ಬುಧವಾರ, ಆಗಸ್ಟ್ 28, 2013

ಮಂಗಳೂರು : ಭಾರಿ ಹೊಗೆ ದುರಂತ, ಯಾವುದೇ ಜೀವ ಹಾನಿ ಇಲ್ಲ

ಬಡಾಯಿ ನ್ಯೂಸ್ , ಮಂಗಳೂರು
ಸೆ ೨೬ : ನಿನ್ನೆ ಮಂಗಳೂರಿನ ಜನ , ಒಂದು ವಿಚಿತ್ರ , ವಿಸ್ಮಯ ಮತ್ತು ಕೌತುಕ ಘಟನೆಗೆ ಸಾಕ್ಷಿ ಆಗಬೇಕಾಯಿತು. ನಿನ್ನೆ ಮಧ್ಯಾಹ್ನ ಸುಮಾರು ೧೨ ಗಂಟೆ ಸಮಯಕ್ಕೆ ನಗರದ ಹೆಸರಾಂತ ಜನ ಓದದ ಪತ್ರಿಕೆ “ವಾಂತಿ ಭಾರತಿ “  ಕಚೇರಿ ಇಂದ ಹೊರಬರುತ್ತಿದ್ದ ದಟ್ಟ ಹೊಗೆ ಈ ಕೌತುಕಕ್ಕೆ ಮೂಲ ಕಾರಣ ...
ಮೊದಲು ಚಿಕ್ಕದಾಗಿ ಶುರುವಾದ ಹೊಗೆ, ನಂತರ ದಟ್ಟವಾಗಿ ರೂಪಗೊಂಡಿದ್ದು ಜನರ ಭೀತಿಗೆ ಕಾರಣವಾಗಿತ್ತು.. ಮೊದಲು ಸ್ಥಳಿಯರು, ಮಾರಾಟವಾಗದೇ ತುಂಬಿಕೊಂಡ ಪತ್ರಿಕೆಯ ರಾಶಿಗೆ ಬೆಂಕಿ ಬಿದ್ದಿರಬೇಕು ಎಂದು ಊಹಿಸಿದ್ದರು. ಆದರೆ ಹೊಗೆಯ ವಾಸನೆಯು ಪೇಪರ್ ಸುಟ್ಟಂತೆ ಇರದೇ ಚರ್ಮ ಸುಟ್ಟಂತೆ ಇದ್ದುದ್ದರಿಂದ ಜನ ಗೊಂದಲಕ್ಕೆ ಒಳಗಾದರು ಎಂದು ತಿಳಿದು ಬಂದಿದೆ...

