲಿ ಮುಸ್ಲಿಮರ ಕುರಿತಂತೆ ಹೀನಾಯವಾಗಿ ಬರೆದಿದ್ದರು. ಆದರೆ ಕರ್ನಾಟಕದ ಮುಸ್ಲಿಮರು ಅದನ್ನು ಎಲ್ಲೂ ವಿವಾದಗೊಳಿಸದೆ, ಸಮನ್ವಯವನ್ನು ಕಾಪಾಡಿದರು. ಆಗ ಯಾವ ಪತ್ರಿಕೆಗಳೂ, ಸಂಘಟನೆಗಳೂ ಭೈರಪ್ಪನವರನ್ನು ಬಂಧಿಸಲು ಒತ್ತಾಯಿಸಲಿಲ್ಲ. ಒಂದೆರಡು ಪತ್ರಿಕೆಗಳಂತೂ ಅದೊಂದು ಅಪರೂಪದ ಕೃತಿಯೆಂಬಂತೆ ಪ್ರಚಾರ ನೀಡಿದನು. ಇದೀಗ ಗಣಪತಿಯ ಸಂಶೋಧನಾತ್ಮಕ ಕೃತಿಯ ಬಗ್ಗೆ ತಮ್ಮ ಮೂಗಿನ ನೇರಕ್ಕೆ ವದಂತಿಗಳನ್ನು ಹಬ್ಬಿಸಿ ಅದೇ ಪತ್ರಿಕೆಗಳೇ ಲೇಖಕನ ಬಂಧನಕ್ಕೆ ಕಾರಣವಾಗಿರುವುದು ವಿಷಾದನೀಯ.
ಈ ನಿಟ್ಟಿನಲ್ಲಿ ‘ಢುಂಢಿ’ ಕೃತಿಯ ಲೇಖಕನ ಬಂಧನ ಅಕ್ಷಮ್ಯ. ಅಸ್ಪಷ್ಟ ಮಾಹಿತಿಯ ಆಧಾರದಲ್ಲಿ ಪೊಲೀಸ್ ವ್ಯವಸ್ಥೆ, ಲೇಖನಿಯಂತಹ ಸೂಕ್ಷ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ತಪ್ಪು. ಮೊತ್ತ ಮೊದಲು ಕೃತಿಯನ್ನು ಸಂಯಮದಿಂದ ಓದಬೇಕು. ಹಾಗೆಯೇ ಹಿರಿಯ ಸಾಹಿತಿ, ತಜ್ಞರ ಜೊತೆ ಕೃತಿಯ ಕುರಿತಂತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಸಮಾಜದ ಸೌಹಾರ್ದವನ್ನು ಕೆಡಿಸುವ ದುರುದ್ದೇಶದಿಂದಲೇ ಈ ಕೃತಿ ರಚನೆಯಾಗಿದೆ ಎಂದಾದರೆ ಲೇಖಕನನ್ನು ಬಂಧಿಸಿದರೂ ಅದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ಅಭಿವ್ಯಕ್ತಿ ಸ್ವಾತಂತ್ರ ಯಾವತ್ತೂ ದುರುಪಯೋಗವಾಗಬಾರದು. ಅಭಿವ್ಯಕ್ತಿ ಸ್ವಾತಂತ್ರ ದುರುಪಯೋಗಗೊಂಡರೆ, ನಿಜವಾದ ಲೇಖಕರು, ಪತ್ರಕರ್ತರಿಗೆ ಅದು ಸಮಸ್ಯೆಯಾಗುತ್ತದೆ. ಬಂಧಿಸಲ್ಪಟ್ಟ ಲೇಖಕನನ್ನು ತಕ್ಷಣ ಬಿಡುಗಡೆ ಮಾಡಿ, ಸರಿಯಾದ ದಾರಿಯಲ್ಲಿ ಕಾನೂನು ಹೆಜ್ಜೆಯಿಡಬೇಕು. ಗಣಪತಿ ವಿದ್ಯೆಯ ಅಧಿದೇವತೆ ಎಂಬ ನಂಬಿಕೆಯಿದೆ. ಜ್ಞಾನದ ಅಧಿದೇವತೆಯಾದ ಗಣಪತಿಯ ಹೆಸರಿನಲ್ಲೇ ಇದೀಗ ಜ್ಞಾನವನ್ನು ಅದುಮಿಡಲು ಕೆಲವು ಹಿತಾಸಕ್ತಿಗಳು ಪ್ರಯತ್ನಿಸುತ್ತಿರುವುದು ನಿಜಕ್ಕೂ ಗಣಪತಿಗೆ ಮಾಡುವ ಅಪಚಾರವೇ ಸರಿ.

-------------------------------------------------------------------------------------------
"ಇನ್ನೋಸೆನ್ಸ್ ಆಫ್ ಮುಸ್ಲಿಂ'' ನಿರ್ದೇಶಕನೊಬ್ಬನ ವಿಕಾರ ಮುಖ...
ಸೆಪ್ಟೆಂಬರ್ ೨೪ , ೨೦೧೨


ಇತ್ತೀಚಿಗೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರ ನೋಡಿದೆ. ಆ ಚಿತ್ರವನ್ನು ಮಾಡಿದ ಮನುಷ್ಯನ ವಿಕಾರ ಮುಖವನ್ನಷ್ಟೇ ನನಗೆ ಅದರಲ್ಲಿ ನೋಡಲು ಸಾಧ್ಯವಾಯಿತು.

ಮಹಮ್ಮದ್ ಪೈಗಂಬರ್ ನಾನು ಅತಿ ಇಷ್ಟಪಡುವ ಮನುಷ್ಯ.
೧೫೦೦ ವರ್ಷಗಳ ಹಿಂದೆ ವ್ಯಾಪಾರಿಗಳ ನಾಡಿನಲ್ಲಿ ""ಇಂದಿನಿಂದ ಬಡ್ಡಿ ನಿಷೇಧಿಸಲಾಗಿದೆ'' ಎಂದು ಘೋಷಿಸಿ, ಬಡವರನ್ನು ಸುತ್ತುವರಿದ ಬಡ್ಡಿಯ ಸಂಕಲೆಯನ್ನು ಕಳಚಿದ ಈತನಲ್ಲದೇ ನನ್ನ ಪ್ರವಾದಿ ಇನ್ನೊಬ್ಬನು ಇರಲು ಸಾಧ್ಯವೇ?. ಒಂದು ವೇಳೆ ತನ್ನ ಧರ್ಮವನ್ನು ಪ್ರಚಾರ  ಮಾಡೋದೇ ಪ್ರವಾದಿಯ ಉದ್ದೇಶವಾಗಿದ್ದರೆ ವ್ಯವಸ್ಥೆಯ ವಿರುದ್ಧ ಇಂತಹ ಒಂದು ನಿರ್ಣಯ ಮಾಡಲು ಸಾಧ್ಯವಿತ್ತೆ? ವ್ಯವಸ್ಥೆಯೊಂದಿಗೆ,  ಮುಖ್ಯವಾಗಿ ದೊಡ್ಡ ವ್ಯಾಪಾರಿಗಳೊಂದಿಗೆ, ಶ್ರಿಮಂತರೊಂದಿಗೆ ರಾಜಿ ಮಾಡಿಕೊಂಡಿದ್ದರೆ ಬಹುಶಹ  ಇದಕ್ಕಿಂತಲೂ ವಿಶಾಲವಾಗಿ ಧರ್ಮವನ್ನು ಬೆಳೆಸಬಹುದಿತ್ತೋ ಏನೋ..

ವ್ಯಭಿಚಾರವನ್ನು ಘನತೆ ಎಂದು ತಿಳಿದುಕೊಂಡ ಸಮಾಜದಲ್ಲಿ ವ್ಯಭಿಚಾರ ಮಾಡಬೇಡಿ. ಬೇಕಾದರೆ ಆಕೆಯನ್ನು ಮದುವೆಯಾಗಿ, ಆಕೆಗೆ "ಪತ್ನಿಗೆ ಸಲ್ಲಬೇಕಾದ ಹಕ್ಕು''ಗಳನ್ನು ನೀಡಿ ಎಂದು ಘೋಶಿಸಿದ್ದವರನ್ನು ಪ್ರೀತಿಸದೇ ;ಇರಲು ಸಾಧ್ಯವೇ.

೧೫೦೦ ವರ್ಷಗಳ ಹಿಂದೆಯೇ "ಪಾನ ನಿಷೇಧ'' ಜಾರಿಗೆ ತಂದ ಮನುಷ್ಯನ ಸಂದೇಶ ನನ್ನ ಪಾಲಿಗೆ ಅಪ್ಪಟ ದೇವರ ಸಂದೇಶವೇ ಹೌದು.
"ಇನ್ನು ಮುಂದೆ ಬಡ್ಡಿ ಮನ್ನಾ ಮಾಡಲಾಗಿದೆ. ನಿಮ್ಮ ಸಂಪತ್ತಿನ ಒಂದು ಭಾಗವನ್ನು ಬಡವರಿಗೆ ನೀಡೋದು  ಕಡ್ಡಾಯವಾಗಿದೆ'' ಈ  ಸಂದೇಶಕ್ಕು ಖಡ್ಗ ಕ್ಕೂ ಯಾವುದಾದರು ಸಂಬಂಧ ಇದೆಯೇ?

ಕಾಣದ ಆ ದೇವರ ಕಾಲಿಗಷ್ಟೇ ಬೀಳಬೇಕು. ಮನುಷ್ಯರ ಕಾಲಿಗೆ ಬೀಳುದನ್ನು  ನಿಷೇಧಿಸಲಾಗಿದೆ ಎಂಬ ಅಪ್ಪಟ ಸಮಾನತೆಯ ಕನಸನ್ನು ಕಾಣಲು ಈ ಜಗತ್ತಲ್ಲಿ ಪ್ರವಾದಿ ಮಹಮ್ಮದ್ಗಷ್ಟೇ ಸಾಧ್ಯವಾಯಿತು.

ಸಾಧಾರಣ ಎಲ್ಲ ಧಾರ್ಮಿಕ ಸುಧಾರಕರು ತಮ್ಮ  ಅನುಯಾಯಿಗಳನ್ನು ಶಿಷ್ಯರು ಎಂದು ಕರೆಯುತ್ತಾರೆ. ಆದರೆ ಪ್ರವಾದಿ ತನ್ನ ಅನುಯಾಯಿಗಳನ್ನು “ಸಂಗಾತಿ-(ಸಹಾಬಿ)'' ಎಂದು ಕರೆದರು. ಸಂಗಾತಿ ಅಥವಾ ಕಾಮ್ರೇಡ್ ಎಂಬ ಶಬ್ದವನ್ನು ಮೊದಲು ಬಳಸಿದ್ದು ಮಹಮ್ಮದ್.. ಯಾವತ್ತು ತನ್ನ ಕಾಲಿಗೆ ಬೀಳೋದು, ತನ್ನನ್ನು  ಕಂಡಾಗ ಎದ್ದು ನಿಲ್ಲೋದನ್ನು ಸಂಗಾತಿಗಳಿಗೆ ಮಹಮ್ಮದ್ ನಿಷೇಧಿಸಿದ್ದರು.

೧೫೦೦ ವರ್ಷಗಳ ಹಿಂದೆ ಹೆಣ್ಣಿಗೆ ಆಸ್ತಿಯ ಹಕ್ಕನ್ನು ಘೋಷಿಸಿದ್ದು ಮಹಮ್ಮದ್. ಹೆಣ್ಣನ್ನು ಹೂತುಹಾಕುವ ವ್ಯವಸ್ಥೆಯಲ್ಲಿ, ಹೆಣ್ಣನ್ನು ಮದುವೆಯಾಗುವಾಗ…ಆಕೆಗೆ ಮೆಹರನ್ನು (ವಧುದಕ್ಷಿಣೆ) ಕಡ್ಡಾಯ ಗೊಳಿಸಿದರು. ಅಂದಿನ ದಿನಗಳಲ್ಲಿ ಹೆಣ್ಣಿಗೆ ಇದೊಂದು ಭಾರೀ  ಕೊಡುಗೆಯೇ ಆಗಿತ್ತು.

ಇಸ್ಲಾಂ ಖಡ್ಗದಿಂದ ಆಗಿತ್ತೆ? ತನ್ನ ಚಿಂತನೆಯನ್ನು ಹರಡುವಾಗ ಮಹಮ್ಮದ್ ಒಬ್ಬಂಟಿಯಾಗಿದ್ದರು. ಒಬ್ಬಂಟಿಯಾಗಿ ಅವರು ತನ್ನ ಹೋರಾಟವನ್ನು ಮಾಡಿದರು. ಅವರಿಗೆ ಮೊದಲು ಜೊತೆಯಾದುದು  ಸಂಗಾತಿ ಅಬುಬಕರ್. ಅನಾಥ ಮಹಮ್ಮದ್ನನ್ನು ಸಾಕಿದ್ದು ದೊಡ್ಡಪ್ಪ ಅಬು ತಾಲಿಬ್. ವಿಶೇಷವೆಂದರೆ ಅಬು ತಾಲಿಬ್ ತನ್ನ ಜೀವನದ ಕೊನೆಯವರೆಗೂ ಇಸ್ಲಾಂ ಸ್ವೀಕರಿಸಲಿಲ್ಲ. ಆದರೆ ಅವರ ನಡುವೆ ಸಂಬಂಧಕ್ಕೆ ಅದರಿಂದ ಯಾವ  ಧಕ್ಕೆಯಾಗಲಿಲ್ಲ. ಇಸ್ಲಾಂ ಸ್ವೀಕರಿಸುವಂತೆ ಮಹಮ್ಮದ್ ಸದಾ ದೊಡ್ಡಪ್ಪನನ್ನು ಮನವೊಲಿಸುತ್ತಲೇ ಇದ್ದರು. ದೊಡ್ಡಪ್ಪ ಸಾಯುವ ಹಂತದಲ್ಲಿರುವಾಗ  ಇಸ್ಲಾಂ ಸ್ವೀಕರಿಸುವಂತೆ  ಮಾಡಲು ಕೊನೆಯ ಪ್ರಯತ್ನ ನಡೆಸಿದರು. "ಇಸ್ಲಾಮ್ಮ್ ಸ್ವೀಕರಿಸಿದರೆ ಸಮಾಜದಲ್ಲಿ ನನ್ನ ಘನತೆಗೆ ಕುಂದುಂಟಾಗುತ್ತದೆ'' ಎಂದು ಅಬುತಾಲಿಬ್ ಆ ಆಹ್ವಾನವನ್ನು ನಿರಾಕರಿಸಿದರು. ದೊಡ್ಡಪ್ಪ ಸಾವಿನ ಕೊನೆಯ ಕ್ಷಣದಲ್ಲಿದ್ದಾಗ ಮುಹಮ್ಮದ್ ಅವರ ದೇಹವನ್ನೆಲ್ಲ ತನ್ನ ಕೈಯಿಂದ ಸವರಿದರಂತೆ. "ನನ್ನ ಕೈ ಸ್ಪರ್ಶದಿಂದ ದೊಡ್ಡಪ್ಪ ಸ್ವರ್ಗ ಸೇರಲಿ'' ಎನ್ನುವ ಆಶೆಯಿಂದ. ವಿಶೇಷವೆಂದರೆ, ಅಬುತಾಲಿಬ್ ಇಸ್ಲಾಂ ಸ್ವೀಕರಿಸದೆ ಇದ್ದರೂ ಪ್ರವಾದಿಯನ್ನು  ಶತ್ರುಗಳಿಂದ ತಮ್ಮ ಜೀವ ಇರುವವರೆಗೂ ರಕ್ಷಿಸಿದರು. ಅಬುತಾಲಿಬ್ ಒಬ್ಬರಿಗೆ ಹೆದರಿ ಮಹಮ್ಮದರನ್ನು ಶತ್ರುಗಳು ಕೊಲ್ಲದೆ ಉಳಿಸಿದ್ದರು. ಪರಸ್ಪರರ ಚಿಂತನೆ ಬೇರೆಯಾಗಿದ್ದರು ಪರಸ್ಪರರನ್ನು ಪ್ರೀತಿಸುತ್ತಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದ ಅತಿ ದೊಡ್ಡ ಉಧಾಹರಣೆ ಇಲ್ಲಿದೆ.

