ಗುರುವಾರ, ಡಿಸೆಂಬರ್ 5, 2013

ಸೌಹಾರ್ದಗಿತ್ತಿ ಮತ್ತು ಲಿಪ್ ಸ್ಟಿಕ್


ಅದು ಯಾರದೋ ಮನೆಯ ಅಂಗಳ.... ಅಂಗಳದ ಮಧ್ಯ ಏಟು ತಿನ್ನುತ್ತ ಬಿದ್ದಿರುವ ಒಬ್ಬ ವ್ಯಕ್ತಿ , ಆತನ ಹಣೆಯ ಮೇಲೆ “ ಸೆಕ್ಯುಲರ್ ಪತ್ರಕರ್ತ” ಅಂತ ಬರೆದಿದೆ .

ಆತನ ಸುತ್ತ ಆತನಿಗೆ ಥಳಿಸುತ್ತಿರೋ ೩೦ – ೪೦ ಯುವಕರು , ಅವರೆಲ್ಲರ ಹಣೆಯ ಮೇಲೆ “ಅಮಾಯಕ ಸೆಕ್ಯುಲರ್ ಯುವಕರು” ಅಂತ ಬರೆದಿದೆ.... ಅಮಾಯಕ  ಯುವಕರ ಥಳಿತಕ್ಕೆ, ಸೆಕ್ಯುಲರ್ ಪತ್ರಕರ್ತ ಹೈರಾಣಾಗಿ ಹೋಗಿದ್ದಾನೆ . ಆತನ ಮುಖದ ತುಂಬೆಲ್ಲ ರಕ್ತದ ಛಾಯೆ , ಮೂಗು , ಬಾಯಲ್ಲಿ ಧಾರಾಕಾರ ರಕ್ತ ಸುರಿಯುತ್ತಿದೆ. ಆತ ಅಕ್ಷರಶಃ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. 
ಅನತಿ ದೂರದಲ್ಲಿ ಒಬ್ಬಳು ಮಹಿಳೆ , ಇವರತ್ತ ಕೂಗುತ್ತಿದ್ದಾಳೆ. ಅವಳ ಹಣೆಯ ಮೇಲೆ “ಸೌಹಾರ್ದಗಿತ್ತಿ” ಅಂತ ಬರೆದಿದೆ... ಆಕೆ ಕೂಗುತ್ತಿರುವುದು ಪತ್ರಕರ್ತನನ್ನ ಉದ್ದೇಶಿಸಿ, ಆಕೆ ಚೀರುತ್ತಿದ್ದಾಳೆ “ ನಿನ್ನ ಮೇಲೆ ದಾಳಿ ಮಾಡಿರುವುದು ತಾಲಿಬಾಲಿನಿಯರಲ್ಲ , ಪಾಕಿಸ್ತಾನಿಯರಲ್ಲ, ಅವರೆಲ್ಲ ಭಾರತೀಯರು, ಸೆಕ್ಯುಲರ್ಗಳು , ಅಮಾಯಕರು .... ಯಾವುದೇ ಕಾರಣಕ್ಕೂ ಪ್ರತಿರೋಧ ತೋರಬೇಡ .... ಪ್ರತಿರೋಧ ತೋರಿದರೆ ನೀನು ಕೋಮುವಾದಿ ಆಗಿಬಿಡುತ್ತಿಯ.... ನೋವಾದರೂ , ಅವಮಾನ ಆದರು ಸಹಿಸಿಕೋ ... ಆದರೆ ಪ್ರತಿರೋಧ ತೋರಿ ಕೋಮುವಾದಿ ಆಗಬೇಡ “ ಎಂದು ಚೀರಿ ಚೀರಿ ಹೇಳುತ್ತಿದ್ದಳು .... 
ಸೌಹರ್ದಗಿತ್ತಿಯ ಮಾತು ಪತ್ರಕರ್ತನಿಗೆ ಎಷ್ಟು ಕೇಳಿತೋ, ಏನೋ ... ಆತ ನೋವಿನಿಂದ ಪ್ರಜ್ಞೆ ಕಳೆದುಕೊಂಡ.