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ , ಕಚೇರಿಯ ಒಳ ನುಗ್ಗಿ ನೋಡಿದ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದಾರೆ... ಕಾರಣವೆನಂದರೆ ಹೊಗೆಯು ಯಾವುದೇ ಬೆಂಕಿಯ ಸ್ವರೂಪದಿಂದ ಬರದೆ, ಸಂಪಾದಕರಾದ ಮಾನ್ಯ “ಬೂಬ” ಅವರ ಚೇಂಬರ್ ನಿಂದ, ಅದರಲ್ಲೂ ಅವರ ಕುರ್ಚಿಯಿಂದ, ಅದರಲ್ಲೂ ಅವರ ಅವರು ಕೂತ ಕುರ್ಚಿಯ ಕೆಳಗಿನಿಂದ  ಬರುತ್ತಿತ್ತಂತೆ. ಮೂರ್ಛೆ ತಪ್ಪಿ ಬಿದ್ದಿದ್ದ ಬೂಬರನ್ನು ಪ್ರಥಮ ಚಿಕಿತ್ಸೆಯ ನಂತರ
ಹೆಚ್ಚಿನ ವಿಚಾರಣೆ ನಡೆಸಲಾಗಿ ಸಂಪಾದಕರು ಫೇಸ್ಬುಕ್ ನಲ್ಲಿದ್ದ ನಮೋ ಅಭಿಮಾನಿಗಳು, ಮುಖ್ಯವಾಗಿ ನಿಲುಮೆಯಲ್ಲಿ ಮೋದಿ ಪರ ಇರುವ ಹವಾವನ್ನು ಮತ್ತು ಸಂಪಾದಕರಿಗೆ ನಮೋ ಅಭಿಮಾನಿಗಳು  ಮಂಗಳಾರತಿ ತೆಗೆದಿದ್ದನ್ನು ನೋಡಿ ತಾಳಲಾಗದೆ , ಹೊಟ್ಟೆ ಉರಿದುಕೊಂಡು, ಆ ಉರಿಯು ಶಾಖವಾಗಿ, ತಳ ಸೇರಿ, ಸುಟ್ಟು ಕರಕಲಾಗಿ, ಕೆಟ್ಟ ಹೊಗೆಯಾಗಿ ಹೊರಗೆ ಬರುತ್ತಿತ್ತು ಎಂದು ತಿಳಿದು ಬಂದಿದೆ.
ತಕ್ಷಣ ಕಾರ್ಯಪ್ರವೃತರಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸಂಪಾದಕರ ತಳಕ್ಕೆ ಒಂದಷ್ಟು ನೀರು ಹೊಡೆದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ... 
ಈ ಬಗ್ಗೆ ಬಡಾಯಿ ನ್ಯೂಸ್ ಜೊತೆ ಮಾತನಾಡಿರುವ ಆಸ್ಪತ್ರೆಯ ಹೆಸರಾಂತ ವೈದ್ಯ ಡಾಕ್ಟರ್ ಪಟ್ಟಾಭಿ ವಿಜಯ್ ಮಲ್ಯ ಅವರು , ಈ ತರಹದ ಖಾಯಿಲೆಯನ್ನು ವೈಜ್ಞಾನಿಕ ಭಾಷೆಯಲ್ಲಿ “ ಹೆತ್ಲಾಂಡಿ ಕ್ಯುಲೋಸಿಸ್” ಎಂದು ಕರೆಯುತ್ತಾರೆ ಎಂದು ವಿವರಿಸಿದರು... ಈ ಕಾಯಿಲೆಯು ಇತ್ತೀಚಿಗೆ ಬುದ್ದಿಜೀವಿಗಳಲ್ಲಿ ಸಾಮಾನ್ಯವೆಂದು ಆದರೆ ನಮ್ಮ “ಬೂಬ” ಅವರು ಕಾಯಿಲೆಯ ಗರಿಷ್ಟ ಮಟ್ಟ ತಲುಪಿದರಿಂದ ಇಷ್ಟು ಹೊಗೆ ಬರಲು ಕಾರಣ ಎಂದು ತಿಳಿಸಿದರು. ಈ ಕಾಯಿಲೆಯೇ ತಡೆಗಟ್ಟಲು ಯಾವುದೇ ಔಷದ ಸದ್ಯಕ್ಕೆ ಲಭ್ಯವಿಲ್ಲ ಈ ಸಲದ ಲೋಕಸಭಾ ಚುನಾವಣೆಯ ನಂತರ ಇದು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ತಿಳಿಸಿದ್ದಾರೆ
ಘಟನೆಯಿಂದ ಮಾನ್ಯ “ಬೂಬ” ಅವರ ತಳಕ್ಕೆ ಗಂಭೀರ ಗಾಯಗಳಾಗಿದ್ದು , ತಳವು ತನ್ನ ಆಕಾರವನ್ನೇ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ... ಚಿಕಿತ್ಸೆ ಮುಂದುವರೆದಿದ್ದು ಕೆಲವು ದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲು ನಿರ್ಧರಿಸಲಾಗಿದೆ  ಹಾಗೂ ಕಡ್ಡಾಯವಾಗಿ ಮನುಷ್ಯರು ತಿನ್ನುವ ಪದಾರ್ಥಗಳನ್ನು ಮಾತ್ರ ತಿನ್ನಬೇಕೆಂದು “ಬೂಬ“ ಅವರಿಗೆ ಸೂಚಿಸಲಾಗಿದೆ ಎಂದರು.
ಖಂಡನೆ : ಈ ಘಟನೆಯನ್ನು ಅತ್ಯಂತ ಖೇದಕರ ಎಂದು “ಕರ್ನಾಟಕ ಕಾರ್ಯ ಮರೆತ ಪತ್ರಕರ್ತರ ಒಕ್ಕೂಟ” ಖಂಡಿಸಿದೆ ... ಒಬ್ಬ ಸಂಪಾದಕನ ತಳ ಸುಡುವ ಮಟ್ಟಕ್ಕೆ ಅವರನ್ನ ಉರಿಸುವುದು ಅತ್ಯಂತ ಅಮಾನವೀಯ ಇದು ಮೋದಿ ಅಭಿಮಾನಿಗಳ ದುಷ್ಕೃತ್ಯದ ಪರಮಾವದಿ ಎಂದು ಕಿಡಿಕಾರಿದ್ದಾರೆ , ಈ ಬಗ್ಗೆ ಚರ್ಚಿಸಲು ರಾತ್ರಿ ೯.೩೦ ಕ್ಕೆ ಕಾನಿಷ್ಕ ಬಾರ್ ನಲ್ಲಿ ಸಭೆ ಕರೆಯಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಒಕ್ಕೂಟ ತಿಳಿಸಿದೆ.
ಶ್ರದ್ದಾಂಜಲಿ : ವಿಷಯ ತಿಳಿದ ನಮೋ ಬ್ರಿಗೆಡ್ ನ ಕಾರ್ಯಕರ್ತರು ಮಂಗಳೂರಿನಲ್ಲಿ  “ಬೂಬ” ಅವರ ತಳಕ್ಕೆ ಶ್ರದ್ದಾಂಜಲಿ ಕೋರಿದ್ದಾರೆ ಎಂದು ತಿಳಿದು ಬಂದಿದೆ....
ಬಡಾಯಿ ಕ(ತ)ಳಕಳಿ : ಬಡಾಯಿ ನ್ಯೂಸ್ ಇಂತಹ ಹೀನ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ, ಕ್ಯಾತ ಸಂಪಾದಕರ ಕಥೆ ಹೀಗಾದರೆ ಸಣ್ಣ ಪುಟ್ಟ ಪತ್ರಕರ್ತರ ಸ್ಥಿತಿಯ ಬಗ್ಗೆ ಬಡಾಯಿ ನ್ಯೂಸ್ ಕ(ತ)ಳವಳ ವ್ಯಕ್ತಪಡಿಸುತ್ತಿದೆ ... ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ “ಬಡಾಯಿ ನ್ಯೂಸ್” ಆಗ್ರಹಿಸುತ್ತದೆ....
ಇತ್ತೀಚಿಗಷ್ಟೇ “ಬಡಾಯಿ ನ್ಯೂಸ್” ನಲ್ಲಿ ಮಾನ್ಯರ ಸಂದರ್ಶನ ಪ್ರಕಟವಾಗಿದ್ದು ಸ್ಮರಿಸಬಹುದು...   


ವಿಶೇಷ ಸೂಚನೆ : ಇದನ್ನ ಓದಿದ ಮೇಲೆ ಯಾರದಾದರೂ ತಳ ಸುಟ್ಟರೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚಕ್ಕೆ “ಬಡಾಯಿ ನ್ಯೂಸ್” ಜವಾಬ್ದಾರರಾಗುವುದಿಲ್ಲ.

1 ಕಾಮೆಂಟ್‌: