ಬುಧವಾರ, ಅಕ್ಟೋಬರ್ 7, 2015

ಗೌರಿ ಲಂಕೇಶ್, ಪ್ರತಿಭಾ ನಂದಕುಮಾರ್ ಮತ್ತು ಇತ್ಯಾದಿ ...

ಯಾರಾದರು ಇವತ್ತಿನ (06.10.2015) ಚಂದನ ಚಾನೆಲ್ಲಿನ ಬೆಳಗು ಕಾರ್ಯಕ್ರಮ ನೋಡಿಲ್ಲ ಅಂದರೆ ಖಂಡಿತವಾಗಿ ಅವರು ನತದೃಷ್ಟರು ಅಂತಲೇ ಅರ್ಥ , ಅಂತಹದು ಏನಿತ್ತು ಅಂದ್ರೆ ಕರ್ನಾಟಕದ ಏಕೈಕ ಸೌಹಾರ್ದಗಿತ್ತಿ, ಗೌರಿ ಲಂಕೇಶ್ ರ ಸಂದರ್ಶನ , ನಡೆಸಿಕೊಟ್ಟವರು ಯಾರು ಅಂದ್ರೆ ಜಗತ್ತಿನ ಸಕಲ ವಿದ್ಯಮಾನಕ್ಕೂ , ತನ್ನ ಸ್ವಂತ ಅಭಿಪ್ರಾಯ ಹೊಂದಿರುವ, ಸಂದರ್ಶನ ನಡೆಸಲೆಂದೇ ಜನ್ಮ ತಳೆದಂತಿರುವ ಪ್ರತಿಭಾ ನಂದಕುಮಾರ್.
ಬಹುಶ ಇಂತಹಂದೊಂದು ಸೊಗಸಾದ ಸಂದರ್ಶನ ನಾನು ಮೊದಲು ನೋಡಿದ್ದೇ ಇಲ್ಲ , ಅಗಸನೊಬ್ಬ ತನ್ನ ಸ್ವಂತ ಕತ್ತೆಯನ್ನು ಕೆರೆ ಮಧ್ಯ ನಿಲ್ಲಿಸಿಕೊಂಡು , ನೀರಲ್ಲಿ ಅದ್ದಿ ಅದ್ದಿ ತೊಳೆಯುತ್ತಿದ್ದರೆ , ತನ್ನ ತೊಳೆಯುವ ಮಾಲಿಕನ ನೆಕ್ಕುಲು ಪ್ರಯತ್ನಿಸುವ ಕತ್ತೆ , ಇವರಿಬ್ಬರ ಈ ಜುಗಲಬಂದಿಯನ್ನ ದೂರದಿಂದ ನೀವು ನೋಡುತ್ತಿದ್ದರೆ ಆಗುವಂತದ್ದೆ ರೋಮಾಂಚನ , ಈ ಸಂದರ್ಶನ ನೋಡುವಾಗ ನನಗೆ ಆಗುತ್ತಿತ್ತು ಅಂದರೆ ಖಂಡಿತ ಇದು ಅತಿಶಯೋಕ್ತಿ ಅಲ್ಲ .
ಮಾತುಮಾತಿಗೂ ಗೌರಿ ಯವರನ್ನ ಸಾಮಾಜಿಕ ಕಾರ್ಯಕರ್ತೆ ಅನ್ನುವ ಪ್ರತಿಭಾಕ್ಕ, ನೀವು ಕೂಡ ಹೋರಾಟಗಾರರೆ ಅಂತ ಪ್ರತಿಭಾಕ್ಕನ್ನ ರಮಿಸುವ ಗೌರಿ, ಖಂಡಿತ ಹೇಳ್ತಿನಿ , ನೀವು ಈ ಕಾರ್ಯಕ್ರಮ ನೋಡಿಲ್ಲ ಅಂದ್ರೆ ನತದೃಷ್ಟರೆ ಸರಿ.
ಆದರೆ ಇಂತಹ ಒಂದು ಅದ್ಭುತ ಸಂದರ್ಶನದಲ್ಲಿ ಪ್ರತಿಭಾಕ್ಕ ಒಂದು ದೊಡ್ಡ ಸುಳ್ಳೊಂದನ್ನು ಗೌರಿ ಕಡೆ ಒಗಾಯಿಸಿದರು, ಅದೇನಂದರೆ “ ಲಂಕೇಶ್ ಕಾಲವಾದ ನಂತರವೂ ನೀವು ಹೇಗೆ ಲಂಕೇಶ್ ಪತ್ರಿಕೆನ ಅದರ ಉತ್ತರಾಧಿಕಾರಿಯಾಗಿ ಯಶಸ್ವಿಯಾಗಿ ಹೇಗೆ ನಡೆಸುತ್ತಿದ್ದಿರಿ ಅಂತ “ , ತಮ್ಮ ಕಡೆ ಬಂದ ಸುಳ್ಳನ್ನು ಮುಲಾಜಿಲ್ಲದೆ ತಲೆ ಮೇಲೆ ಇಟ್ಟುಕೊಂಡ ಗೌರಿ , ತಾನು ಕನ್ನಡ ಬರೆಯಲು ಪಟ್ಟ ಕಷ್ಟ , ಪತ್ರಿಕೆ ನಡೆಸಲು ಪಟ್ಟ ಕಷ್ಟ, ಅದು ಇದು ಅಂತೆಲ್ಲ ಅಂದು, ಪಿ. ಲಂಕೇಶ್ ತೀರಿಹೋದ ನಂತರ ಮುಚ್ಚಬೇಕಂದಿದ ಪತ್ರಿಕೆಯನ್ನ, ಪಿ. ಲಂಕೇಶ್ ತೀರಿಹೋದ ೧೫ ವರ್ಷದ ನಂತರವೂ ಯಶಸ್ವಿಯಾಗಿ ನಡೆಸುತ್ತಿದ್ದೇನೆ ಅಂತ ಬೆನ್ನು ತಟ್ಟಿಕೊಂಡರು.
ಆದರೆ ಸತ್ಯ ಏನಂದರೆ ಗೌರಿ ಲಂಕೇಶ್ ನಡೆಸುತ್ತಿರುವುದು ಪಿ ಲಂಕೇಶ್ ನಡೆಸಿದ್ದ ಒರಿಜಿನಲ್ “ಲಂಕೇಶ್ ಪತ್ರಿಕೆ” ಅಲ್ಲ , ಅದು ಲಂಕೇಶ್ ಪತ್ರಿಕೆಯ ತರಹವೇ ಕಾಣುವ ಡೂಪ್ಲಿಕೇಟ್ “ ಲಂಕೇಶ್ ಪತ್ರಿಕೆ “ ಅದರ ಹೆಸರು "ಗೌರಿ ಲಂಕೇಶ್ ಪತ್ರಿಕೆ " ಅಂತ . ಆದರೆ ಈ ವಿಷಯನ ಗೌರಿ ಸಾರಾಸಗಟಾಗಿ ಮುಚ್ಚಿಟ್ಟರು. ಮಾತೆತ್ತಿದ್ದರೆ ಸ್ತ್ರೀ ಸಬಲೀಕರಣ ಅನ್ನೋ ಗೌರಿ ಲಂಕೇಶ್ , ಅಪ್ಪನ ಹೆಸರಿಲ್ಲದೆ ಪತ್ರಿಕೆ ನಡೆಸಲಾರೆ ಅನ್ನೋದನ್ನ ಹೇಳೋಕ್ಕೆ ನಾಚಿಕೊಂಡರು ಅನ್ಸುತ್ತೆ . ಅದೇನೇ ಇರಲಿ ಗೌರಿ, “ಲಂಕೇಶ್ ಪತ್ರಿಕೆ “ ಯಾ ಉತ್ತರಾಧಿಕಾರಿ ಅಲ್ಲ ಅನ್ನೋದು ಗೊತ್ತಿದ್ದೂ ಪ್ರತಿಭಾಕ್ಕ ಸುಳ್ಳು ಪ್ರಶ್ನೆ ಕೇಳಿದ್ದು ಒಂದು ಕಡೆಯಾದರೆ , ಆತ್ಮ ಸಾಕ್ಷಿ ಇಲ್ಲದೆ ತಾನೇ ಪತ್ರಿಕೆಯ ಉತ್ತರಾಧಿಕಾರಿ ಅಂತ ಸುಳ್ಳೇ ಬಡಾಯಿ ಕೊಚ್ಚಿಕೊಂಡ ಗೌರಿ ಲಂಕೇಶ್ ಇನ್ನೊಂದೆಡೆ . ಮೇಲೆ ಹೇಳಿದ ಅಗಸ ಕತ್ತೆಯ ಹೋಲಿಕೆ ನಿಮಗೆ ಈಗ ಮನದಟ್ಟಾಗಿರಬಹುದು.