ಥಳಿಸಿ ಥಳಿಸಿ ಸುಸ್ತಾದ ಅಮಾಯಕ ಯುವಕರು ಸೌಹರ್ದಗಿತ್ತಿಯ ಬಳಿ ಸಾರಿದರು ...
ಅಮಾಯಕ ಯುವಕರಲ್ಲೊಬ್ಬ ಸೌಹರ್ದಗಿತ್ತಿಯ ನೋಡಿ “ ನೀವು ತುಂಬಾ ಚೆಂದ ಕಾಣುತ್ತಿದ್ದಿರ ಮೇಡಂ” ಎಂದ... ಸೌಹರ್ದಗಿತ್ತಿಗೆ  ಅಮಾಯಕ ಯುವಕರ ಮೇಲಿದ್ದ ಪ್ರೀತಿ ಒಂದು ಇಂಚು ಜಾಸ್ತಿ ಆಯ್ತು.
ಮುಂದುವರಿದ ಯುವಕ “ ಮೇಡಂ ನಿಮ್ಮ ಡ್ರೆಸ್ಸ್ ಗೆ ಮತ್ತು ಲಿಪ್ ಸ್ಟಿಕ್ ಸರಿ ಹೊಂದುತ್ತಿಲ್ಲ ಅಂದ.... ಈಗ ಸೌಹರ್ದಗಿತ್ತಿಯ ಮುಖ ಕಪ್ಪಿಟ್ಟಿತು , ಒಂದು ವಿಷಾದದ ಛಾಯೆ ಮುಖ ಆವರಿಸಿತು... ಅಷ್ಟು ಹೊತ್ತು ಆಕೆಗಿರದಿದ್ದ ಕಳವಳ ಈಗ ಶುರುವಾಗಿತ್ತು. ಈ ಡ್ರೆಸ್ಸ್ ಗೆ ಕೆಂಪು ಬಣ್ಣದ ಲಿಪ್ ಸ್ಟಿಕ್ ಚೆನ್ನಾಗಿ ಹೊಂದುತ್ತೆ ಅಂದ ಅದೇ ಅಮಾಯಕ. 

ಸೌಹಾರ್ದಗಿತ್ತಿ ತನ್ನ ಬ್ಯಾಗ್ ಎಲ್ಲ ಹುಡುಕಿದಳು ... ಇಲ್ಲ ಕೆಂಪು ಬಣ್ಣದ ಲಿಪ್ ಸ್ಟಿಕ್ ತಂದಿಲ್ಲ !!!!!!.... ಛೆ ಎಂತ ತಪ್ಪು ನಡೆದು ಹೋಯಿತು ಅಂದು ಕೊಂಡವಳ ದೃಷ್ಟಿ ಏಟು ತಿಂದು ಅರೆಶವ ಆಗಿದ್ದ ಪತ್ರಕರ್ತನ ಕಡೆ ಹೋಯಿತು....
ಸೀದಾ ಪರ್ತಕರ್ತನ ಬಳಿ ನಡೆದವಳೇ , ಆತನ ಮುಖದಿಂದ ಇಳಿಯುತ್ತಿದ್ದ ರಕ್ತವ ತನ್ನ ಬೆರಳಿನಿಂದ ಬಳಿದು ತುಟಿಗೆ ಸವರಿಕೊಂಡು , ಅಮಾಯಕ ಯುವಕರ ಕಡೆ ತಿರುಗಿ ಕೇಳಿದಳು “ ಈಗ ಹೇಗಿದೆ ...? “

“ಅದ್ಭುತ “ ಅನ್ನೋ ಉತ್ತರ ಬಂತು ಅಮಾಯಕ ಯುವಕರ ಕಡೆಯಿಂದ ....

2 ಕಾಮೆಂಟ್‌ಗಳು:

  1. ಈ ಧಾಳಿ ನಡೆಸಿದ ಅಮಾಯಕರ ಮೇಲೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸೆಕ್ಯುಲರ್ ಪತ್ರಿಕೆ ದಿನಾ ಇದೆ ವಿಷಯದ ಬಗ್ಗೆ ಪುಂಖಾನುಪುಂಖವಾಗಿ ಬರೆಯುತ್ತಿದೆ, ಆದರೆ ಕೇಳುವವರೇ ಇಲ್ಲ. ಕೊನೆಗೂ ಈ ಅಮಾಯಕರ ನಿಜಬನ್ಣ ಸೆಕ್ಯುಲರ್ ಪತ್ರಿಕೆ ಮತ್ತು ಪತ್ರಕರ್ತರು ಅನುಭವಿಸಬೇಕಾಗಿ ಬಂತು, ಅಷ್ಟೇ. ಮಂಗಳೂರಿನ ಹೋಂ ಸ್ಟೇ ಧಾಳಿಯ ರೂವಾರಿ ಶುಧ್ಧ ಸಿಕ್ಯುಲರ್ ಪಾತ್ರಕರ್ತನುಉ ಸದ್ಯದಲ್ಲೇ ಇಂಥದೊಂದು ಪಾಠ ಕಲಿಯುವ ಸಂಭವವಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ!

    ಪ್ರತ್ಯುತ್ತರಅಳಿಸಿ
  2. ಖಂಡಿತ ನಿಜ .... ಹಾವಿಗೆ ಹಾಲೆರೆದ ಪರಿಣಾಮವನ್ನ , ಇವರು ಅನುಭವಿಸುವ ಪರಿಸ್ಥಿತಿ ಬಂದಿದೆ

    ಪ್ರತ್ಯುತ್ತರಅಳಿಸಿ