ಬುಧವಾರ, ಆಗಸ್ಟ್ 28, 2013

ವಿಜಯಕರ್ನಾಟಕವೇ ನಿನ್ನ ನಿರ್ಜ್ಜಲತೆಗೆ ನನ್ನ ದೊಡ್ಡ ನಮಸ್ಕಾರ ...

ಇಂದಿನ ವಿಜಯಕರ್ನಾಟಕ ದ (೨೧.೦೬.೨೦೧೩ ) ಮೇಲೆ ಕಣ್ಣಾಡಿಸಿದೆ , ಒಂದು ಕ್ಷಣ ದಂಗಾಗಿ ಬಿಟ್ಟೆ. ಪಿ ಮಹಮ್ಮದ್ ಹೆಸರಿನ ಅಡಿ ಪ್ರಕಟವಾಗಿದ್ದ ವ್ಯಂಗ್ಯ ಚಿತ್ರ ಒಂದು ಕ್ಷಣ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಇಂತಹ ಕೀಳು ಅಭಿರುಚಿಯ ವ್ಯಂಗ್ಯ ಚಿತ್ರವನ್ನ ಮಹಮ್ಮದ್ ಅಂತವರು ಬರೆಯುತ್ತಾರೆಯೇ ..? ಅನುಮಾನದಿನದ ಕಣ್ಣು ಉಜ್ಜಿಕೊಂಡು ನೋಡಿದೆ , 
ಖಂಡಿತವಾಗಿಯೂ ಅದು ಮಹಮ್ಮದ್ ಅವರದ್ದೇ ಆಗಿತ್ತು. ಉತ್ತರಖಂಡಕ್ಕೆ ಪ್ರವಾಸಕ್ಕೆ  ಹೋಗಿ ವಾಪಾಸು ಬರಲಾರದೆ, ಸಾವು ಬದುಕಿನ ನಡುವೆ ಹೋರಾಡುತ್ತಿರುವ ಶೋಭಾ ಕರಂದ್ಲಜೆಯವರನ್ನು ಅಪಹಾಸ್ಯ ಮಾಡುತ್ತಿರುವ ವ್ಯಂಗ್ಯ ಚಿತ್ರ .... ಛೆ ಮಹಮ್ಮದ್ ರಿಗೆ ವ್ಯಂಗ್ಯ ಚಿತ್ರ ರಚಿಸಲು ಬೇರೆ ವಿಷಯವೇ ಸಿಗಲಿಲ್ಲವೇ .... ಕಷ್ಟದ ಪರಿಸ್ತಿಯಲ್ಲಿ ಒದ್ದಾಡುತ್ತಿರುವ ಅಸಹಾಯಕ ಮಹಿಳೆಯೇ ಬೇಕಿತ್ತೆ ಅವರ ಚಿತ್ರಕ್ಕೆ ವಸ್ತು ಆಗಲು ?... ಆಕೆ ಯಾರೇ ಆಗಿರಲಿ , ಆಕೆಯ ಹಿನ್ನಲೆ ಏನೇ ಇರಲಿ , ಇಂಥಹ ಸ್ಥಿತಿಯಲ್ಲಿ ಇರುವ ಆಕೆಯ ಬಗ್ಗೆ ಸಹಾನುಭೂತಿ ಇರಬೇಕೆ ಹೊರತು ... ಆಕೆಯ ಅಸಹಾಯಕ ಪರಸ್ಥಿತಿಯನ್ನು  ನಗೆಪಾಟಿಲಿನ ವಿಷಯವಾಗಿ ಮಾಡಬಾರದು ಅಲ್ಲವೇ ?. ಆಕೆಯ ಬದುಕಿನ ಹೋರಾಟವನ್ನು, ಯಡಿಯೂರಪ್ಪನವರ ರಾಜಕೀಯ ಹೋರಾಟಕ್ಕೆ ಹೊಲಿಸುವಂತಹ ಬಾಲಿಶರಾದರಲ್ಲ ಮಹಮ್ಮದರು ಅನ್ನೋ ನೋವು ತುಂಬಾ ಕಾಡುತ್ತಿದೆ. ಬಹುಶ ತಮ್ಮ ಅಕ್ಕನೋ ತಂಗಿಯೋ ಈ ಪರಸ್ಥಿತಿಯಲ್ಲಿ ಇದ್ದಿದ್ದರೆ ಅವರ ಬಗ್ಗೆಯೂ ಹೀಗೆ ಬರೆಯುತ್ತಿದ್ದಾರೆ....?
ಮಹಮ್ಮದ್ ರು ಖಂಡಿತವಾಗಿಯೂ ಪ್ರಜಾವಾಣಿಯಲ್ಲಿ ಹೀಗೆ ಇರಲಿಲ್ಲ , ಕೇವಲ ವ್ಯಂಗ್ಯಚಿತ್ರದಿಂದ ಲಕ್ಷಾಂತರ ಜನರ ಅಭಿಮಾನ ಗಳಿಸಿದವರು. ಇತ್ತೀಚಿನ ಅವರ ಮೋದಿ ಫೋಭಿಯ ಅವರ ಸೃಜನಶೀಲತೆಯನ್ನ ಹಾಳುಮಾಡುತ್ತಿರುವುದು ಖಂಡಿತ. ಇಡಿ ದೇಶದಲ್ಲಿ ಮೋದಿಯನ್ನು ಬಿಟ್ಟು ಬೇರೆ ಯಾವ ವಿದ್ಯಮಾನವೂ ಅವರ ಗಮನ ಸೆಳೆಯುತ್ತಿಲ್ಲ... ಪರಿಪೂರ್ಣ ಮೋದಿ “ಹಿಂಬಾಲಕರಾಗಿ” ಹೋಗಿರುವ ಅವರು ಕಳೆದುಕೊಳ್ಳುತ್ತಿರುವುದು ಅವರ ಕ್ರಿಯಾಶೀಲತೆಯನ್ನು ಮತ್ತು ಜನರ ಅಭಿಮಾನವನ್ನು. ಒಬ್ಬ ಮಹಿಳೆಯ ಅಸಹಾಯಕ ಪರಿಸ್ಥಿಯನ್ನು ವ್ಯಂಗಕ್ಕೆ ಬಳಸುವಷ್ಟು ಅವರ ಕ್ರಿಯಾಶೀಲತೆ ಜಡ ಹಿಡಿದಿದೆ ಅಂದರೆ ಒಬ್ಬ ಅವರ ಅಭಿಮಾನಿಯಾಗಿ ನನಗೆ ತುಂಬಾ ಬೇಸರ ತರುವ ವಿಷಯ...