ಆದರೆ ಇದೆಲ್ಲಕ್ಕಿಂತ ಇಂಟರೆಸ್ಟಿಂಗ್ ಕಥೆ ಅಂದರೆ , ಪಿ ಲಂಕೇಶ್ ತೀರಿ ಹೋದ ಮೇಲೆ “ಲಂಕೇಶ್ ಪತ್ರಿಕೆ” ಗಾಗಿ ನಡೆದ ಜಗಳದ ಕಥೆ. ಲಂಕೇಶ್ ರು ತೀರಿ ಹೋದ ನಂತರ ಸಂಪಾದಕಿ ಸ್ಥಾನದಲ್ಲಿ ಬಂದು ಕೂತ ಗೌರಿ ಮಾಡಿದ ಮೊಟ್ಟ ಮೊದಲ ಕೆಲಸ ಅಂದರೆ , ಮಲೆನಾಡಿನ ಕಾಡಿನಲ್ಲಿ ಅಲೆಯುತ್ತಿದ್ದ ನಕ್ಸಲರ ಬಗ್ಗೆ ಯದ್ವಾ ತದ್ವಾ ಹೊಗಳಿ ಬರೆದಿದ್ದು, ಮಲೆನಾಡಿನ ಕಾಡಿನಲ್ಲಿ ಬಂದೂಕು ಇಟ್ಟುಕೊಂಡು ಹಂದಿ, ಕಾಡುಬೇಕ್ಕು ಬೇಟೆ ಆಡುತ್ತಿದ್ದ ನಕ್ಸಲರನ್ನ , ಈ ಸಮಾಜದ ಉದ್ದಾರಕ್ಕೆ ಮೇಲಿಂದ ಉದುರಿ ಬಿದ್ದವರೆಂದು ವಾಮಚಗೊಚರ ಹೊಗಳಿ ಬರೆಯುತ್ತಿದ್ದ ಗೌರಿ ಯವರಿಂದಾಗಿ ಅತಿ ಹೆಚ್ಚು ಮುಜುಗರಕ್ಕೆ ಬಿದ್ದವನೆಂದರೆ ಗೌರಿಯ ಸ್ವಂತ ತಮ್ಮ ಇಂದ್ರಜಿತ್ ಲಂಕೇಶ್ . ಅಲ್ಲಿಂದ ಶುರುವಾಗಿದ್ದು , “ಲಂಕೇಶ್ ಪತ್ರಿಕೆ”ಯಾ ಮಾಲಿಕತ್ವಕ್ಕೆ ನಡೆದ ಕೋಳಿ ಜಗಳದ ಕತೆ. ಗೌರಿ ಯನ್ನ ಲಂಕೇಶ್ ಪತ್ರಿಕೆಯಿಂದ ತೊಲಗಿಸಬೇಕೆಂದು ಇಂದ್ರಜಿತ್ ಪಣ ತೊಟ್ಟಗಿತ್ತು .
ಯಾವಾಗ “ಲಂಕೇಶ್ ಪತ್ರಿಕೆ”ಯ ಸಂಪಾದಕಿ ಸ್ಥಾನದಲ್ಲಿ ಮುಂದುವರೆಯುವುದು ಸಾದ್ಯವಿಲ್ಲ ಎಂದು ಅರಿವಾಯಿತೋ, ರಾತ್ರೋರಾತ್ರಿ , ಕಂಪ್ಯೂಟರ್ , ಲ್ಯಾಪ್ಟಾಪ್ , ಪ್ರಿಂಟರ್ ಸಮೇತ ಗೌರಿ ಮಾಯವಾದರು , ಬೆಳಿಗ್ಗೆ ಬಂದು ಖಾಲಿ ಆಫೀಸ್ ನೋಡಿದ ಇಂದ್ರಜೀತ್ , ಅಕ್ಷರಶಃ ಗೌರಿ ಲಂಕೇಶ್ ವಿರುದ್ದ “ಕಂಪ್ಯೂಟರ್ ಕಳ್ಳಿ” ಅಂತ ಪೋಲಿಸ್ ಕಂಪ್ಲೇಂಟ್ ಕೊಟ್ಟರು . ಯಾವಾಗ ತನ್ನ ಮೇಲೆ ಇಂದ್ರಜಿತ್ ಕಂಪ್ಲೇಂಟ್ ಕೊಟ್ಟಿದ್ದಾರೆ ಅಂತ ಗೌರಿಗೆ ವಿಷಯ ತಿಳಿಯಿತೋ , ತಕ್ಷಣ ಇಂದ್ರಜಿತ್ ತನಗೆ ಗನ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರೆ ಎಂದು ಸ್ವಂತ ತಮ್ಮನ ಮೇಲೆ ಕೊಲೆ ಯತ್ನ ಕೇಸ್ ಜಡಿಸಿದರು.
ನಂತರ ಕೇಸ್ ಕತೆ ಏನಾಯ್ತೋ ಗೊತ್ತಿಲ್ಲ , ಒಂದಿದ್ದ “ಲಂಕೇಶ್ ಪತ್ರಿಕೆ “ ಈಗ ಎರಡಾಗಿ, ಸಮಸ್ತ ಕರ್ನಾಟಕದ ಬೋಂಡ ಬಜ್ಜಿಗಳ ಎಣ್ಣೆ ಹೀರುತ್ತಿವೆ .
ಹಾಗಾದ್ರೆ ಇದೆಲ್ಲ ಸಂದರ್ಶನ ನಡೆಸಿದ್ದ ಪ್ರತಿಭಾಕ್ಕಗೆ ಗೊತ್ತಿರಲಿಲ್ಲವೇ, ಗೊತ್ತಿದ್ದೂ ಲಂಕೇಶ್ ಪತ್ರಿಕೆಯಾ ಉತ್ತರಾಧಿಕಾರಿ ಪಟ್ಟ ಗೌರಿಗೆ ಕಟ್ಟಿದರೆ ಅನ್ನೋದು ಪ್ರಶ್ನೆ , ಪ್ರತಿಭಾಕ್ಕೆ ಇದೆಲ್ಲ ಗೊತ್ತಿರಲಿಲ್ಲ ಅನ್ನೋಣವೆಂದರೆ , ಎಷ್ಟಾದರೂ ಪ್ರತಿಭಾಕ್ಕ ಹುಳಿಮರಕ್ಕೆ ಅಂಟಿ ಕೊಂಡೆ ಇದ್ದ ಬಳ್ಳಿ , ಹುಳಿ ಮರದ ಉದುರಿಬಿದ್ದ ಹುಣಸೆ ಹಣ್ಣಿನ ಕಥೆ ಗೊತ್ತಿರಲಿಲ್ಲ ಅಂದರೆ ನಂಬೋಕ್ಕೆ ಕಷ್ಟ .
ಅದೇನೇ ಇರಲಿ ಸ್ವಂತ ತಮ್ಮನನ್ನೇ ಬಿಡದ ಗೌರಿ ನಮ್ಮನ್ನ ಬಿಟ್ಟಾಳೆಯೇ ಅನ್ನೋ ಅಂಜಿಕೆಯಿಂದಲೇ ಇಲ್ಲಿಗೆ ಇದನ್ನ ಮುಗಿಸೋಣ ..
ಜೈ ಮಾಕಾಳಮ್ಮ...

1 ಕಾಮೆಂಟ್‌:

  1. ಅಗಸನೊಬ್ಬ ತನ್ನ ಸ್ವಂತ ಕತ್ತೆಯನ್ನು ಕೆರೆ ಮಧ್ಯ ನಿಲ್ಲಿಸಿಕೊಂಡು , ನೀರಲ್ಲಿ ಅದ್ದಿ ಅದ್ದಿ ತೊಳೆಯುತ್ತಿದ್ದರೆ , ತನ್ನ ತೊಳೆಯುವ ಮಾಲಿಕನ ನೆಕ್ಕುಲು ಪ್ರಯತ್ನಿಸುವ ಕತ್ತೆ , ಇವರಿಬ್ಬರ ಈ ಜುಗಲಬಂದಿ

    ha ha ha........ :D

    ಪ್ರತ್ಯುತ್ತರಅಳಿಸಿ