ಇಸ್ಲಾಮಿನಲ್ಲಿ  ಮೊತ್ತ ಮೊದಲ ಪ್ರಾರ್ಥನೆಯ  ಕರೆ ಅಥವಾ ಅಜಾನ್ ನೀಡಿರುವುದು ಒಬ್ಬ ನಿಗ್ರೋ. ಅವರ ಹೆಸರು ಬಿಲಾಲ್. ಗುಲಾಮಿ ವ್ಯವಸ್ಥೆಯನ್ನು  ಪ್ರಶ್ನಿಸಿದ ಮಹಾ ಮನುಷ್ಯನೋಬ್ಬನನ್ನು ಯಾರಿಗಾದರು ದ್ವೇಷಿಸಲು ಸಾಧ್ಯ ಎಂದರೆ, ಆತನ ಹೃದಯ ಕೊಳೆತಿದೆ ಎಂದೇ ಅರ್ಥ.
"ನಾನು ದೇವರಲ್ಲ, ನಿಮ್ಮಂತೆಯೇ ಮನುಷ್ಯ.'' ಎಂದು ಪದೇ ಪದೇ ಘೋಷಿಸಿ…ಎಲ್ಲೂ ತನ್ನ ಭಾವಚಿತ್ರವು ಇರದಂತೆ ಜಾಗೃತೆ ವಹಿಸಿದ ಅಪ್ಪಟ ಮನುಷ್ಯ ಮಹಮ್ಮದ್. ಅವರ  ಚಿತ್ರ ಒಂದಿದ್ದರೆ ಇಂದು ಅದನ್ನೇ  ದೇವರಾಗಿ ಪೂಜಿಸುತ್ತಿದ್ದರು. ಗಲ್ಲಿ ಗಲ್ಲಿಗಳಲ್ಲಿ  ಅವರ ಪ್ರತಿಮೆಗಳು ನಿಂತಿರುತ್ತಿತ್ತು. ಇಂದಿಗೂ  ಪ್ರವಾದಿ ಮಹಮ್ಮದ್ ದೇವರು ಅಲ್ಲ ಎಂದು ದೃಡವಾಗಿ ನಂಬಿರೋದರ ಹಿಂದೆ ಅವರ ದೂರದೃಷ್ಟಿ ಕೆಲಸ ಮಾಡಿದೆ. ಹೆಚ್ಚಿನ ಧರ್ಮ ಪ್ರಚಾರಕರು ಬೋಧನೆ ಮಾಡುತ್ತಾ ಮಾಡುತ್ತಾ ತಾವೇ ದೇವರಾದರು. ಆದರೆ ಮಹಮ್ಮದ್ ಅದನ್ನು ನಖಶಿಖಾಂತ ತಡೆದರು.

ನಾನು ಹೊಸದಾಗಿ ಧರ್ಮವನ್ನು ಸೃಷ್ಟಿಸುತ್ತಿಲ್ಲ. ಹಿಂದೆ ಆಗಿ ಹೋಗಿರುವ  ಜೀಸಸ್, ಮೋಶೆ, ಅಬ್ರಾಹಾಂ,  ದಾವುದ್ ಎಲ್ಲರು ಇಸ್ಲಾಮ್ನ ಪ್ರವಾದಿಗಳೇ. ಅವರು ಹೇಳಿದ್ದನ್ನೇ ನಾನು ಹೇಳುತ್ತಿದ್ದೇನೆ. ಹೊಸತಾಗಿ ಏನು ಹೇಳುತ್ತಿಲ್ಲ..ಎಂದು ಹೇಳಿದ್ದು ಮಾತ್ರವಲ್ಲ, ಕ್ರಿಶ್ಚಿಯನ್, ಯಹೂದಿಗಳು ನಂಬುವ ಪ್ರವಾದಿಗಳ ಹೆಸರನ್ನು ಹೇಳುವಾಗಲು ಕಡ್ಡಾಯವಾಗಿ ಅವರಿಗೆ ದೇವರು  ಶಾಂತಿ ನೀಡಲಿ  ಎಂದು ಹೇಳಿ ಗೌರವ ಸೂಚಿಸಲು  ಕಳಿಸಿದ್ದು ಮಹಮ್ಮದ್. ಈ ಮನುಷ್ಯ ನನಗೆ ಇಷ್ಟವಾಗದೆ ಇರೋದಕ್ಕೆ ಕಾರಣಗಳು ಇವೆಯೇ?

ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಪ್ರತಿಭಟಿಸುವ, ಅದನ್ನು ನಿಷೇಧಿಸಬೇಕು ಎಂದು ಒತ್ತಾಯಿಸುವ ಒಂದು ಸಮೂಹವನ್ನು ಮತ್ತೆ “ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ” ಅಪರಾಧಿಗಳನ್ನಾಗಿ ಕಟಕಟೆಯಲ್ಲಿ ನಿಲ್ಲಿಸುತ್ತಿರೋದು. ಆ ಸಿನಿಮಾಕ್ಕೆ ಬಂದ ಪ್ರತಿಭಟನೆಯು  ಅದೂ ಅಭಿವ್ಯಕ್ತಿಯೇ ಅಲ್ಲವೇ? “ಇನ್ನೋಸೆನ್ಸ್ ಆಫ್ ಮುಸ್ಲಿಂ…” ನಿರ್ದೇಶಕ ಸಿನಿಮಾದಂತಹ ಅದ್ಭುತ ಮಾಧ್ಯಮವನ್ನು ದುರುಪಯೋಗ ಪಡಿಸಿಕೊಂಡಿದ್ದಾನೆ. ಯಾವುದೇ ವೈಚಾರಿಕ ಚರ್ಚೆಗಳಿಲ್ಲದ  ಈ ಚಿತ್ರ , ಕೋಟ್ಯಂತರ ಜನ ಪ್ರೀತಿಸುವ ಮನುಷ್ಯನೊಬ್ಬನ ಮೇಲೆ ದಾಳಿ ನಡೆಸುವ ಉದ್ದೇಶಕ್ಕಾಗಿಯೇ ಮಾಡಿರೋದಾಗಿದೆ.. ಒಂದು ಗಂಬೀರ ಚರ್ಚೆಗೆ ಸಾಧ್ಯ ಮಾಡಿಕೊಡುವ ಸಿನಿಮ ಮಾಧ್ಯಮ ಇಂಥವರ ಕೈಯಲ್ಲಿ ದುರ್ಬಳಕೆಯಾದಾಗ, ನಾಳೆ ಅದರ ಪರಿಣಾಮವನ್ನು ಸೃಜನ ಶೀಲ ನಿರ್ದೇಶಕರು ಎದುರಿಸಬೇಕಾಗುತ್ತದೆ. ಕ್ಯಾಮರದಲ್ಲಿ ಸಿನಿಮ ತೆಗೆದರೆ ಅಭಿವ್ಯಕ್ತಿ. ಅದೇ ಕ್ಯಾಮರದಲ್ಲಿ ಒಬ್ಬನ ತಲೆಗೆ ಹೊಡೆದರೆ ಅದನ್ನು ಸಿನಿಮ ಎಂದು ಕರೆಯಲಾಗೋದಿಲ್ಲ. ಅದು ಹಿಂಸೆ, ಕ್ರೌರ್ಯ…ಅದನ್ನೇ ಆ ನಿರ್ದೇಶಕ ಮಾಡಿದ್ದಾನೆ.

ಇನ್ನೋಸೆನ್ಸ್ ಆಫ್ ಮುಸ್ಲಿಂ ಚಿತ್ರವನ್ನು ಮಾಡಿದ ನಿರ್ದೇಶಕ ಖಂಡಿತವಾಗಿಯೂ ಒಂದು ಭಯಾನಕ ರೋಗದಿಂದ ನರಳುತ್ತಿದ್ದಾನೆ. ಆ ರೋಗ ಬೇಗ ವಾಸಿಯಾಗಿ ಆತ ಗುಣಮುಖನಾಗಲಿ ಎಂದು ಹಾರೈಸುವ. ಅವನ ಉದ್ದೇಶವೇ ಕ್ರೌರ್ಯವನ್ನು ಉದ್ಧೀಪಿಸೋದು.. ಸಹನೆ ಮತ್ತು ತಾತ್ಸಾರದಿನ್ದಷ್ಟೇ ಆ ಕ್ರೌರ್ಯವನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯ. ಅದಕ್ಕೆ ಅವನಂತೆಯೇ  ಪ್ರತಿಕ್ರಯಿಸಲು ಹೋದಲ್ಲಿ...ಅವನು ತನ್ನ ಉದ್ದೇಶವನ್ನು ಸಾಧಿಸ ತೊಡಗುತ್ತಾನೆ. ಹಿಂಸಾ ರೀತಿಯ ಪ್ರತಿಭಟನೆಯನ್ನೇ ಮುಂದಿಟ್ಟುಕೊಂಡು ತನ್ನ ಚಿತ್ರವನ್ನು ಸಮರ್ಥಿಸ ತೊಡಗುತ್ತಾನೆ.

ಪ್ರಮುಖ ಸುದ್ದಿಗಳು ........

ಲೇಖಕರು - ರಿತೇಶ್ ಕುಮಾರ್ ಶೆಟ್ಟಿ 


ಪ್ರಮುಖ ಸುದ್ದಿಗಳು ........
೧) ಗುಜುರಿ ಅಂಗಡಿಯವನು ನೀಡಿದ ಸುಳಿವಿನ ಮೇರೆಗೆ ಇನ್ನೋರ್ವ ಶಾಂತಿ ದೂತನ ಬಂಧನ.
೨) ಪಾಕಿಸ್ಥಾನದಲ್ಲಿ ದ್ರೋನ್ ದಾಳಿಯಲ್ಲಿ ಸಾಯುವುದಕಿಂತ ತಿಹಾರ್ ಜೈಲ್ನಲ್ಲಿ ಬಿರಿಯಾನಿ ತಿಂದು ಕೇಂದ್ರ ಸರಕಾರ ನೀಡುವ ಉಚಿತ ಕಾನೂನ್ ನೆರವನ್ನು ಸದುಪಯೋಗ ಪಡಿಸಿಕೊಳ್ಳುವುದೇ ಸೂಕ್ತ ಅನಿಸಿದ್ದರಿಂದ ಭಾರತಕ್ಕೆ ಬಂದೆ - ಸೆರೆ ಸಿಕ್ಕ ಶಾಂತಿ ದೂತ.
೩) ಈ ವಿಷಯದ ಮೇಲೆ ನಗರದ ಬಾರ ಒಂದರಲ್ಲಿ ಅಶಾಂತ ಮೂರ್ತಿಯವರ ನೇತ್ರತ್ವದಲ್ಲಿ ಸಭೆ ಸೇರಿದ ವಿಕಾರವಾದಿಗಳು ಹೀಗೆ ಸರಣಿ ಬಂಧನಗಳು ನಡೆಯುವುದರಿಂದ ಒಂದು ನಿರ್ಧಿಷ್ಟ ಕೋಮಿನ ಹೆಸರು ಕೆಡುತ್ತದೆ ಆದ್ದರಿಂದ ತಿಂಗಳಿಗೆ ಒಬ್ಬನಿಗಿಂತ ಜಾಸ್ತಿ ಭಯೋತ್ಪಾದಕರ ಬಂಧನಕ್ಕೆ ಕೇಂದ್ರ ಸರಕಾರ ಆಸ್ಪದ ನೀಡಬಾರದು ಎಂದು ನಿರ್ಣಯ ಮಂಡಿಸಲಾಯಿತು ಮತ್ತು ಬೂಬ,ಬೂದಿ,ದೆವ್ವೂರ ಆದಿಯಾಗಿ ಎಲ್ಲ ವಿಕಾರವಾದಿಗಳು ಗಡ್ದಕೆರೆದು ಇದನ್ನು ಅನುಮೋದಿಸಿದರು ಮತ್ತು ಈಗಾಗಲೇ ತುಂಡನ ಮೂಲಕ ಜೈಲು ಕೋಟ ಭರ್ತಿಯಾದ್ದರಿಂದ ಸೆರೆಹಿಡಿಯಲ್ಪಟ್ಟ ಶಾಂತಿ ದೂತನನ್ನು ಬಿಟ್ಟು ಮುಂದಿನ ತಿಂಗಳಲ್ಲಿ ಹಿಡಿಯಬೇಕು ಎಂದು ಕೇಂದ್ರ ಸರಕಾರವನ್ನು ಒತ್ತಾಯ ಮಾಡಲಾಯಿತು.
೪) ಇದಕ್ಕೆ ಸ್ಪಂದಿಸಿದ ಕೇಂದ್ರ ಸಚಿವರೋರ್ವರು ಈಗಾಗಲೇ ಬಂದಿಸಿದ್ದರಿಂದ ಬಿಡುವುದು ಅಸಾಧ್ಯ ಆದರೆ ಕೇಂದ್ರದ ಮಹಾತ್ವಕಂಕ್ಷಿ ಯೋಜನೆಯಾದ ಕಾನೂನು ನೆರವನ್ನು ಭಟ್ಕಳದಿಂದಲೆ ಶುರು ಮಾಡುವುದಾಗಿ ಆಶ್ವಾಸನೆ ನೀಡಿದರು.
೫) ಇತ್ತೀಚಿನ ವರದಿ ನಿಲುಮೆ ಯಾ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿದ ನಿರ್ವಾಹಕರು ಕಾನೂನು ಮೊರೆ ಹೋಗುವುದಾಗಿ ತಿಳಿಸಿದರು ಮತ್ತು ಇದನ್ನು ಕೇಳಿ ಬೂಸಿ ಬೂಬರವರು ತಬ್ಬಿಬ್ಬು ಗೊಂಡು ನಗರದ ಲಲಿತ್ ಬಾರನಲ್ಲಿ ಪೆಗ್ ಹಾಕಲು ಕೂತುಕೊಂಡರು ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಸಾಯಿತಿಗಳು ಮತ್ತು ಸೋಮುವಾದಿಗಳು

ಲೇಖಕರು - ವಿಶ್ವನಾಥ್ ರೆಡ್ಡಿ 









(ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ)

ಅದ್ಹೇಗೆ ಬಂತೋ ಗೊತ್ತಿಲ್ಲ ಸೋಮವಾದಿ ಕುಟ್ಟಣ್ಣನಿಗೆ, ಮಧ್ಯಪಾನ ಮಾಡಿದ ನಂತರ ಮನುಷ್ಯನಲ್ಲಾಗುವ ಬದಲಾವಣೆಗಳ ಕುರಿತು ಒಂದು ಲೇಖನ ಬರೆಯಬೇಕೆಂಬ ಬಯಕೆ ಶುರುವಾಗಿಬಿಟ್ಟಿತ್ತು. ಅದಕ್ಕಾಗಿ ಆತ ಬೆಂಗಳೂರಿನ ಬಾರೊಂದರಲ್ಲಿ ಕುಳಿತು ಗುಪ್ತವಾಗಿ ಕುಡುಕರ ದೇಹ ಭಾಷೆಗಳನ್ನು ಅಧ್ಯಯನ ಮಾಡಲು ತೀರ್ಮಾನಿಸಿದ. ಒಂದು ದಿನ ಕತ್ತಲಾಗುತ್ತಿದ್ದಂತೆ ಬಾರೊಳಗೆ ಹೊಕ್ಕು ಮೂಲೆಯೊಂದರ ಟೇಬಲ್ ಹಿಡಿದು ಕುಳಿತುಕೊಳ್ಳುವಷ್ಟರಲ್ಲಿ, 10-15 ಜನರಿದ್ದ ಇನ್ನೊಂದು ಗ್ಯಾಂಗು ಬಂದು ಈತನ ಹಿಂದಿನ ಇನ್ನೊಂದು ಟೇಬಲ್‌ನಲ್ಲಿ ಆಸೀನವಾಯಿತು. ತಿರುಗಿ ನೋಡುವಷ್ಟರಲ್ಲಿ ಆತನಿಗೆ ಕಾಣಿಸಿದ್ದು ಖ್ಯಾತ ಸಾಯಿತಿ  , ರಾಬರಿ ಅಂಗಡಿಯ ಮಾಲೀಕ ಮತ್ತು ಅವನ ಪಟಾಲಮ್ಮು. ಅವರೊಂದಿಗೆ, ಯಾವಾಗಲೂ ವಡಾ ವಡಾ ಅಂತ ವದರುವ ಅತ್ಯಾತೀತವಾದಿ ಸುವರ್ ಸಂಜು ಇದ್ದದ್ದನ್ನು ನೋಡಿ, ಸೋಮವಾದಿ ಕುಟ್ಟಣ್ಣ ನಿಗೆ ಆಕಾಶಕ್ಕೆ ಮೂರೇ ಗೇಣು! ಯಾಕೆಂದರೆ ಆತನ ಟಾಪಿಕ್ಕಿಗೆ ಸರಿಯಾದ ವ್ಯಕ್ತಿಗಳೇ ಸಿಕ್ಕಿದ್ದರು.!

ಕುಟ್ಟಣ್ಣ ಅವರ ಟೇಬಲ್ ಕಡೆಗೇ ಕಿವಿಯಾಗಿಸಿ ಕುಳಿತಿದ್ದ. ಮೊದಮೊದಲು ಶಾಂತವಾಗಿಯೇ ಶುರುವಾದ ಗುಂಡು ಪಾರ್ಟಿ, ಬರು ಬರುತ್ತಾ ಸೋಮವಾದಿಗಳ ಕಡೆಗೇನೇ ನಿಶಾನೆ ಇಡತೊಡಗಿತ್ತು. ಕ್ಯಾತ ಸಾಯಿತಿ  ಮಾತನಾಡುತ್ತಿದ್ದ; ಈ ಸೋಮವಾದಿಗಳ ಕಿರಿ ಕಿರಿ ಜಾಸ್ತಿಯಾಯ್ತು. ಏನೇನೋ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡೋ ನಮ್ಮ ಸೀಕ್ರೇಟು ಅವರಿಗೆ ಗೊತ್ತಾಗಿಬಿಟ್ಟಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ನಮಗೆ ಹೆಚ್ಚಿನ ಅವಮಾನವಾಗುತ್ತಿದೆ. ಏನೋ ಇದುವರೆಗೂ ನಾನೆಲ್ಲೂ ಅದರ ಹೆಸರೇ ಕೇಳಿಲ್ಲ, ಅಂತ ರೋಗ ನನಗೆ ಬಂದಿದೆಯೆಂದು ಸುಳ್ಳೇ ಸುದ್ದಿ ಹಬ್ಬಿಸುತ್ತಿದ್ದಾರೆ. ಅದೆಲ್ಲ ಸುಳ್ಳು.ಬೇಕಾದರೆ ನೀವೇ ನೋಡಿ, ಅಂದವನೇ ಎದ್ದು ನಿಂತು ಹಿಮ್ಮುಖವಾಗಿ ಬಗ್ಗಿ ನಿಂತುಬಿಟ್ಟ!. ಅಷ್ಟರಲ್ಲೇ ನಾಲ್ಕು ಪೆಗ್ಗು ಹೊಡೆದಿದ್ದನಲ್ಲ ಸುವರ್ ಸಂಜು, ಎದ್ದು ನಿಂತವನೇ ಅಣ್ಣಾ ನೀನು ಕೂತ್ಕೋಳಣ್ಣಾ ನಾವು ಇಲ್ಲವಾ ನಿನ್ನ ತಮ್ಮಂದಿರು.... ನಿನಗೆ ಅವಮಾನ ಮಾಡಿದ ಮೇಲೆ ಅದು ನಮಗೆ ಆದಂಗಣ್ಣಾ..... ನಮ್ಮ ಸಾಹೇಬರು ಇದ್ದಾರೆ ಸುಜ್ಞಾನಿ ರುದ್ದರ್. ಅವರ ಹೆಸರು ಕೇಳಿದರೆ ಸಾಕು ಈ ಸೋಮುವಾದಿಗಳೆಲ್ಲ ಗಡ ಗಡ ಗಡ.... ಅಂದವನೇ ಏ ವೇಯ್ಟರ್ ಒನ್ ಮೋರ್ ಪೆಗ್ ಅಂತ ಕೂಗಿ ಕುಳಿತುಕೊಂಡುಬಿಟ್ಟ.