ಇನ್ನು ವಿಜಯಕರ್ನಾಟಕ ಪತ್ರಿಕೆ ಯು ಎಡಬದಿಯಲ್ಲಿ ಇಂತಹ ವ್ಯಂಗ್ಯಚಿತ್ರ ಪ್ರಕಟಿಸಿ ಅದೇ ಪುಟದ ಬಲಬದಿಯಲ್ಲಿ ಗ್ರೌಂಡ್ ರಿಪೋರ್ಟ್ ಹೆಸರಲ್ಲಿ ಅದೇ ಶೋಭಾ ಕರಂದ್ಲಾಜೆ ಪಡುತ್ತಿರುವ ಯಾತನೆಯ ಬಗ್ಗೆ ಸಂದರ್ಶನ ಪ್ರಕಟಿಸಿದ್ದಾರೆ .... ವಿಜಯಕರ್ನಾಟಕವೇ ನಿನ್ನ ನಿರ್ಜ್ಜಲತೆಗೆ ನನ್ನ ದೊಡ್ಡ ನಮಸ್ಕಾರ ...

1 ಕಾಮೆಂಟ್‌:

  1. Even I have similar observations on PM. I have questioned myself many a times, why a good cartoonist like him is doing this? reason is as you have rightly pointed out- modi-phobia. Also, to join the league of intellectual modi bashers' league. - TuLuva

    ಪ್ರತ್ಯುತ್ತರಅಳಿಸಿ