ಬುಧವಾರ, ಆಗಸ್ಟ್ 28, 2013

ಬಡಾಯಿ ನ್ಯೂಸ್ : ಬಿ ಎಂ ಬಷೀರ್ ಪ್ರಶಸ್ತಿ

ಕಪೋಲ ಕಲ್ಪಿತ, ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳು ವರದಿಗಳಿಗಾಗಿ ನೀಡಲಾಗುವ ೨೦೧೨-೧೩ ನೇ ಸಾಲಿನ ಬಿ ಎಂ ಬಷೀರ್ ಪ್ರಶಸ್ತಿಯನ್ನು ಶ್ರೀಯುತ ನವೀನ ಸೂರಿಂಜೆ ಅವರಿಗೆ ನೀಡಲಾಗಿದೆ. ಭಟ್ಕಳದ ಅಬ್ದುಲ್ ನಾಸಿರ್ ಮದನಿ ಪ್ರತಿಷ್ಠಾನ ಕೊಡ ಮಾಡುವ ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಜನಾರ್ಧನ ಪೂಜಾರಿಯವರು ತಮ್ಮ ಅಮೃತ ಹಸ್ತದಿಂದ ನೀಡಲಿದ್ದಾರೆ ಎಂದು ಪ್ರತಿಷ್ಟಾನದ ಸಂಚಾಲಕರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ವಿಜೇತ ಸೂರಿಂಜೆಯವರು ಸುಳ್ಳು ವರದಿಯಲ್ಲಿ ಬಹಳ ನೈಪುಣ್ಯತೆ ಹೊಂದಿದ್ದು... ಅದರಲ್ಲಿಯೂ ಮಣಿಪಾಲ್ ಅತ್ಯಾಚಾರ ಪ್ರಕರಣದಲ್ಲಿ ಭಜರಂಗ ದಳಕ್ಕೆ ಕೆಟ್ಟ ಹೆಸರು ತರಲು ಮಾಡಿದ ಪ್ರಯತ್ನ ಗಮನಾರ್ಹವಾಗಿತ್ತು . ಭಜರಂಗದಳದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಯಾರೋ ಕಾರ್ಯಕರ್ತರ ಮುಖ ಮಾರ್ಕ್ ಮಾಡಿ , ಇದು ಅತ್ಯಾಚಾರಿಯ ಅಣ್ಣ ಎಂದು ಇಡಿ ಕರ್ನಾಟಕವನ್ನು ಒಂದು ದಿನದ ಮಟ್ಟಿಗೆ ಮಂಗ ಮಾಡಿದ್ದು ವಿಶೇಷವಾದ ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು. ಅಲ್ಲದೆ ಅದು ಸುಳ್ಳು ಅಂತ ಗೊತ್ತಾದ ಮೇಲು ಯಾವುದೇ ತರಹ ಧೈರ್ಯಗುಂದದೆ, ಮಾನ ಮರ್ಯಾದೆಯನ್ನು ತೋರ್ಪಡಿಸದೆ ಪತ್ರಿಕಾ ದಿನದ ಶುಭಾಶಯ ಕೋರುವ ಮೂಲಕ ತಮ್ಮ ಪತ್ರಿಕಾ ಭಂಡತನವನ್ನು ಪ್ರದರ್ಶಿಸಿದ್ದಾರೆ. ಈ ಎಲ್ಲ ವಿಷಯವನ್ನು ಗಮನಿಸಿದ ಮದನಿ ಪ್ರತಿಷ್ಠಾನವು ಅವರಿಗೆ ಬಿ ಎಂ ಬಷೀರ್ ಪ್ರಶಸ್ತಿಯನ್ನು ನೀಡಿದೆ ಎಂದು ಸಂಚಾಲಕರು ತಿಳಿಸಿದರು.
ಈ ಬಗ್ಗೆ ಮಾತಾಡಿದ ಸೂರಿಂಜೆ ಯವರು ಬಷೀರ್ ಹೆಸರಿನ ಪ್ರಶಸ್ತಿ ತನಗೆ ಸಿಕ್ಕಿದ್ದು ತುಂಬಾ ಸಂತೋಷವಾಗಿದೆ ಎಂದು ಬಷೀರ್ ಅವರು ಹೇಳಿದಷ್ಟು ಸುಳ್ಳು ಮತ್ತು ಹಚ್ಚಿದ ಬೆಂಕಿಯ ಅರ್ಧದಷ್ಟು ತಾನು ಮಾಡಿದರು ತನ್ನ ಬಾಳು ಸಾರ್ಥಕ ಎಂದು ಹೇಳಿಕೊಂಡರು.
ಈ ಬಗ್ಗೆ ತಮ್ಮ ಸಂತಸ ಹಂಚಿಕೊಂಡ ಬಷೀರ್ ರು, ನವೀನರ ವಿಶೇಷವಾದ ಪ್ರತಿಭೆ ಹೊಗಳುತ್ತಾ ಮುಂದೊಂದು ದಿನ ಪರ್ವೇಜ್ ಮುಷರಫ್ ರ ಮಾವನ ಮಗನೆ ಪ್ರಮೋದ್ ಮುತಾಲಿಕ್ ಎಂದು ಸೂರಿಂಜೆ ನಿರೂಪಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ವರದಿಗಾರ : ಮುದ್ದೆಶ್, ಬಡಾಯಿ  ನ್ಯೂಸ್
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