ಕುಟ್ಟಣ್ಣ ಮೊದಲಿನಿಂದ ಶುರುವಾದ ಅವರ ಎಲ್ಲಾ ಸಂಭಾಷಣೆಯನ್ನೂ ಗುಪ್ತವಾಗಿ ನೋಟ್ಸ್ ಮಾಡಿಕೊಳ್ಳುತ್ತಿದ್ದ. ಆತನಿಗೆ ಒಂದಂತೂ ಸ್ಪಷ್ಟವಾಗಿ ಹೋಗಿತ್ತು; ಎಣ್ಣೆ ಹೊಡೆಯದ ಹೊರತು ಇವರಿಗೆ ಮಾತನಾಡೋಕೆ ಸುತಾರಾಂ ಧೈರ್ಯ ಬರುವದಿಲ್ಲ. ಎಣ್ಣೆಯೇ ಇವರ ಎನರ್ಜಿ! ಸರಕಾರ ಮಧ್ಯಪಾನ ನಿಷೇಧದಂತ ಕಾಯಿದೆಯೇನಾದರೂ ಜಾರಿಗೆ ತಂದರೆ ಇವರ ಬದುಕೇ ದುಸ್ತರವಾಗುತ್ತದೆ!ಇವರಿಗೆ ಅತ್ಯುತ್ತಮ ಯೋಚನೆಗಳು ಹುಟ್ಟುವದು ಬಾರುಗಳಲ್ಲಿಯೇ!

ಕುಟ್ಟಣ್ಣ ಇನ್ನೊಂದು ಗಮನಿಸಿದ ಅಂಶವೆಂದರೆ ವೇಯ್ಟರ್ ಬಿಲ್ಲು ತಂದಿಡುವ ಮೊದಲೇ ಮೂತ್ರ ವಿಸರ್ಜನೆಯ ನೆಪದಲ್ಲಿ ಟೇಬಲ್ ಪೂರಾ ಖಾಲಿಯಾಗಿದ್ದುದು.
ತಂಡದ ಎಲ್ಲಾ ಸದಸ್ಯರು ಒಬ್ಬೊಬ್ಬರಾಗಿ ಕೆಳಗಡೆ ಜಮಾವಣೆಯಾಗಿದ್ದರು. ಅವರನ್ನೆಲ್ಲಾ ವಿಚಾರ ಗೋಷ್ಟಿಗೆ ಕರೆಸಿದ ತಪ್ಪಿಗೆ, ಮುಖ ಹಿಂಜಿಕೊಂಡೇ ರಾಬರಿ ಅಂಗಡಿ ಮಾಲೀಕ ಬಿಲ್ಲು ಚುಕ್ತಾ ಮಾಡಿ ಬಂದ. ಹಿಂದೆಯೇ ಕೆಳಗಿಳಿದು ಬಂದ ಕುಟ್ಟಣ್ಣನಿಗೆ ಕಾಣಿಸಿದ್ದನ್ನು ಅವರ ಇನ್ನೊಂದು ಮುಖ. .....!.

ಅದೇ ಇನ್ನೊಂದು ರೋಚಕ ಅಧ್ಯಾಯ...............ಸಧ್ಯದಲ್ಲೇ ನಿರೀಕ್ಷಿಸಿ.!!

(ಸಶೇಷ)

ಬುಧವಾರ, ಆಗಸ್ಟ್ 28, 2013

ಮಂಗಳೂರು : ಭಾರಿ ಹೊಗೆ ದುರಂತ, ಯಾವುದೇ ಜೀವ ಹಾನಿ ಇಲ್ಲ

ಬಡಾಯಿ ನ್ಯೂಸ್ , ಮಂಗಳೂರು
ಸೆ ೨೬ : ನಿನ್ನೆ ಮಂಗಳೂರಿನ ಜನ , ಒಂದು ವಿಚಿತ್ರ , ವಿಸ್ಮಯ ಮತ್ತು ಕೌತುಕ ಘಟನೆಗೆ ಸಾಕ್ಷಿ ಆಗಬೇಕಾಯಿತು. ನಿನ್ನೆ ಮಧ್ಯಾಹ್ನ ಸುಮಾರು ೧೨ ಗಂಟೆ ಸಮಯಕ್ಕೆ ನಗರದ ಹೆಸರಾಂತ ಜನ ಓದದ ಪತ್ರಿಕೆ “ವಾಂತಿ ಭಾರತಿ “  ಕಚೇರಿ ಇಂದ ಹೊರಬರುತ್ತಿದ್ದ ದಟ್ಟ ಹೊಗೆ ಈ ಕೌತುಕಕ್ಕೆ ಮೂಲ ಕಾರಣ ...
ಮೊದಲು ಚಿಕ್ಕದಾಗಿ ಶುರುವಾದ ಹೊಗೆ, ನಂತರ ದಟ್ಟವಾಗಿ ರೂಪಗೊಂಡಿದ್ದು ಜನರ ಭೀತಿಗೆ ಕಾರಣವಾಗಿತ್ತು.. ಮೊದಲು ಸ್ಥಳಿಯರು, ಮಾರಾಟವಾಗದೇ ತುಂಬಿಕೊಂಡ ಪತ್ರಿಕೆಯ ರಾಶಿಗೆ ಬೆಂಕಿ ಬಿದ್ದಿರಬೇಕು ಎಂದು ಊಹಿಸಿದ್ದರು. ಆದರೆ ಹೊಗೆಯ ವಾಸನೆಯು ಪೇಪರ್ ಸುಟ್ಟಂತೆ ಇರದೇ ಚರ್ಮ ಸುಟ್ಟಂತೆ ಇದ್ದುದ್ದರಿಂದ ಜನ ಗೊಂದಲಕ್ಕೆ ಒಳಗಾದರು ಎಂದು ತಿಳಿದು ಬಂದಿದೆ...

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ , ಕಚೇರಿಯ ಒಳ ನುಗ್ಗಿ ನೋಡಿದ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ... ಕಾರಣವೆನಂದರೆ ಹೊಗೆಯು ಯಾವುದೇ ಬೆಂಕಿಯ ಸ್ವರೂಪದಿಂದ ಬರದೆ, ಸಂಪಾದಕರಾದ ಮಾನ್ಯ “ಬೂಬ” ಅವರ ಚೇಂಬರ್ ನಿಂದ, ಅದರಲ್ಲೂ ಅವರ ಕುರ್ಚಿಯಿಂದ, ಅದರಲ್ಲೂ ಅವರ ಅವರು ಕೂತ ಕುರ್ಚಿಯ ಕೆಳಗಿನಿಂದ  ಬರುತ್ತಿತ್ತಂತೆ. ಮೂರ್ಛೆ ತಪ್ಪಿ ಬಿದ್ದಿದ್ದ ಬೂಬರನ್ನು ಪ್ರಥಮ ಚಿಕಿತ್ಸೆಯ ನಂತರ
ಹೆಚ್ಚಿನ ವಿಚಾರಣೆ ನಡೆಸಲಾಗಿ ಸಂಪಾದಕರು ಫೇಸ್ಬುಕ್ ನಲ್ಲಿದ್ದ ನಮೋ ಅಭಿಮಾನಿಗಳು, ಮುಖ್ಯವಾಗಿ ನಿಲುಮೆಯಲ್ಲಿ ಮೋದಿ ಪರ ಇರುವ ಹವಾವನ್ನು ಮತ್ತು ಸಂಪಾದಕರಿಗೆ ನಮೋ ಅಭಿಮಾನಿಗಳು  ಮಂಗಳಾರತಿ ತೆಗೆದಿದ್ದನ್ನು ನೋಡಿ ತಾಳಲಾಗದೆ , ಹೊಟ್ಟೆ ಉರಿದುಕೊಂಡು, ಆ ಉರಿಯು ಶಾಖವಾಗಿ, ತಳ ಸೇರಿ, ಸುಟ್ಟು ಕರಕಲಾಗಿ, ಕೆಟ್ಟ ಹೊಗೆಯಾಗಿ ಹೊರಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.
ತಕ್ಷಣ ಕಾರ್ಯಪ್ರವೃತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸಂಪಾದಕರ ತಳಕ್ಕೆ ಒಂದಷ್ಟು ನೀರು ಹೊಡೆದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ... 
ಈ ಬಗ್ಗೆ ಬಡಾಯಿ ನ್ಯೂಸ್ ಜೊತೆ ಮಾತನಾಡಿರುವ ಆಸ್ಪತ್ರೆಯ ಹೆಸರಾಂತ ವೈದ್ಯ ಡಾಕ್ಟರ್ ಪಟ್ಟಾಭಿ ವಿಜಯ್ ಮಲ್ಯ ಅವರು , ಈ ತರಹದ ಖಾಯಿಲೆಯನ್ನು ವೈಜ್ಞಾನಿಕ ಭಾಷೆಯಲ್ಲಿ “ ಹೆತ್ಲಾಂಡಿ ಕ್ಯುಲೋಸಿಸ್” ಎಂದು ಕರೆಯುತ್ತಾರೆ ಎಂದು ವಿವರಿಸಿದರು... ಈ ಕಾಯಿಲೆಯು ಇತ್ತೀಚಿಗೆ ಬುದ್ದಿಜೀವಿಗಳಲ್ಲಿ ಸಾಮಾನ್ಯವೆಂದು ಆದರೆ ನಮ್ಮ “ಬೂಬ” ಅವರು ಕಾಯಿಲೆಯ ಗರಿಷ್ಟ ಮಟ್ಟ ತಲುಪಿದರಿಂದ ಇಷ್ಟು ಹೊಗೆ ಬರಲು ಕಾರಣ ಎಂದು ತಿಳಿಸಿದರು. ಈ ಕಾಯಿಲೆಯೇ ತಡೆಗಟ್ಟಲು ಯಾವುದೇ ಔಷದ ಸದ್ಯಕ್ಕೆ ಲಭ್ಯವಿಲ್ಲ ಈ ಸಲದ ಲೋಕಸಭಾ ಚುನಾವಣೆಯ ನಂತರ ಇದು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ತಿಳಿಸಿದ್ದಾರೆ
ಘಟನೆಯಿಂದ ಮಾನ್ಯ “ಬೂಬ” ಅವರ ತಳಕ್ಕೆ ಗಂಭೀರ ಗಾಯಗಳಾಗಿದ್ದು , ತಳವು ತನ್ನ ಆಕಾರವನ್ನೇ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ... ಚಿಕಿತ್ಸೆ ಮುಂದುವರೆದಿದ್ದು ಕೆಲವು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ  ಹಾಗೂ ಕಡ್ಡಾಯವಾಗಿ ಮನುಷ್ಯರು ತಿನ್ನುವ ಪದಾರ್ಥಗಳನ್ನು ಮಾತ್ರ ತಿನ್ನಬೇಕೆಂದು “ಬೂಬ“ ಅವರಿಗೆ ಸೂಚಿಸಲಾಗಿದೆ ಎಂದರು.
ಖಂಡನೆ : ಈ ಘಟನೆಯನ್ನು ಅತ್ಯಂತ ಖೇದಕರ ಎಂದು “ಕರ್ನಾಟಕ ಕಾರ್ಯ ಮರೆತ ಪತ್ರಕರ್ತರ ಒಕ್ಕೂಟ” ಖಂಡಿಸಿದೆ ... ಒಬ್ಬ ಸಂಪಾದಕನ ತಳ ಸುಡುವ ಮಟ್ಟಕ್ಕೆ ಅವರನ್ನ ಉರಿಸುವುದು ಅತ್ಯಂತ ಅಮಾನವೀಯ ಇದು ಮೋದಿ ಅಭಿಮಾನಿಗಳ ದುಷ್ಕೃತ್ಯದ ಪರಮಾವದಿ ಎಂದು ಕಿಡಿಕಾರಿದ್ದಾರೆ , ಈ ಬಗ್ಗೆ ಚರ್ಚಿಸಲು ರಾತ್ರಿ ೯.೩೦ ಕ್ಕೆ ಕಾನಿಷ್ಕ ಬಾರ್ ನಲ್ಲಿ ಸಭೆ ಕರೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒಕ್ಕೂಟ ತಿಳಿಸಿದೆ.
ಶ್ರದ್ದಾಂಜಲಿ : ವಿಷಯ ತಿಳಿದ ನಮೋ ಬ್ರಿಗೆಡ್ ನ ಕಾರ್ಯಕರ್ತರು ಮಂಗಳೂರಿನಲ್ಲಿ  “ಬೂಬ” ಅವರ ತಳಕ್ಕೆ ಶ್ರದ್ದಾಂಜಲಿ ಕೋರಿದ್ದಾರೆ ಎಂದು ತಿಳಿದು ಬಂದಿದೆ....
ಬಡಾಯಿ ಕ(ತ)ಳಕಳಿ : ಬಡಾಯಿ ನ್ಯೂಸ್ ಇಂತಹ ಹೀನ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ, ಕ್ಯಾತ ಸಂಪಾದಕರ ಕಥೆ ಹೀಗಾದರೆ ಸಣ್ಣ ಪುಟ್ಟ ಪತ್ರಕರ್ತರ ಸ್ಥಿತಿಯ ಬಗ್ಗೆ ಬಡಾಯಿ ನ್ಯೂಸ್ ಕ(ತ)ಳವಳ ವ್ಯಕ್ತಪಡಿಸುತ್ತಿದೆ ... ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ “ಬಡಾಯಿ ನ್ಯೂಸ್” ಆಗ್ರಹಿಸುತ್ತದೆ....
ಇತ್ತೀಚಿಗಷ್ಟೇ “ಬಡಾಯಿ ನ್ಯೂಸ್” ನಲ್ಲಿ ಮಾನ್ಯರ ಸಂದರ್ಶನ ಪ್ರಕಟವಾಗಿದ್ದು ಸ್ಮರಿಸಬಹುದು...   


ವಿಶೇಷ ಸೂಚನೆ : ಇದನ್ನ ಓದಿದ ಮೇಲೆ ಯಾರದಾದರೂ ತಳ ಸುಟ್ಟರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ “ಬಡಾಯಿ ನ್ಯೂಸ್” ಜವಾಬ್ದಾರರಾಗುವುದಿಲ್ಲ.

"ಬೂಸಿ ಬಷೀರ್" ಅವರೊಂದಿಗೆ ಬಡಾಯಿ ನ್ಯೂಸ್

ಕನ್ನಡದ ಹೆಮ್ಮೆಯ ಅಂತರಜಾಲ ಪತ್ರಿಕೆ ಬಡಾಯಿ ನ್ಯೂಸ್ , ಕನ್ನಡದ ಕ್ಯಾತ ಪತ್ರಕರ್ತ ಎಂದು ತಮ್ಮನ್ನು ತಾವು ಕರೆದುಕೊಳ್ಳುವ “ಬೂಸಿ ಬಷೀರ್” ಅವರನ್ನ ಸಂದರ್ಶಿಸಿದೆ ... ಮಾನ್ಯರು ವಾಂತಿ ಭಾರತಿ ಎಂಬ ಯಾರು ಓದದ ಪತ್ರಿಕೆಯ ಎಮ್ಮೆಯ ಸಂಪಾದಕರು ...
ಸಂದರ್ಶನ ನಡೆಸಿಕೊಟ್ಟವರು - ಮುದ್ದೆಶ್...


ಮುದ್ದೆಶ್ : ಕನ್ನಡದ ಎಮ್ಮೆಯ ಪತ್ರಕರ್ತ ಬೂಸಿ ಬಷೀರ್ ಅವರಿಗೆ ಬಡಾಯಿ ನ್ಯೂಸ್ ಗೆ ಸ್ವಾಗತ
ಬೂಸಿ ಬಷೀರ್ : ಧನ್ಯವಾದಗಳು
ಮುದ್ದೆಶ್ : ಮೊದಲು ನಿಮಗೆ ಬಂದಿರುವ “ಮಂಕೆಶ್” ಪ್ರಶಸ್ತಿಗೆ ಅಭಿನಂದನೆ ಕೋರುತ್ತೇನೆ ... ಪ್ರಶಸ್ತಿ ಪಡೆದ ನಂತರ ಹೇಗೆ ಅನ್ನಿಸ್ತ ಇದೆ ?
ಬೂಬ : ಧನ್ಯವಾದಗಳು , ಪ್ರಶಸ್ತಿ ಕೊಂಚ ದುಬಾರಿ ಆಗಿತ್ತು ಅನ್ನೋದು ಬಿಟ್ಟರೆ, ಉಳಿದಂತೆ ತುಂಬಾ ಸಂತೋಷವಾಗಿದೆ ..
ಮುದ್ದೆಶ್ : ನನಗೆ ಅರ್ಥ ಆಗಲಿಲ್ಲ ..
ಬೂಬ : ಇರಲಿ ಬಿಡಿ... ಅದನ್ನು ಇನ್ನೊಮ್ಮೆ ಮಾತಾಡೋಣ .
ಮುದ್ದೆಶ್ : ಸಾರ್ ತಾವು ಹಿಂದೂ ಸಂಘಟನೆಗಳ ಬಗ್ಗೆ ಮತ್ತು ಮೋದಿ ಬಗ್ಗೆ ತುಂಬಾ ಪೂರ್ವಗ್ರಹವಾಗಿ ಬರೆಯುತ್ತಿರಿ ಅನ್ನೋ ಅಪಾದನೆ ಇದೆ , ಇದಕ್ಕೆ ಎನಂತಿರಿ ?
ಬೂಬ : ನೋಡಿ ಹಿಂದೂ ಸಂಘಟನೆಗಳು ಈ ದೇಶದಲ್ಲಿ ಮುಸ್ಲಿಂರನ್ನ ನೆಮ್ಮದಿ ಆಗಿ ಬದುಕಲು ಬಿಡುತ್ತಿಲ್ಲ... ನೋಡಿ ಹಿಂದೂಗಳು ದೀಪಾವಳಿ ದಿನ ಆಟಂ ಬಾಂಬ್ ಹೊಡೆಯಬಹುದು ಆದರೆ ಮುಸ್ಲಿಮರು ಕೊಂಚ ಅದಕ್ಕಿಂತ ದೊಡ್ಡ ಬಾಂಬ್ ಹಾಕಿದ ಕೂಡಲೇ ಉಗ್ರಗಾಮಿ ಅಂತ ಕರೆಯುತ್ತಾರೆ ... ಇದು ತಪ್ಪಲ್ಲವೇ ?
ಮುದ್ದೇಶ : ಯಾವುದೇ ಬಾಂಬ್ ಸ್ಪೋಟ ಆದ ತಕ್ಷಣ , ಹಿಂದೂ ಸಂಘಟನೆಗಳ ಹೆಸರು ಹೇಳುತ್ತಿರಲ್ಲ ಯಾಕೆ ? ಮುಸ್ಲಿಂ ಸಂಘಟನೆಗಳು ಮಾಡಿಲ್ಲ ಅಂತ ನಿಮಗೆ ಅಷ್ಟು ಖಚಿತತೆ ಹೇಗೆ ? ಯಾವ ತನಿಖಾ ಸಂಸ್ಥೆ ನಿಮ್ಮನ್ನು ತನಿಖೆಗೆ ಒಳಪಡಿಸಿಲ್ಲವೇ?
ಬೂಬ : ನೋಡಿ ಮೊತ್ತ ಮೊದಲಿಗೆ ನಾನು ಏನು ಬರೆದರೂ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವವರು ತುಂಬಾ ಕಡಿಮೆ , ಹಾಗಾಗಿ ತನಿಖಾ ಸಂಸ್ಥೆಗಳ ತನಕ ಹೋಗಲ್ಲ. ... ಮತ್ತು ನಮಗೆ ಸಹಾಯ ಮಾಡುವವರ ಮೆಚ್ಚಿಸೋಕ್ಕೆ ಇದೆಲ್ಲ ಮಾಡಲೇ ಬೇಕಾಗುತ್ತದೆ ...
ಮುದ್ದೇಶ : ಹಿಂದೂಗಳು ಬಂಧನ ಆದಾಗ ನೀವು ತೋರಿಸುವ ಉತ್ಸಾಹ , ಮುಸ್ಲಿಮರು ಬಂಧನ ಆಗುವಾಗ ತೋರಿಸೊಲ್ಲ ಯಾಕೆ ?
ಬೂಬ : ನೋಡಿ ನಾನೊಬ್ಬ ಸೆಕ್ಯುಲರ್ ಬುದ್ದಿಜೀವಿ ... ಬುದ್ದಿಜೀವಿಗಳು ಹೀಗೆ ಇರ್ಬೇಕು ಅಂತ ಒಂದು ಪದ್ಧತಿ ಇದೆ .ಏನೋ ಮುಸ್ಲಿಂ ಯುವಕರು ಸರಿಯಾದ ಮಾರ್ಗದರ್ಶನ ಇಲ್ಲದೆ ಹೀಗೆ ಮಾಡಿರುತ್ತಾರೆ... ಅಷ್ಟಕ್ಕೂ ಇದೆಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು .
ಮುದ್ದೇಶ : ಮೋದಿಯ ಬಗ್ಗೆ ಹೇಳಿ
ಬೂಬ : ಮೋದಿ ಒಬ್ಬ ನರಹಂತಕ , ೨೦೦೨ ಕೋಮುಗಲಭೆಗೆ ಮೋದಿಯೇ ಕಾರಣ.
ಮುದ್ದೇಶ : ನೀವು ಏನೇ ಹೇಳಿದ್ರು , ಸುಪ್ರಿಂ ಕೋರ್ಟ್ ರಚಿಸಿದ್ದ ತನಿಖಾ ಸಂಸ್ಥೆ ಮೋದಿ ನಿರಪರಾದಿ ಅಂತ ಹೇಳ್ತಾ ಇದೆ... ಅಷ್ಟಕ್ಕೂ ಮೋದಿಗಿಂತ ಮೊದಲು ಕೂಡ ಗುಜರಾತಲ್ಲಿ ಕೋಮು ಗಲಭೆಗಳು ನಡೆದಿತ್ತು ಅದನ್ನ ಯಾಕೆ ನೀವು ಪ್ರಸ್ತಾಪಿಸುವುದಿಲ್ಲ....
ಬೂಬ : ಸುಪ್ರೀಂ ಕೋರ್ಟ್ ಏನು ಹೇಳಿದೆ ಅಂತ ನನಗೆ ಮಾಹಿತಿ ಇಲ್ಲ ...  ಕೋಮುಗಲಭೆಗೆ ಕಾರಣ ಆದ ಎಲ್ಲರನ್ನ ವಿರೋದಿಸುತ್ತೇನೆ ... ಆದ್ರೆ ಅವರೆಲ್ಲ ಯಾರು ಅಂತ ನನಗೆ ಸರಿಯಾದ ಮಾಹಿತಿ ಇಲ್ಲ.
ಮುದ್ದೇಶ : ಗುಜರಾತ್ ಅಭಿವೃದ್ದಿ ಬಗ್ಗೆ ಹೇಳಿ ?
ಬೂಬ  : ಗುಜರಾತ್ ನಲ್ಲಿ ಆ ಸಮಸ್ಯೆ .. ಈ ಸಮಸ್ಯೆ ಇದೆ, (ನೂರಾರು ವೆಬ್ಸೈಟ್ ಲಿಂಕ್ ಗಳನ್ನ ತೋರಿಸಿ )... ಈಗ ಹೇಳಿ ಅಭಿವೃದ್ದಿ ಎಲ್ಲಿದೆ..
ಮುದ್ದೇಶ : ಆದರೆ ಗುಜರಾತ್ ಸಾದನೆ ಬಗ್ಗೆ ಇದಕ್ಕಿಂತ ಜಾಸ್ತಿ ಲಿಂಕ್ ಗಳು ಸಿಗ್ತಾವೆ ಅಲ್ಲವೇ ? ಅಷ್ಟಕ್ಕೂ ಇಂತಹ ಸಮಸ್ಯೆಗಳು ಎಲ್ಲ ರಾಜ್ಯದಲ್ಲೂ ಸಾಮಾನ್ಯ ತಾನೇ ?
ಬೂಬ : ನೋಡಿ ನಾನು ಇಡಿ ಗುಜರಾತ್ ನ ಗೂಗಲ್ ಮ್ಯಾಪ್ ಲ್ಲಿ ನೋಡಿದ್ದೀನಿ , ನನಗೆ ಅಂತಹ ಅಭಿವೃದ್ದಿ ಕಾಣಿಸಿಲ್ಲ.
ಮುದ್ದೇಶ : ನಿಮಗೆ ಕಾಣಿಸಿಲ್ಲ ಅಂದರೆ ಅಭಿವೃದ್ದಿ ಆಗಿಲ್ಲ ಅಂತ ಅರ್ಥವೇ ?
ಬೂಬ : ಹೌದು
ಮುದ್ದೇಶ : ಹೋಗಲಿ ಕೊಡೊ ಲಿಂಕ್ ಗಳು ನಿಮ್ಮ ಪತ್ರಿಕೆದು ಆಗಿರದೆ , ಬೇರೆ ಯಾವುದು ಪತ್ರಿಕೆದು ಆಗಿರುತ್ತೆ ಯಾಕೆ ?
ಬೂಬ : (ಕಣ್ಣಂಚಿನಲ್ಲಿ ನೀರು ತುಂಬಿಕೊಂಡು) ನಮ್ಮ ಪತ್ರಿಕೆಯನ್ನ ಯಾರು ನಂಬಲ್ಲ... ಯಾವುದೋ ಕಳಪೆ ಹಾಸ್ಯ ಓದಿದ ಹಾಗೆ ಹರಳೆಣ್ಣೆ ಮುಖ ಮಾಡಿಕೊಂಡು ಎದ್ದು ಹೋಗ್ತಾರೆ ಅದಕ್ಕಾಗಿ ಹೀಗೆ ...
ಮುದ್ದೇಶ : ಹೋಗಲಿ ಮುಂಬೈ ಅತ್ಯಾಚಾರ ಪ್ರಕರಣ ಬಗ್ಗೆ ಹೇಳಿ
ಬೂಬ : ಇದರಲ್ಲಿ ಭಜರಂಗ ದಳದ ಯುವಕರ ಕೈವಾಡ ಇದೆ , ಅವರೇ ಇಂಥಹ ಕೆಲಸ ಮಾಡಲು ಸಾದ್ಯ
ಮುದ್ದೇಶ : ಆದರೆ ಅಲ್ಲಿ ಸೆರೆಯದವರಲ್ಲಿ ನಾಲ್ವರು ಮುಸ್ಲಿಮರು ಮತ್ತು ಒಬ್ಬ ಹಿಂದೂ ಹುಡುಗ ಅಲ್ಲವೇ ..
ಬೂಬ : ಹೌದಾ ... (ಒಂದು ನಿಮಿಷ ಮೌನ )... ನೋಡಿ ಆ ಹಿಂದೂ ಯುವಕನೇ ಈ ನಾಲ್ಕು ಅಮಾಯಕ ಮುಸಿಮರನ್ನ ಸಿಲುಕಿಸಿದ್ದಾನೆ...  ಅವ್ನು RSS ಏಜೆಂಟ್ ಅಂತ ಸಾಭೀತು ಮಾಡೋಕ್ಕೆ ಸುವೀನ್ ನೂರಿಂಜೆಗೆ ಹೇಳ್ತಿನಿ ..
ಮುದ್ದೇಶ : ಹೌದು ಇತ್ತೀಚಿಗೆ “ಓಲುಮೆ” ಯಲ್ಲಿ  ಕಾಣಿಸಿಕೊಂಡಿದ್ದಿರಿ ಏನು ವಿಶೇಷ
ಬೂಬ : ಏನ್ ಮಾಡೋಣ , ಮೊದಲೇ ಜನ ನನ್ನ ಪತ್ರಿಕೆ ಓದಲ್ಲ... ಮೊದಲು ಫೇಸ್ಬುಕ್ ನನ್ನ ವಾಲ್ ಲ್ಲಿ ಚರ್ಚೆ ಮಾಡಿಸ್ತ ಇದ್ದೆ... ಈಗ ಅಲ್ಲೂ ಬರಲ್ಲ ... ಇನ್ನು ನಿಲುಮೆಗೆ ಬಂದಾದ್ರು ನಾನು ಬದುಕಿದ್ದೇನೆ ಅಂತ ತೋರಿಸಬೇಕು ಇಲ್ಲ ಅಂದ್ರೆ ಮುಂದಿನ ತಿಂಗಳು “ಅಲ್ಲಿಂದ” ಪೇಮೆಂಟ್ ಬರಲ್ಲ ..
ಮುದ್ದೇಶ : ನೀವು ಸರಿಯಾದ ಚರ್ಚೆಗೆ ಸಿಗಲ್ಲ... ಓಡಿ ಹೋಗ್ತಿರ ಅಂತ ಆಪಾದನೆ ಇದೆ...
ಬೂಬ : ಯಾರೋ ಮನೆ ಕಾಂಪೌಂಡ್ ಗೆ ಉಚ್ಚೆ ಹುಯ್ತಾ ನಿಂತುಕೊಂಡ್ರೆ ಬಿಡ್ತಾರ ? ಓಡಿ ಹೋಗುತ್ತಾ ಹುಯ್ಯಬೇಕು ... ಮೊದಲಿನಿಂದನು ಓಡುತ್ತ ಉಚ್ಚೆ ಹುಯ್ದೆ ಅಭ್ಯಾಸ ..
ಮುದ್ದೇಶ : ಕಾಲು ಮೇಲೆಲ್ಲಾ ಆಗಲ್ವೇ ? ಅಸಹ್ಯ ...
ಬೂಬ : ಅಭ್ಯಾಸ ಆಗಿದೆ, ಮೊದಮೊದಲು ಕಸಿವಿಸಿ ಆಗ್ತಾ ಇತ್ತು ... ಈಗ ಅಂತದ್ದು ಏನಿಲ್ಲ
ಮುದ್ದೇಶ : ಕೊನೆಯದಾಗಿ ಮುಸ್ಲಿಂ ಮತ್ತು ದಲಿತರ ಬಗ್ಗೆ ಹೇಳಿ
ಬೂಬ : ನೋಡಿ ಮುಸ್ಲಿಮರು ಮತ್ತು ದಲಿತರು ಒಂದೇ ಹೊಕ್ಕಳಬಳ್ಳಿಯ ಮಕ್ಕಳ ಹಾಗೆ
ಮುದ್ದೇಶ : ಹೇಗೆ ವಿವರಿಸಿ ..
ಬೂಬ : ವಿವರಣೆ ಕೇಳಬೇಡಿ ಧಮ್ಮಯ್ಯ ...
ಮುದ್ದೇಶ : ಹೋಗಲಿ ಮುಂದಿನ ಯೋಜನೆ ಹೇಳಿ
ಬೂಬ : ಯೋಜನೆ ಏನು ಮಾಡೋದು ಅಂತಾನೆ ಗೊತ್ತಾಗ್ತಾ ಇಲ್ಲ ... ಮೊದಲು ಕಾಂಗ್ರೆಸ್ ನ ಹೊಗಳಿ ಬರಿತಿವಿ ಅಂತ ೪ ಜನ ಕಾಂಗ್ರೆಸ್ಸಿಗರು ಪೇಪರ್ ತಗೊಳ್ಲೋರು , ಈಗ ವಿವಯ ಕರ್ನಾಟಕ ಆ ಕೆಲಸ ನಮಗಿಂತ ಚೆನ್ನಾಗಿ ಮಾಡುತ್ತಿರೋದು ಇಂದ ನಮ್ಮನ್ನ ಮೂಸೋರು ಇಲ್ಲ ...
ಮುದ್ದೇಶ : ಹಾಗಾದರೆ ಮುಂದೆ ?
ಬೂಬ : ಇದ್ದೆ ಇದಿಯಲ್ಲ ಗುಜರಿ ಅಂಗಡಿ , ಹಳೇ ಟೊಪ್ಪಿ ಹಾಕ್ಕೊಂಡು ಕೂರೋದು ಅಷ್ಟೇ
ಮುದ್ದೇಶ : ಧನ್ಯವಾದ ಬೂಸಿ ಬಷೀರ್ ರೆ ... ನಿಮ್ಮೊಂದಿನ ಮಾತುಕತೆಗೆ
ಬೂಬ : ಆಯ್ತು ಆಯ್ತು ,,, ಸಿದ್ದರಾಮಯ್ಯ ಎಲ್ಲಾದರು ಸಿಕ್ಕಿದ್ರೆ ಸ್ವಲ್ಪ ನನ್ನ ಬಗ್ಗೆ ಹೇಳಿ ಪ್ಲೀಸ್ ...
ಮುದ್ದೇಶ : ಓಕೆ ಸರ್ 

 ವಿಶೇಷ ಸೂಚನೆ : ಈ ಸಂದರ್ಶನವು ಯಾವುದೇ ವ್ಯಕ್ತಿಗೆ ಅಥವಾ ಪತ್ರಿಕೆಗೆ ಸಂಭಂದ ಪಟ್ಟಿರುವುದಿಲ್ಲ... ಹಾಗೇನಾದರು ಸಂಭಂದ ಕಂಡು ಬಂದರೆ ಅದನ್ನು ಕನ್ನಡ ಪತ್ರಿಕೋದ್ಯಮದ ದುರಂತ ಎಂದು ಪರಿಗಣಿಸತಕ್ಕದ್ದು